Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ನಮ್ ಹೊಟ್ಟೆ ಮೇಲ್ಯಾಕೇ ಹೊಡೀತೀರಿ…?

ನಮ್ ಹೊಟ್ಟೆ ಮೇಲ್ಯಾಕೇ ಹೊಡೀತೀರಿ…?

ಮೂಗು ಹಿಡಿದ್ರೇ ಬಾಯಿ ತೆರೆಯುತ್ತೆ ಅನ್ನೋದು ನಿಜ. ಎಷ್ಟೇ ಹೇಳಿದ್ರೂ ಏನೇ ಡೆಡ್ ಲೈನ್ ಕೊಟ್ರೂ ಆಟೋಚಾಲಕರು, ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಯಾವಾಗ ಆರ್ ಟಿಒ ಪೊಲೀಸರ ಜತೆ ಸೇರಿ ರೇಡ್ ಮಾಡೋಕೆ ಶುರುವಾದರೋ ಆಗ ಆಟೋ ಚಾಲಕರಿಗೆ ಸರಿಯಾಗಿ ಬಿಸಿ ಮುಟ್ಟಿದೆ. ರೂಲ್ಸ್ ಫಾಲೋ ಮಾಡಿ, ಬೇಡ ಅನ್ನೋ ನಮ್ಮ ಸಮಸ್ಯೆಯನ್ನೂ ಕೇಳಿ ಅಂತಿವೆ ಆಟೋ ಸಂಘಟನೆಗಳು. ಹುಬ್ಬಳ್ಳಿ-ಧಾರವಾಡ ಪೊಲೀಸರು ಈಗ ಸಾಕಷ್ಟು ಸ್ಟ್ರಿಕ್ಟ್ ಆಗ್ಬಿಟ್ಟಿದಾರೆ. ವಾರದಿತ್ತೀಚಿಗಂತೂ ಅಪರಾಧಿಗಳಿಗಷ್ಟೇ ಅಲ್ಲ, ಟ್ರಾಫಿಕ್ ರೂಲ್ಸ್ ಮಾಡದವರಿಗೂ ತಾವೇನ್ ಅಂತ ತೋರಿಸಿದಾರೆ. ಇದರ ಪರಿಣಾಮವೇ ಇಲ್ನಿಂತಿರೋ ನೂರಾರು ಆಟೋಗಳು. ಪರ್ಮಿಟ್, ಆರ್ ಸಿ ಜತೆಗೆ ಡ್ರೈವಿಂದ್ ಲೈಸೆನ್ಸ್ ಇಲ್ಲದ ಆಟೋಗಳನ್ನ ಆರ್ ಟಿಒ ಜತೆಗೆ ಸೇರಿ ಪೊಲೀಸರು ಸೀಜ್ ಮಾಡ್ತಿದಾರೆ. ದಾಖಲೆಗಳು ಇಲ್ಲದ ಆಟೋಗಳನ್ನ ಸೀಜ್ ಮಾಡುವಂತೆ ಜಿಲ್ಲಾಧಿಕಾರಿ ಕೂಡ ಆದೇಶಿಸಿದ್ರು. ಸೂಕ್ತ ದಾಖಲೆಗಳು ಇಲ್ಲದ 500ಕ್ಕೂ ಹೆಚ್ಚು ಆಟೋಗಳನ್ನ ಈಗಾಗಲೇ ಜಪ್ತಿ ಮಾಡಲಾಗಿದೆ. ಆದ್ರೇ, ಆಟೋಗಳನ್ನ ನಂಬಿ ಬದುಕ್ತಿರೋ ಬಡವರಿಗೆ ತೊಂದರೆಯಾಗಿದೆ. ರೂಲ್ಸ್ ಗಳನ್ನ ಫಾಲೋ ಮಾಡೋದು ಸರಿ. ಆದ್ರೇ, ಆಟೋಚಾಲಕರು, ಮಾಲೀಕರು ಅನುಭವಿಸ್ತಿರೋ ಸಮಸ್ಯೆಗಳನ್ನೂ ಪರಿಗಣಿಸ್ಬೇಕಲ್ಲ ಅಂತ ಆಟೋ ಸಂಘಟನೆಗಳು ಪ್ರಶ್ನೆ ಎತ್ತಿವೆ. ಅಷ್ಟೇ ಅಲ್ಲ, ಅವಳಿನಗರದಲ್ಲಿ ಬರೀ ಆಟೋಚಾಲಕರಸ್ಟೇ ಕಾನೂನು ಮೀರಿದಾರಾ.. ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡೋ ಎಲ್ಲರಿಗೂ ಇದೇ ರೀತಿ ವಾಹನಗಳನ್ನ ಸೀಜ್ ಮಾಡ್ತಿದ್ದೀರಾ ಅಂತಿದಾರೆ ಆಟೋ ಯೂನಿಯನ್ ಗಳು.
