Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಪಂದ್ಯದ ಸಮಯದಲ್ಲೇ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ: ವಿಚಲಿತಗೊಂಡ ರೋಹಿತ್ ಶರ್ಮಾ.

ಪಂದ್ಯದ ಸಮಯದಲ್ಲೇ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ: ವಿಚಲಿತಗೊಂಡ ರೋಹಿತ್ ಶರ್ಮಾ.

ಪುಣೆ: ಕ್ರಿಕೆಟ್​ ಪಂದ್ಯ ನಡೆಯುತ್ತಿರುವಾಗಲೇ ಕ್ರೀಡಾಭಿಮಾನಿಗಳು ಮೈದಾನಕ್ಕೆ ನುಗ್ಗಿ ತಮ್ಮ ನೆಚ್ಚಿನ ಪ್ಲೇಯರ್​ ಕಾಲಿಗೆ ಬೀಳುವ ಘಟನೆ ಹಿಂದಿನಿಂದಲೂ ನಡೆಯುತ್ತಿದ್ದು, ಇದೀಗ ಮತ್ತೊಂದು ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನ ಕ್ರೀಡಾಭಿಮಾನಿ ಓಡಿ ಬಂದು ರೋಹಿತ್​ ಶರ್ಮಾ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ವಿಚಲಿತಗೊಂಡಿರುವ ಶರ್ಮಾ ಮುಗ್ಗರಿಸಿ ಕೆಳಗೆ ಬಿದ್ದರು.ಅಭಿಮಾನಿ ಕಾಲಿಗೆ ಬಿದ್ದಾಗ ಮುಗ್ಗರಿಸಿದ ರೋಹಿತ್​​ ಶರ್ಮಾ ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿರುವ ಕ್ರೀಡಾಭಿಮಾನಿ ರೋಹಿತ್​ ಶರ್ಮಾ ಇದ್ದಲ್ಲಿಗೆ ಬಂದು ಅವರ ಕಾಲಿಗೆ ಬೀಳಲು ಮುಂದಾಗಿದ್ದಾರೆ. ಈ ವೇಳೆ ಅಭಿಮಾನಿ, ಹಿಟ್​ಮ್ಯಾನ್ ಕಾಲು ಹಿಡಿದುಕೊಂಡಿದ್ದರಿಂದ ಆಯತಪ್ಪಿ ಅವರೂ ಮೇಲೆ ಬಿದ್ದಿದ್ದಾರೆ. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಮಯಾಂಕ್​ ಹಾಗೂ ರಹಾನೆ ಅವರನ್ನು ಮೇಲೆತ್ತಿದ್ದಾರೆ.ಅಭಿಮಾನಿಯನ್ನು ಎಬ್ಬಿಸಲು ನೆರವಾಗುತ್ತಿರುವ ರೋಹಿತ್​​ ಶರ್ಮಾ ಈ ಹಿಂದೆಯೂ ಸಹ ಇಂತಹ ಅನೇಕ ಘಟನಾವಳಿಗಳು ನಡೆದಿದ್ದು, ಮಹೇಂದ್ರ ಸಿಂಗ್​ ಧೋನಿ, ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕಾಲಿಗೆ ಮೈದಾನದಲ್ಲೇ ಅನೇಕ ಅಭಿಮಾನಿಗಳು ಬಿದ್ದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ವೀಕ್ಷಿಸಿರುವ ಕೊಹ್ಲಿ ಮುಗುಳುನಕ್ಕು ಸುಮ್ಮನಾಗಿದ್ದಾರೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!