Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಪತ್ರಕರ್ತೆ ಗೌರಿ ಕೊಲೆ ಕೇಸಿನಲ್ಲಿ ಹುಬ್ಬಳ್ಳಿ ಯುವಕರ ಪಾತ್ರ‌ ಏನು?

ಪತ್ರಕರ್ತೆ ಗೌರಿ ಕೊಲೆ ಕೇಸಿನಲ್ಲಿ ಹುಬ್ಬಳ್ಳಿ ಯುವಕರ ಪಾತ್ರ‌ ಏನು?

ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಹತ್ಯೆಯ ಕೇಸ್ ಲಿಂಗ್ ಈಗ ಹುಬ್ಬಳ್ಳಿಗೂ ವ್ಯಾಪಿಸಿದೆ. ಎಸ್ಐಟಿ ಇಬ್ಬರು ಯುವಕರನ್ನ ಬಂಧಿಸಿದ್ಮೇಲಂತೂ ಹುಬ್ಬಳ್ಳಿ ಮತ್ತೆ ಕುಖ್ಯಾತಿ ಪಡ್ಕೊಂಡಂತಾಗಿದೆ. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾಗಿದ್ದ ಇಬ್ಬರು ಯುವಕರು ಗೌರಿ ಕೇಸಿನ ಆರೋಪದ ಮೇಲೆ ಅರೆಸ್ಟಾಗಿದಾರೆ. ಆದ್ರೇ, ಅವರು ಅಮಾಯಕರು ಅಂತ ಇನ್ನೊಂದ್ ಸಂಘಟನೆ ಈಗಲೇ ನಿರ್ಣಯಕ್ಕೆ ಬಂದ್ಬಿಟ್ಟಿದೆ.
ಮನೆ ಲಾಕ್ಔಟಾಗಿದೆ. ಮತ್ತೊಂದ್ ಮನೆಯಲ್ಲಿ ಭಯದ ಜತೆಗೆ ಕುಟುಂಬ ಸದಸ್ಯರು ಕಣ್ಣೀರು ಹಾಕ್ತಿದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸ್ ನಲ್ಲಿ ಇಬ್ಬರು ಹುಬ್ಬಳ್ಳಿಯ ಯುವಕರನ್ನ ಬಂಧಿಸಿದ್ಮೇಲೆ ಆ ಎರಡೂ ಕುಟುಂಬಕ್ಕೆ ಸೇರಿದ ಮನೆಯ ವಾತಾವರಣವಿದು. ಗೌರಿ ಕೊಲೆ ಕೇಸ್ ನಲ್ಲಿ ಇಬ್ಬರನ್ನ ಎಸ್ಐಟಿ ಶನಿವಾರವೇ ಬಂಧಿಸಿರೋದ್ರಿಂದ ಅವಳಿನಗರದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಆರ್ ಎಸ್ಎಸ್ ಘೋಷ್ ಪ್ರಮುಖ್ 27 ವರ್ಷದ ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ದಿ ಬಂಧನವಾಗಿದೆ. ಸೋಮವಾರವೇ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದ ಎಸ್ ಐಟಿ ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ. ಗೌರಿ ಹತ್ಯೆ ತಾನೇ ಮಾಡಿದ್ದೆಂದು ಪರಶುರಾಮ ವಾಗ್ಮೋರೆ ತಪ್ಪೊಪ್ಪಿಕೊಂಡಿದಾನೆ. ಆತನನ್ನ ಕೊಲೆ ಮಾಡಲು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದೇ ಗಣೇಶ ಮಿಸ್ಕಿನ್. ಕೊಲೆ ನಡೆದ್ಮೇಲೆ ವಾಗ್ಮೋರೆಯಿಂದ ಕೈಯಲ್ಲಿದ್ದ ಪಿಸ್ತೂಲ್ ಕಸಿದುಕೊಂಡ ಅಮಿತ್ ಬದ್ದಿ ಇವರಿಬ್ರೂ ಹುಬ್ಬಳ್ಳಿಯವರು, ಜತೆಗೆ ಒಂದೇ ಓರಗೆಯ ಬಾಲ್ಯ ಸ್ನೇಹಿತರು. ಗಣೇಶ ಅಗರಬತ್ತಿ ತಯಾರಿಕೆ ಕಂಪನಿಯಲ್ಲಿದ್ದ. ಜತೆಗೆ ಆರ್ ಎಸ್ಎಸ್ ವಾದ್ಯಮೇಳದ ಪ್ರಮುಖ್. ಅಮಿತ್ ಬದ್ದಿ ಬಂಗಾರದ ವ್ಯಾಪಾರಿ ನಡೆಸ್ತಿದ್ದ. ಗೌರಿ ಕೊಲೆಗಾಗಿ ಅಮೋಲ್ ಕಾಳೆ ಹುಬ್ಬಳ್ಳಿಯ ಈ ಇಬ್ಬರ  ನೆರವು ಪಡೆದಿದ್ದ. ಇತ್ತೀಚೆಗಷ್ಟೇ ಬಂಧಿತನಾಗಿದ್ದ ಸುಳ್ಯದ ಮೋಹನ್ ನಾಯ್ಕ್, ಗೌರಿ ಕೊಲೆ ಕೇಸಿನಲ್ಲಿ ಗಣೇಶ ಮತ್ತು ಅಮಿತ್ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದ. ಇದಾದ್ಮೇಲೆಯೇ ಬೆಂಗಳೂರಿನಿಂದ ಬಂದ ವಿಶೇಷ ತನಿಖಾ ತಂಡ ಇಬ್ಬರನ್ನೂ ಎತ್ತಾಕ್ಕೊಂಡ್ಹೋಗಿದೆ.