ಬಾಬಾಜಾನ ಮುಧೋಳ, ಕಾರ್ಮಿಕ ಮುಖಂಡ
ಹುಬ್ಬಳ್ಳಿ-ಧಾರವಾಡದಲ್ಲಿ 15 ಸಾವಿರಕ್ಕೂ ಅಧಿಕ ಆಟೋಗಳಿವೆ. ಈ ಎಲ್ಲ ಆಟೋಚಾಲಕರಿಗೂ ದಾಖಲೆ ಪತ್ರಗಳನ್ನ ಹೊಂದಲು ಸಾಕಷ್ಟು ಕಾಲಾವಕಾಶ ನೀಡ್ಬೇಕಿತ್ತು. ಇದ್ದಕ್ಕಿದ್ದಂತೆಯೇ ಈ ರೀತಿ ರೇಡ್ ಮಾಡಿದ್ರೇ ಅವತ್ತು ದುಡಿದು ಅವತ್ತೇ ತಿನ್ನೋ ಎಷ್ಟೋ ಬಡವರ ಹೊಟ್ಟೆ ಮೇಲೆ ಕಾನೂನು ನೆಪ ಒಡ್ಡಿ ಯಾಕೆ ಹೊಡೆಯುತ್ತಿದ್ದೀರಿ ಅಸಮಾಧಾನ ಆಟೋಚಾಲಕರದಾಗಿದೆ. ಆದ್ರೇ, ಆರ್ ಟಿಒ ಹಾಗೂ ಪೊಲೀಸರು ಹೇಳೋದೇ ಬೇರೆ, ಈಗಾಗಲೇ ಒಂದೂವರೆ ತಿಂಗಳ ಹಿಂದೆನೇ ಎಲ್ಲ ಆಟೋಚಾಲಕರಿಗೂ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಆದ್ರೇ, ದಾಖಲೆ ಪತ್ರಗಳನ್ನ ಹೊಂದಿರೋ ಆಟೋಗಳನ್ನ ಸೀಜ್ ಮಾಡಲಾಗ್ತಿದೆ ಅಂತಿದಾರೆ ಪೊಲೀಸರು. ಮತ್ತೊಂದೆಡೆ ಇದೇ ಆಟೋ ಯೂನಿಯನ್ ಗಳು ಅನಧಿಕೃತ ಆಟೋಗಳ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ರು. ಈಗ ಅನಧಿಕೃತ ಆಟೋಗಳ ಮೇಲೆ ಕ್ರಮಕೈಗೊಂಡ್ರೇ ತಪ್ಪಿಲ್ಲ ಅಂತಿದಾರೆ ಪೊಲೀಸರು. ರೂಲ್ಸ್ ಏನೋ ಒಕೆ. ಆದ್ರೇ, 2015ರ ಬಳಿಕ ಈವರೆಗೂ ಆಟೋ ದರ ಪರಿಷ್ಕರಣೆಯಾಗಿಲ್ಲ. 3 ವರ್ಷದಿಂ ಜಿಲ್ಲಾಧಿಕಾರಿಗಳು ಆಟೋ ಯೂನಿಯನ್ ಗಳ ಜತೆ ಸಭೆ ನಡೆಸಿಯೇ ಇಲ್ಲ. 3 ವರ್ಷದ ಬಳಿಕ ಡೀಸೆಲ್, ಪೆಟ್ರೋಲ್ ದರ ಸಾಕಷ್ಟು ಹೆಚ್ಚಿದೆ. ಅವಳಿನಗರದ ರಸ್ತೆಗಳೂ ಹದೆಗೆಟ್ಟಿವೆ. ದರ ಪರಿಷ್ಕರಣೆಗೆ ಮನವಿ ಮಾಡಿದ್ರೂ ಕ್ಯಾರೆ ಎನ್ನದ ಡಿಸಿ ಸಾಹೇಬ್ರು ತಮ್ಮಂತವರ ಮೇಲ್ಯಾಕೆ ಈ ರೀತಿ ಪ್ರಹಾರ ಮಾಡ್ತಿದಾರೆ ಅಂತ ಆಟೋ ಯೂನಿಯನ್ ಗಳು ತಮ್ಮ ಅಳಲು ತೋಡಿಕೊಳ್ತಿದಾರೆ.
ದೇವಾನಂದ ಜಗಾಪುರ, ಪ್ರ.ಕಾರ್ಯದರ್ಶಿ, ಧಾರವಾಡ ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘ
ಇದೆಲ್ಲದರ ಮಧ್ಯೆಯೇ ಈಗ ಧಾರವಾಡ ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದ ನೇತೃತ್ವದಲ್ಲಿ ಆಟೋವಾಲಾಗಳು ಜಿಲ್ಲಾಧಿಕಾರಿಗೆ ತಮ್ಮ ಸಮಸ್ಯೆ ಮನವರಿಕೆ ಮಾಡಿಕೊಡಲು ಮುಂದಾಗಿದಾರೆ. ಕಾನೂನು ಚಲಾಯಿಸುವ ಮೊದಲು ದುಡಿದು ತಿನ್ನೋ ಆಟೋಚಾಲಕರ ಸಮಸ್ಯೆಗಳನ್ನೂ ಅರಿತುಕೊಳ್ಳಿ ಅಂತ ಮನವಿ ಮಾಡ್ತಿದಾರೆ. ಜಿಲ್ಲಾಧಿಕಾರಿಗಳು ಈಗ ಏನ್ ಕ್ರಮಕೈಗೊಳ್ತಾರೋ ನೋಡ್ಬೇಕು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!