Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ನೀರವ್​ ಮೋದಿಗೆ ಆಸ್ತಿ ಜಪ್ತಿ

ನೀರವ್​ ಮೋದಿಗೆ ಆಸ್ತಿ ಜಪ್ತಿ

ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ಗೆ ಬಹುಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ, ವಜ್ರ ಉದ್ಯಮಿ ನೀರವ್​ ಮೋದಿಗೆ ಇಡಿ ಶಾಕ್ ಕೊಟ್ಟಿದೆ. ನೀರವ್​ ಮೋದಿಗೆ ಸೇರಿದ ಭಾರತದ ಹಾಗೂ ವಿದೇಶದಲ್ಲಿರುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ನ್ಯೂಯಾರ್ಕ್​​​ನಲ್ಲಿರುವ ಐಷಾರಾಮಿ ಅಪಾರ್ಟ್​​ಮೆಂಟ್​​, ವಜ್ರದ ಉಂಗುರಗಳು, ಚಿನ್ನದ ಬಳೆಗಳು ಸೇರಿದಂತೆ ಸುಮಾರು ₹637 ಕೋಟಿ ಮೌಲ್ಯದ ಆಭರಣಗಳನ್ನ ಸೀಜ್ ಮಾಡಲಾಗಿದೆ.
ಅಕ್ರಮ ಹಣ ಸಂಗ್ರಹ ತಡೆ ಕಾಯ್ದೆಯ(ಪ್ರಿವೆಂನ್ಷನ್ ಆಫ್​ ಮನಿ ಲಾಂಡರಿಂಗ್​ ಆ್ಯಕ್ಟ್​​) ಸೆಕ್ಷನ್ 5ರಡಿ ಸುಮಾರು 216 ಕೋಟಿ ಮೊತ್ತದ ಎರಡು ಸ್ಥಿರಾಸ್ತಿಗಳನ್ನ ಇಡಿ ಜಪ್ತಿ ಮಾಡಿದೆ. ಹಾಗೇ 278 ಕೋಟಿ ಹಣವಿರುವ 5 ಓವರ್​​ಸೀಸ್​​ ಬ್ಯಾಂಕ್​ ಅಕೌಂಟ್​​ ಜಪ್ತಿಯಾಗಿದೆ.  ₹22.69 ಕೋಟಿ ಮೊತ್ತದ ವಜ್ರದ ಉಂಗುರಗಳನ್ನು ಹಾಂಗ್​ಕಾಂಗ್​ನಿಂದ ಭಾರತಕ್ಕೆ ತರಲಾಗಿದೆ. ದಕ್ಷಿಣ ಮುಂಬೈನ 19.5 ಕೋಟಿ ಮೌಲ್ಯದ ಫ್ಲಾಟ್​ ಕೂಡ ಸೀಜ್ ಮಾಡಲಾಗಿದೆ.
ಕ್ರಿಮಿನಲ್​​ ಪ್ರಕರಣದಲ್ಲಿ ಭಾರತೀಯ ಸಂಸ್ಥೆಯು ವಿದೇಶಿ ಆಸ್ತಿಯನ್ನು ಜಪ್ತಿ ಮಾಡಿರುವ ಪ್ರಕರಣಗಳು ತುಂಬಾ ಕಡಿಮೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಆದಿತ್ಯ ನಾನಾವತಿ ವಿರುದ್ಧ ಇಂಟರ್​​ಪೋಲ್​ನಿಂದ ರೆಡ್​ ಕಾರ್ನರ್​ ನೋಟಿಸ್​ ಜಾರಿಯಾಗಿದೆ. ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ಗೆ ಬರೋಬ್ಬರಿ ₹12,600 ಕೋಟಿ ಹಣ ವಂಚನೆಯ ಆರೋಪ ಎದುರಿಸುತ್ತಿರುವ ನೀರವ್​ ಮೋದಿ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!