Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ನಾಳೆ ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರಾರಂಭೋತ್ಸವ ..

ನಾಳೆ ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರಾರಂಭೋತ್ಸವ ..

Spread the love

ಹುಬ್ಬಳ್ಳಿ: ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ನ ಉದ್ಘಾಟನೆಯನ್ನು ನಗರದ ಗೋಕುಲ ರಸ್ತೆಯ ಡೆನಿಸನ್ ಹೋಟೆಲ್ ನ ಮಥುರಾ ಹಾಲ್‌ನಲ್ಲಿ ಇದೇ 24 ರಂದು ಸಂಜೆ. 5.30 ಕ್ಕೆ ಆಯೋಜಿಸಲಾಗಿದೆ ಎಂದು ಡಿ.ಬಿ.ಡಂಬಳ ಅವರು ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಉದ್ಯಮಿ ಸಿದ್ದಾರ್ಥ ಡಂಬಳ ಅವರು ಸ್ಟಾರ್ಟ್ ಅಪ್ ಮಾದರಿಯಲ್ಲಿ ಚಾಂಪಿಯನ್ಸ 11 ಎಂಟರ್ಟೈನ್ಮೆಂಟ್ ಪ್ರೈ. ಲಿಮಿಟೆಡ್‌ ಕಂಪನಿಯನ್ನು 2018 ರಲ್ಲಿ ಪ್ರಾರಂಭಿಸಿದ್ದು,ಉತ್ತರ ಕರ್ನಾಟಕ ಕ್ರಿಕೆಟ್ ಆಟಗಾರರು ಹಾಗೂ ಯುವ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಾರ್ಥ್ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗುವದು ಎಂದರು. ಫ್ಯಾಂಟಸಿ ಪ್ರಿಯರಿಗೆ ಇಷ್ಟವಾಗುವ ಹಾಗೂ ಕೌಶಲ್ಯಕ್ಕೆ ಕನ್ನಡಿ ಹಿಡಿಯುವಂತ ವೆಬ್ ಸೈಟ್ ಇದಾಗಿದೆ ಎಂದು ಅವರು ಹೇಳಿದರು.ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕ್ರೀಕ್ ನವ್ ಹೆಸರಿನ ಕ್ರೀಡಾ ಆಧಾರಿತ ವೆಬ್ ಸೈಟ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. ಜಗತ್ತಿನಲ್ಲಿ ನಡೆಯುವ ಎಲ್ಲ ಕ್ರಿಕೆಟ್ ಪಂದ್ಯ, ಆಟಗಾರರು, ವಿಶೇಷತೆಗಳು, ಅಂಕಿ ಅಂಶಗಳು ಹಾಗೂ ಪ್ರಸ್ತುತ ನಡೆಯುತ್ತಿರುವ ಲೈವಸ್ಕೋರ್ ಗಳ ಮಾಹಿತಿಯನ್ನು ಈ ವೆಬ್ ಮೂಲಕ ತಿಳಿಯಬಹುದಾಗಿದೆ ಎಂದು ತಿಳಿಸಿದರು. ಫ್ಯಾಂಟಸಿ ಕ್ರೀಡೆ ಕೇವಲ ಕೌಶಲ್ಯದ ಆಟವಾಗಿದ್ದು, ಇದು ಜೂಜಾಟವಲ್ಲ ಎಂದು ಪಂಜಾಬ ಹಾಗೂ ಹರಿಯಾಣ ಉಚ್ಚ ನ್ಯಾಯಾಲಯಗಳು ಸಹ ತೀರ್ಪು ನೀಡಿವೆ ಎಂದರು.ಈ ಸಂದರ್ಭದಲ್ಲಿ ಮಹೇಶ ಡಂಬಳ, ಸಿದ್ದಪ್ಪ ಡಂಬಳ, ಸಿದ್ದಾರ್ಥ ಡಂಬಳ, ಶಿವಕುಮಾರ, ಡಾ. ಭಾರತಿ ಉಪಸ್ಥಿತರಿದ್ದರು.

Check Also

ಹುಬ್ಬಳ್ಳಿಯಲ್ಲಿ ಮೀತಿಮಿರಿದ ಕಳ್ಳರ ಹಾವಳಿ: ಗಾಜು ಒಡೆದು ಉಪಕರಣ ದೋಚುವ ಕಳ್ಳರು

Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದ್ದು,ಇಷ್ಟು ದಿನ ಸರಗಳ್ಳತನ, ಬೈಕ್ ಕಳ್ಳತನ, ಕಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!