ಜಯಶ್ರೀ ಬದ್ದಿ, ಬಂಧಿತ ಅಮಿತ್ ಬದ್ದಿ ತಾಯಿ
 ಗೋವಿಂದ, ಬಂಧಿತ ಅಮಿತ್ ಬದ್ದಿ ಸಂಬಂಧಿ
ಗೌರಿ ಕೊಲೆ ನಡೆದ ದಿನ ಗಣೇಶ ಮಿಸ್ಕಿನ್ ಹೆಲ್ಮೆಟ್ ಹಾಕಿಕೊಂಡೇ ವಾಗ್ಮೋರೆಯನ್ನ ತನ್ನ ಬೈಕಿನಲ್ಲಿ ಕೂರಿಸಿಕೊಂಡಿದ್ದ. ಅಪ್ಪಿತಪ್ಪಿಯೂ ವಾಗ್ಮೋರೆಗೆ ಮುಖ ತೋರಿಸಿರಲಿಲ್ಲ. ಆದ್ರೇ, ಕೋರ್ಡ್ ವರ್ಡ್ ಹೇಳಿದ ಬಳಿಕ ವಾಗ್ಮೋರೆ ಆತನ ಬೈಕ್ ಏರಿ ಗೌರಿ ಮನೆಗೆ ತೆರಳಿದ್ದ. ಒಂಟಿಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶರನ್ನ ಹತ್ಯೆಗೈದಿದ್ದ ಪರಶುರಾಮ ವಾಗ್ಮೋರೆ ಬಳಿಕ ಗಣೇಶ ಮಿಸ್ಕಿನ್ ಬೈಕ್ ಏರಿದ್ದ. ಆದ್ರೇ, ಅರ್ಧದಾರಿಯಲ್ಲೇ ವಾಗ್ಮೋರೆಯನ್ನ ಗಣೇಶ  ಬೈಕಿನಿಂದ ಕೆಳಗಿಳಿಸಿದ್ದ. ಅದೇ ಟೈಮಿಗೆ ಅಲ್ಲಿಗೆ ಬಂದ ಅಮಿತ್ ಬದ್ದಿ, ವಾಗ್ಮೋರೆ ಕೈಯಲ್ಲಿದ್ದ ಪಿಸ್ತೂಲ್ ಕಸೆದಿದ್ದ. ವಾಗ್ಮೋರೆಯನ್ನ ಅಲ್ಲಿಯೇ ಬಿಟ್ಟು ಗಣೇಶ ಮತ್ತು ಅಮಿತ್ ಸ್ಥಳದಿಂದ ಎಸ್ಕೇಪಾಗಿದ್ರು. ಇಬ್ಬರು ಯಾರು ಅನ್ನೋದು ವಾಗ್ಮೋರೆಗೆ ಕೊನೆವರೆಗೂ ತಿಳಿದಿರಲಿಲ್ಲ. ಇದಾದ್ಮೇಲೆ ಹತ್ಯೆಗೆ ಬಳಿಸಿದ್ದ ಬೈಕ್ ಮತ್ತು ಪಿಸ್ತೂಲ್  ಎಲ್ಲಿದೆ ಅಂತ ಎಸ್ಐಟಿ ಮುಂದೆ ಇಬ್ಬರೂ ಆರೋಪಿಗಳು ಬಾಯಿಬಿಡ್ತಿಲ್ಲ. ಇಷ್ಟಕ್ಕೆ ಸುಮ್ಮನಾಗದ ಎಸ್ಐಟಿ ಇಬ್ಬರೂ ಆರೋಪಿಗಳನ್ನ ಕೆಲ ಸ್ಥಳಗಳಿಗೆ ಕರೆದೊಯ್ದು ಪರಿಶೀಲನೆ ನಡೆಸ್ತಿದೆ. ಧಾರವಾಡದಲ್ಲಿ ನಡೆದಿದ್ದ ಸಂಶೋಧಕ ಡಾ. ಎಂ.