Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು ಶಿಕ್ಷೆ

ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್​: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿರುವ ಪಾಕಿಸ್ತಾನದ ನವಾಜ್ ಷರೀಫ್​ಗೆ ಪಾಕಿಸ್ತಾನದ ಕೋರ್ಟ್​ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್​ಎಬಿ) ನ್ಯಾಯಾಲಯ ಲಂಡನ್​ನ ಎವೆನ್​ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ತೀರ್ಪು ಪ್ರಕಟಿಸಿದೆ. ಪನಾಮ ಪೇಪರ್ಸ್​ ಹಗರಣ ಬೆಳಕಿಗೆ ಬಂದ ನಂತರ ನವಾಜ್​ ಷರೀಫ್​ ವಿರುದ್ಧ ಒಟ್ಟು ​ಮೂರು ಭ್ರಷ್ಟಾಚಾರ ಪ್ರಕರಣನ್ನು ದಾಖಲಿಸಲಾಗಿತ್ತು. ಅದರಲ್ಲಿ 1 ಪ್ರಕರಣದ ತೀರ್ಪು ಶುಕ್ರವಾರ ಪ್ರಕಟವಾಗಿದ್ದು, ಉಳಿದ 2 ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ.

ಲಂಡನ್​ನ ಎವೆನ್​ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್​ ಪುತ್ರಿ ಮರ್ಯಮ್ ಗೆ 7 ವರ್ಷ ಜೈಲು ಶಿಕ್ಷೆ ಹಾಗೂ ಅಳಿಯ ಕ್ಯಾ. ಸಫ್ದಾರ್ ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜತೆಗೆ ನವಾಜ್​ ಷರೀಫ್​ಗೆ 10 ಮಿಲಿಯನ್​ ಅಮೆರಿಕನ್​ ಡಾಲರ್​ ಮತ್ತು ಷರೀಫ್​ ಪುತ್ರಿ ಮರ್ಯಮ್​ಗೆ 2.6 ಮಿಲಿಯನ್​ ಅಮೆರಿಕನ್​ ಡಾಲರ್​ ದಂಡ ವಿಧಿಸಲಾಗಿದೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!