Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಪಾಕ್ ವಿರುದ್ದ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ ಶ್ರೀಲಂಕಾ.

ಪಾಕ್ ವಿರುದ್ದ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ ಶ್ರೀಲಂಕಾ.

ಲಾಹೋರ್​:ಪಾಕಿಸ್ತಾನ ತಂಡವನ್ನು ಅದರ ನೆಲದಲ್ಲೇ 3-0ಯಲ್ಲಿ ಟಿ20 ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡುವ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಶ್ರೀಲಂಕಾ ತಂಡ ದಾಖಲೆ ಬರೆದಿದೆ.ಮಲಿಂಗಾ, ಪೆರೆರಾ, ಕುಸಾಲ್​ ಮೆಂಡಿಸ್​ ಸೇರಿದಂತೆ ತಂಡದ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಾಕ್​ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಏಕದಿನ ಸರಣಿಯಲ್ಲಿ ಸೋಲನುಭವಿಸಿದರೂ ಟಿ20 ಯಲ್ಲಿ ಮೊದಲ ಶ್ರೇಯಾಂಕದ ಪಾಕಿಸ್ತಾನಕ್ಕೆ 3-0ಯಲ್ಲಿ ಸೋಲುಣಿಸು ಮೂಲಕ ಪಾಕ್​ ನೆಲದಲ್ಲಿ ಸರಣಿ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ ಪ್ರಮುಖ ಬ್ಯಾಟ್ಸ್​ಮನ್​ಗಳ ವೈಫಲ್ಯದ ಹೊರತಾಗಿಯೂ 20 ಓವರ್​ಗಳಲ್ಲಿ 147 ರನ್​ಗಳಿಸಿತ್ತು. ಏಕಾಂಗಿಯಾಗಿ ಪಾಕಿಸ್ತಾನ ಬೌಲರ್​ಗಳನ್ನು ಎದುರಿಸಿದ ಒಸಾಡ ಫರ್ನಾಂಡೊ 48 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 8 ಬೌಂಡರಿ ಸಹಿತ 78 ರನ್​ಗಳಿಸಿದರು.ಪಾಕ್​ ಪರ ಅಮೀರ್​ 3 ಹಾಗೂ ಇಮಾದ್​ ವಾಸಿಂ ಮತ್ತು ವಹಾಬ್​ ರಿಯಾಜ್​ ತಲಾ ಒಂದು ವಿಕೆಟ್​ ಪಡೆದಿದ್ದರು.148 ರನ್​ಗಳ ಗುರಿ ಬೆನ್ನತ್ತಿದ ಪಾಕ್​ ತಂಡ ಖಾತೆ ತೆರೆಯುವ ಮೊದಲೆ ಫಾಖರ್​ ಝಮಾನ್​ ವಿಕೆಟ್​ ಕಳೆದುಕೊಂಡಿತು. ಆದರೆ, ಬಾಬರ್​ ಅಜಂ(27) ಹ್ಯಾರೀಸ್​ ಸೊಹೈಲ್​ ಜೊತೆಗೂಡಿ 76 ರನ್​ಗಳ ಜೊತೆಯಾಟ ನೀಡಿದರು . ಬಾಬರ್​ ಔಟಾಗುತ್ತಿದ್ದಂತೆ ಉಳಿದ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಫರೇಡ್​ ನಡೆಸಿದರು.ಸರ್ಫರಾಜ್​ 17, ವಾಸಿಂ 3, ಆಸಿಫ್​ ಅಲಿ 1 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. ಹ್ಯಾರೀಸ್​ ಸೊಹೈಲ್​ ಮಾತ್ರ 50 ಎಸೆತಗಳಲ್ಲಿ 52 ರನ್​ಗಳಿಸಿ ತಂಡದ ಗೆಲುವಿಗೆ ಹೋರಾಡಿದರಾದರೂ ನಿರ್ಣಾಯಕ ಹಂತದಲ್ಲಿ ವಿಕೆಟ್​ ಒಪ್ಪಿಸಿದರಿಂದ ಪಾಕ್​ ತಂಡ ಸೋಲು ಕಾಣಬೇಕಾಯಿತು. ಅತ್ಯುತ್ತಮ ಬೌಲಿಂಗ್​ ದಾಳಿ ನಡೆಸಿದ ಲಂಕಾ ಪರ ವಾನಿಂಡು ಹಸರಂಗ 3. ಲಹಿರು ಕುಮಾರ 2 ಹಾಗೂ ರಜಿತಾ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!