ಎಂ ಕಲಬುರ್ಗಿ ಹತ್ಯೆಯಲ್ಲೂ ಈ ಇಬ್ಬರ ಪಾತ್ರ ಇದೆಯಾ ಅನ್ನೋದರ ಕುರಿತಂತೆಯೂ ಎಸ್ಐಟಿ ತನಿಖೆ ನಡೆಸ್ತಿದೆ. ಗಣೇಶ ಮಿಸ್ಕಿನ್ ಹುಬ್ಬಳ್ಳಿಯ ಚೈತನ್ಯನಗರದಲ್ಲಿ ಬಾಡಿಗೆ ಮನೆ ಮಾಡ್ಕೊಂಡು 3 ವರ್ಷದಿಂದ ವಾಸವಿದ್ದ. ಆದ್ರೇ, ಸ್ಥಳೀಯ ಯಾರೊಂದಿಗೂ ಗಣೇಶ ಹೆಚ್ಚು ಬೆರೆಯುತ್ತಿರಲಿಲ್ವಂತೆ.  ಗಣೇಶ ಮಿಸ್ಕಿನ್ ಇದ್ದ ಮನೆ ಈಗ ಲಾಕ್ಔಟಾಗಿದೆ.  ಮತ್ತೊಂದೆಡೆ ಪ್ರಕರಣದ ದಿಕ್ಕು ತಪ್ಪಿಸಲೋ ಏನೋ ಗೊತ್ತಿಲ್ಲ. ಬಂಧಿತ ಗಣೇಶ ಮತ್ತು ಅಮಿತ್ ಅಮಾಯಕರು. ಸರ್ಕಾರ ಹಿಂದೂ ಯುಕರನ್ನ ಟಾರ್ಗೆಟ್ ಮಾಡಿದೆ ಅಂತ ಆರೋಪಿಸಿ ಹುಬ್ಬಳ್ಳಿಯಲ್ಲಿ ಕ್ರಾಂತಿ ಸೇನಾದ ಕೆಲ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಬಂಧಿತರನ್ನ ಬಿಡುಗಡೆಗೊಳಿಸದಿದ್ರೇ ಉಗ್ರ ಹೋರಾಟ ಮಾಡ್ತೀವೆಂದ್ರು. 
ವಿಠ್ಠಲ ಪವಾರ, ಅಧ್ಯಕ್ಷ, ಕ್ರಾಂತಿಸೇನಾ
ಆದ್ರೇ, ಗೌರಿ ಕೊಲೆ ಕೇಸಿನಲ್ಲಿ ಇಬ್ಬರನ್ನೂ ಎಸ್ಐಟಿ ಬಂಧಿಸಿದೆ. ಆದ್ರೇ, ಈಗ ಪ್ರತಿಭಟನೆ ನಡೆಸ್ತಿರೋರಿಗೆ ಬಂಧಿತರು ನಿರಪರಾಧಿಗಳು ಹೇಗೆ ಅನ್ನಿಸಿದ್ರೂ ಗೊತ್ತಾಗ್ತಿಲ್ಲ. ಆದ್ರೂ ಸಾಕಷ್ಟು ಸದ್ದು ಮಾಡಿರೋ ಪತ್ರಕರ್ತೆ ಗೌರಿ ಲಂಕೇಶ ಕೊಲೆ ಕೇಸಿನಲ್ಲಿ ಈಗಾಗಲೇ 9 ಮಂದಿಯನ್ನ ಬಂಧಿಸಲಾಗಿದೆ. ಪ್ರತಿಯೊಬ್ಬರಿಂದಲೂ ಮಹತ್ವ ಸಾಕ್ಷ್ಯಗಳ ಸಂಗ್ರಹಿಸಿರೋ ಎಸ್ಐಟಿ,  ಪ್ರಕರಣದ ತನಿಖೆಯನ್ನ ನಿರ್ಣಾಯಕ ಹಂತಕ್ಕೆ ತಂದಂತಿದೆ. ಕೊಲೆ ಮಾಡಿದವರ್ಯಾರೇ ಆದ್ರೂ ಅಂಥವರಿಗೆ ಕ್ಷಮೆ ಅಂತೂ ಇರಲೇಬಾರದು ಅಂತಿವೆ ಸಾತ್ವಿಕ ಮನಸುಗಳು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!