Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ನಿಜವಾದ ನೆರೆ ಸಂತ್ರಸ್ತರಿಗೆ ಪರಿಹಾರ ದೊರೆಯದೇ ಹೋದರೆ ಹೋರಾಟ : ಎಸ್ ಯುಸಿಐ

ನಿಜವಾದ ನೆರೆ ಸಂತ್ರಸ್ತರಿಗೆ ಪರಿಹಾರ ದೊರೆಯದೇ ಹೋದರೆ ಹೋರಾಟ : ಎಸ್ ಯುಸಿಐ

ಹುಬ್ಬಳ್ಳಿ:- ಉತ್ತರ ಕರ್ನಾಟಕದ ನಿರಾಶ್ರಿತರಿಗೆ ಕೇಂದ್ರ ಸರ್ಕಾರದಿಂದ ಬಂದಿರುವ ಪರಿಹಾರದಲ್ಲಿ ಅವ್ಯವಹಾರಗಳು ನಡೆಯುವ ನೀರಿಕ್ಷೆ ಇದೆ, ಈ ಹಿನ್ನಲೆಯಲ್ಲಿ ಸರ್ಕಾರ ನೆರೆ ಸಂತ್ರಸ್ತರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ದಪಡಿಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕೆಂದು ಎಸ್.ಯು.ಸಿ.ಐ ನ ರಾಮಾಂಜನಪ್ಪ ಆಲ್ದಳ್ಳಿ ಆಗ್ರಹಿಸಿದರು. ‌‌‌‌‌‌‌ ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆ ಪ್ರವಾಹಕ್ಕೆ ತುತ್ತಾಗಿದ್ದು, ಜನರ ಜೀವನ ಅಂತತ್ರಗೊಂಡಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದೇ ತಮ್ಮ ಅಧಿಕಾರದ ಕಿತ್ತಾಟದಲ್ಲಿ ತೊಡಗಿಕೊಂಡು ನೆರೆ ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಿದವು. ಇದೀಗ ಕೇಂದ್ರದಿಂದ ಮಧ್ಯಂತರ ಪರಿಹಾರ ಬಂದಿದ್ದು, ಅದರಲ್ಲೂ ಅವ್ಯವಹಾರಗಳು ನಡೆಯುವ ನೀರಿಕ್ಷೆ ಇದೆ, ಈ ಹಿನ್ನಲೆಯಲ್ಲಿ ಸರ್ಕಾರ ನೆರೆ ಸಂತ್ರಸ್ತರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ದಪಡಿಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದರು. ರಾಜ್ಯದಲ್ಲಿ ಕಳೆದ 45 ವರ್ಷಗಳಿಂದ ಕಂಡು ಕೇಳದ ಬೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದು, ಜನರ ಬದುಕು ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ನೆರೆ ಹಾವಳಿ ಬಂದಾಗ ಸರ್ಕಾರ ನೆರೆ ಬಂದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಅಧಿಕಾರದ ಹಪಾಹಪ್ಪಿಯಿಂದ ವಿಧಾನದಸಭೆಯಲ್ಲಿ ಟೀಕಾಣಿ ಹುಡಿದವು. ಜನರನ್ನು ಆಧುನಿಕ ಗುಲಾಮರಂತೆ ನೋಡಿದವು ಎಂದು ಆರೋಪಿಸಿದರು. ಇನ್ನೂ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕುದುರೆ ವ್ಯಾಪಾರ ಮಾಡಿ ಬೀಳಿಸಲು ಇದ್ದ ಉತ್ಸಹ ನೆರೆ ಸಂತ್ರಸ್ತರಿಗೆ ಸ್ಪಂದಿಸುವಲ್ಲಿ ಇಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿ 22 ದಿನ ಕಳೆದರು ಕ್ಯಾಬಿನೆಟ್ ರಚನೆ ಮಾಡಲಿಲ್ಲ. ಈಗಲೂ ಪೂರ್ಣ ಪ್ರಮಾಣದ ಕ್ಯಾಬಿನೆಟ್ ರಚನೆ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದರು ಜನರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಇನ್ನೂ ಸಿಎಂ ಯಡಿಯೂರಪ್ಪ ಅವರು ಅಧಿಕಾರ ಬಂದ ನಂತರ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯವಾಗಿದ್ದು, ರಾಜ್ಯದಲ್ಲಿ ಉಂಟಾದ ನೆರೆ ಪ್ರವಾಹಕ್ಕೆ ಮಹಾರಾಷ್ಟ್ರ, ಕರ್ನಾಟಕದ ಸರ್ಕಾರಗಳೇ ನೇರವಾಗಿ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು. ಇನ್ನೂ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಪಟ್ಟಿ ಸಲ್ಲಿಸಿದ್ದರು ಅದನ್ನು ಕೇಂದ್ರದ ಬಿಜೆಪಿ ಸರ್ಕಾರ ತಿರಸ್ಕಾರ ಮಾಡಿದ್ದು, ಅವರ ಪಕ್ಷವೇ ಕರ್ನಾಟಕದಲ್ಲಿ ಇದ್ದರು ತಾರತಮ್ಯ ತೋರುತ್ತಿರುವುದು ಖಂಡನೀಯ. ಇದೀಗ ಕೇಂದ್ರದಿಂದ ಮಧ್ಯಂತರ 1200 ಕೋಟಿ ನೆರೆ ಪರಿಹಾರ ಬಂದಿದೆ ಎಂದು ಹೇಳಲಾಗುತ್ತಿದ್ದು, ಅದು ರಾಜ್ಯದ ಖಜಾನೆಗೆ ಬಂದಿದೆಯೋ ಬಿಟ್ಟಿದೆ ಗೊತ್ತಿಲ್ಲ. ಆದರೆ ನೆರೆ ಪರಿಹಾರ ಒದಗಿಸುವಲ್ಲಿಯೂ ಬ್ರಷ್ಟಾಚಾರದ ವಾಸನೆ ಸುಳಿಯುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಪಾರದರ್ಶಕವಾಗಿ ನಿಜವಾದ ನೆರೆ ಸಂತ್ರಸರ ಪಟ್ಟಿ ಮಾಡಿ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಎಸ್.ಯು.ಸಿ.ಐ ಪಕ್ಷದ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಲಕ್ಷ್ಮಣ ಜಡಗನ್ನವರ, ಶರಣು ಗೋನವರ, ವಿಜಯಲಕ್ಷ್ಮಿ ಸೇರಿದಂತೆ ನೆರೆ ಸಂತ್ರಸ್ತರು ಇದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!