Breaking News
Hiring Reporter’s For more Information Contact Above Number 876 225 4007 . Program producer
Home / ರಾಜಕೀಯ / ನೆರೆ ವಿಚಾರದಲ್ಲಿ ರಾಜಕೀಯ ಸಲ್ಲದು :ಸಿದ್ದರಾಮಯ್ಯ ಗೆ ಶೆಟ್ಟರ್ ತಿರುಗೇಟು.

ನೆರೆ ವಿಚಾರದಲ್ಲಿ ರಾಜಕೀಯ ಸಲ್ಲದು :ಸಿದ್ದರಾಮಯ್ಯ ಗೆ ಶೆಟ್ಟರ್ ತಿರುಗೇಟು.

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ನೆರೆ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿಯಾಗಿ ಕಾಮೆಂಟ್ ಮಾಡೋದು ತಪ್ಪು ಎಂದು ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೆರೆ ಇದ್ದಾಗ ಕಣ್ಣು ನೋವು ಅಂತಾ ಬೆಂಗಳೂರಿನಲ್ಲಿ ಕುಳಿತುಕೊಂಡವರು ನೀವು. ಮೊದಲು ಆ ಬಗ್ಗೆ ವಿಚಾರ ಮಾಡಿ, ಸುಮ್ಮ ಸುಮ್ಮನೆ ಮಾತನಾಡೋದ ಅಲ್ಲ. ಎಡಿಎ ಹಾಗೂ ಯುಪಿಎ ಸರ್ಕಾರ ನೆರೆ ಪರಿಹಾರ ನೀಡಿದ ಹತ್ತು ಹದಿನೈದು ವರ್ಷಗಳ ಅಂಕಿ ಸಂಖ್ಯೆಗಳನ್ನು ನೋಡಿ. ನರೆ ಬಂದಾಗ ಯಾವ ಸರ್ಕಾರ ಸ್ಪಂದಿಸಿ ಎಷ್ಟು ಹಣ ನೀಡಿದೆ ಅನ್ನೋದನು ಎಂದು ವಾಗ್ದಾಳಿ ಮಾಡಿದ್ದಾರೆ. ಇನ್ನೂ ಕೇಂದ್ರದಿಂದ ಬಂದಿರುವ 1200 ಕೋಟಿ ಮಧ್ಯಂತರ ನೆರೆ ಪರಿಹಾರವನ್ನು ಸ್ವಾಗತಿಸುತ್ತೇನೆ. ಅಲ್ಲದೇ ನೆರೆ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದರು.

Share

About Shaikh BIG TV NEWS, Hubballi

Check Also

ಧರ್ಮೆಗೌಡ ಆತ್ಮಹತ್ಯೆ ಸ್ಥಳಕ್ಕೆ ಭೇಟಿ ನೀಡಿದ ಸಿ.ಟಿ. ರವಿ.

ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ತಡರಾತ್ರಿ 1.30ರ …

Leave a Reply

Your email address will not be published. Required fields are marked *

error: Content is protected !!