Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ನ್ಯಾಯಲಯದ ತಡೆಯಾಜ್ಞೆ ಇದ್ದರು ಕೂಡ ಡೊಮೆಸ್ಟಿಕ್ ವಿಚಾರಣೆ ನಡೆಸುತ್ತಿರುವುದು ಖಂಡನೀಯವಾಗಿದೆ: ಬಿಜಾಪುರ ಆರೋಪ

ನ್ಯಾಯಲಯದ ತಡೆಯಾಜ್ಞೆ ಇದ್ದರು ಕೂಡ ಡೊಮೆಸ್ಟಿಕ್ ವಿಚಾರಣೆ ನಡೆಸುತ್ತಿರುವುದು ಖಂಡನೀಯವಾಗಿದೆ: ಬಿಜಾಪುರ ಆರೋಪ

ಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ವೃತ್ತದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಕಾರ್ಯನಿರ್ವಹಸುತ್ತಿರುವ ಪಿ.ಜಿ.ಮುನವಳ್ಳಿ ಅವರು ಸಮನ್ಸ್ ಜಾರಿಗೊಳಿಸಿದ್ದು, ಆಡಳಿತ ಮಂಡಳಿಯು ಜಿಲ್ಲಾ ಉಪನಿಬಂಧಕರ ಆದೇಶವನ್ನು ಉಲ್ಲಂಘಿಸಿದೆ.ಅಲ್ಲದೇ ತಡೆಯಾಜ್ಞೆ ಜಾರಿಯಲ್ಲಿದ್ದರೂ ಕೂಡ ದುರುದ್ದೇಶದಿಂದ ಅರ್ಚಕರನ್ನು ತೆಗೆದುಹಾಕಲು ಹುನ್ನಾರ ನಡೆಸುತ್ತಿದ್ದಾರೆ ಅಷ್ಟೇ ಅಲ್ಲದೇ ತಡೆಯಾಜ್ಞೆ ಇದ್ದರು ಕೂಡ ಡೊಮೆಸ್ಟಿಕ್ ವಿಚಾರಣೆ ನಡೆಸುತ್ತಿದ್ದಾರೆ ಎಂದು ದತ್ತಾತ್ರೇಯ ಬಿಜಾಪುರ ಹಾಗೂ ಪೂರ್ಣಿಮಾ ಗುಡಿ ಆರೋಪಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಸಾಯಿಬಾಬಾ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಂಡುರಂಗ ಮುನವಳ್ಳಿ ಅವರು ಪ್ರಧಾನ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಕ್ಕೆ ಸಿ.ಅರ್.ಪಿ.ಪಿ ಕಲಂ 200ರ ಅಡಿಯಲ್ಲಿ ಸಾಯಿ ಆಡಳಿತ ಮಂಡಳಿಯ ವಿರುದ್ಧ ಜಿಲ್ಲಾ ಸಹಕಾರಿ ಉಪನಿಬಂಧಕರ ಆದೇಶದ ಉಲ್ಲಂಘನೆಗಾಗಿ ಖಾಸಗಿ ದೂರನ್ನು ಸಲ್ಲಿಸಿದ್ದರು ಎಂದರು. ನ್ಯಾಯಾಲಯವು ಜಿಲ್ಲಾ ಉಪನಿಬಂಧಕರ ಆದೇಶದ ಉಲ್ಲಂಘನೆಯು ಕಲಂ 28 ಸಿ ಸಹಕಾರಿ ಸಂಘಗಳ ಕಾಯ್ದೆಯನ್ವಯ ಅಪರಾಧವಾಗುತ್ತದೆ ಎಂದು ಪರಿಗಣಿಸಿ ಆಡಳಿತ ಮಂಡಳಿಯ ಸದಸ್ಯರುಗಳಾದ ಜೆ.ಕೆ‌.ಕೋಟ್ಕರ್, ಅಪ್ಪಾಸಾಹೇಬ ಚವ್ಹಾಣ, ಮಹಾದೇವ ಮಾಶ್ಯಾಳ, ಡಾ.ಟಿ.ಎಸ್.ಮೋಹನಕುಮಾರ, ನರಸಿಂಗಸಾ ರತನ, ಪಿ.ಎನ್.ಧೋಂಗಡಿ, ಬಸವರಾಜ ಅಂಬಳಿಮಠ, ವಿ.ಎನ್.ಧೋಂಗಡಿ, ಅನೀಲಕುಮಾರ ಮಿಸ್ಕಿನ್ ಅವರಿಗೆ ಸಮನ್ಸ್ ಜಾರಿ ಮಾಡಿ ಅರ್ಚಕರು ತಮಗೆ ಆಗುತ್ತಿರುವ ಕಿರುಕುಳದ ಕುರಿತು ದೂರನ್ನು ಸಲ್ಲಿಸಿದ್ದರು. ಈ ದೂರನ್ನು ಇತ್ಯರ್ಥಪಡಿಸಿ ಅರ್ಚಕ ವೃತ್ತಿಗೆ ಯಾವುದೇ ತೊಂದರೇ ಕೊಡಬಾರದು ಎಂದು ಆದೇಶ ಮಾಡಿದ್ದರು ಕೂಡ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.ತಡೆಯಾಜ್ಞೆ ಜಾರಿಯಲ್ಲಿದ್ದರು ಕೂಡ ದುರುದ್ದೇಶದಿಂದ ಮುನವಳ್ಳಿ ಅವರನ್ನು ತೆಗೆದುಹಾಕಲು ನ್ಯಾಯವಾದಿ ಎ.ಜಿ.ಹಿರೇಮಠ ಎಂಬುವುರನ್ನು ನೇಮಿಸಿದ್ದಾರೆ ಎ.ಜಿ‌.ಹಿರೇಮಠ ಅವರು ಜಿಲ್ಲಾ ನ್ಯಾಯಾಲಯದ ತಡೆಯಾಜ್ಞೆ ಪರಿಗಣಿಸದೇ ಡೊಮೆಸ್ಟಿಕ್ ವಿಚಾರಣೆ ಮುಂದುವರೆಸಿದ್ದಾರೆ. ನ್ಯಾಯಾಲಯದಲ್ಲಿ ವ್ಯಾಜ್ಯವು ಇತ್ಯರ್ಥವಾಗುವವರೆಗೂ ಕಾಯದೇ ವಿಚಾರಣಾಧಿಕಾರಿಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಶೀಘ್ರವಾಗಿ ಕೈ ಬಿಡಬೇಕು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುವ ವರೆಗೆ ಯಾವುದೇ ಡೊಮೆಸ್ಟಿಕ್ ವಿಚಾರಣೆ ನಡೆಸಕೂಡದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಾಂಡುರಂಗ ಮುನವಳ್ಳಿ, ಕೆ.ಪಿ.ಕುಲಕರ್ಣಿ ಸೇರಿದಂತೆ ಇತರರು ಇದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!