Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ನಾಯಕನಾಗಿ ಮೊದಲ ಸರಣಿಯಲ್ಲೇ ಇತಿಹಾಸ ನಿರ್ಮಿಸುತ್ತಿರುವ ಶನಕಾ.

ನಾಯಕನಾಗಿ ಮೊದಲ ಸರಣಿಯಲ್ಲೇ ಇತಿಹಾಸ ನಿರ್ಮಿಸುತ್ತಿರುವ ಶನಕಾ.

ಲಾಹೋರ್ : ಅನನುಭವಿಗಳ ತಂಡದ ನೇತೃತ್ವವಹಿಸಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾದ ತಂಡದ ದಸುನ್ ಶನಕಾ ನಾಯಕನಾಗಿ ಪದಾರ್ಪಣೆ ಮಾಡಿದ ಸರಣಿಯಲ್ಲೇ ಪಾಕ್​ ತಂಡದ ವಿರುದ್ಧ 3-0ಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸಿ, ಧೋನಿ, ಮೈಕಲ್​ ಕ್ಲಾರ್ಕ್​ ದಾಖಲೆ ಸರಿಗಟ್ಟಿದ್ದಾರೆ.ಟಿ20 ತಂಡದ ನಾಯಕ ಮಲಿಂಗಾ ಭದ್ರತೆಯ ಕಾರಣ ಪಾಕ್​ ಪ್ರವಾಸದಿಂದ ಹೊರಗುಳಿದಿದ್ದರಿಂದ ಯುವ ಆಲ್​ರೌಂಡರ್​ ದಸುನ್ ಶನಕಾರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಲಂಕಾ ಯುವ ತಂಡ ಟಿ20 ಕ್ರಿಕೆಟ್​ನಲ್ಲಿ ನಂಬರ್​ ಒನ್​ ಸ್ಥಾನದಲ್ಲಿದ್ದ ಬಲಿಷ್ಠ ಪಾಕಿಸ್ತಾನವನ್ನು ಅವರ ನೆಲದಲ್ಲೆ 3-0ಯಲ್ಲಿ ಸೋಲಿಸಿ ಇತಿಹಾಸ ಬರೆದಿತ್ತು.ಪಾಕಿಸ್ತಾನದಲ್ಲಿ ಟಿ20 ಸರಣಿ ಗೆದ್ದ ಮೊದಲ ತಂಡ ಎಂಬ ಕಿರೀಟದ ಜೊತೆಗೆ ಶನಕಾ ಕೂಡ ಎಂಎಸ್ ಧೋನಿ ಮತ್ತು ಮೈಕಲ್ ಕ್ಲಾರ್ಕ್​ರೊಂದಿಗೆ ಸತತ 3 ಪಂದ್ಯ ಗೆದ್ದ ನಾಯಕ ಎಂದೆನಿಸಿಕೊಂಡರು. ಧೋನಿ ಟಿ20 ವಿಶ್ವಕಪ್​ ವೇಳೆ ಸತತ ಮೂರು ಟಿ20 ಪಂದ್ಯ ಗೆದ್ದಿದ್ದರು. ಆಸ್ಟ್ರೇಲಿಯಾದ ಮೈಕಲ್​ ಕ್ಲಾರ್ಕ್ ಕೂಡ ತಮ್ಮ ನಾಯಕತ್ವದ ಮೂರು ಪಂದ್ಯಗಳನ್ನು ಗೆದ್ದ ಶ್ರೇಯ ಹೊಂದಿದ್ದಾರೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!