Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಮಂಡ್ಯ / ಪುರಾತನ ಕಾಲದ ದೇವಸ್ಥಾನಗಳನ್ನು ಉಳಿಸಿ ಸ್ವಾಮಿ
Featured Video Play Icon

ಪುರಾತನ ಕಾಲದ ದೇವಸ್ಥಾನಗಳನ್ನು ಉಳಿಸಿ ಸ್ವಾಮಿ

ಮಂಡ್ಯ- ತಾಲ್ಲೂಕಿನ ಬಸರಾಳು ಹೋಬಳಿ ಪಟ್ಟಣದ ನಂದನಹಳ್ಳಿ ಗ್ರಾಮದಲ್ಲಿ ಎರಡು ಮೂರು ತಲೆಮಾರಿನ ದೇವಸ್ಥಾನಗಳು ಜೀಣೋದ್ಧಾರ ಕಾರ್ಯಕ್ಕೆ ಅನುಮತಿ ಕೋರಿ ಇಲ್ಲಿನ ಜನ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ.

ಶ್ರೀ ಬಸವೇಶ್ವರ ದೇವಾಲಯ ಹಾಗೂ ಗ್ರಾಮದೇವತೆ ಮಾರಮ್ಮ ದೇವಾಲಯಗಳು ಒಂದೇ ಕಟ್ಟಡದಲ್ಲಿ ಇರುವಂತಹ ದೇವಾಲಯಗಳು ಇದಾಗಿವೆ. ಶ್ರೀ ಬಸವೇಶ್ವರ ದೇವಸ್ಥಾನದ ವಿಗ್ರಹ ಮತ್ತು ಬಸವಣ್ಣ ಮುಖದ ಮತ್ತು ಮೂರ್ತಿ ಮತ್ತು ಮೊಣಕಾಲು ಹಾಳಾಗಿ ಹೋಗಿದೆ. ಕಟ್ಟಡದ ಗೋಡೆ ಸಂಪೂರ್ಣವಾಗಿ ಚಿದ್ರವಾಗಿ ಗರ್ಭಗುಡಿಯ ಹಾಸಿದ ಕಲ್ಲುಗಳು ಎರಡು ಭಾಗವಾಗಿ ಕಳಕೊಂಡು ತಲೆಯ ಮೇಲೆ ಬಿದ್ದರೆ ನಮ್ಮ ಪ್ರಾಣಕ್ಕೆ ಯಾರು ಜವಾಬ್ದಾರರು ಹಾಗೂ ಇದಕ್ಕೆ ಸಂಬಂಧಪಟ್ಟ
ಇಲಾಖೆಯವರಿಂದ ಕೂಲಂಕುಶವಾಗಿ ಪರಿಶೀಲಿಸಿ ಮುಂದಾಗಬಹುದಾದ ಅನಾಹುತಕ್ಕೆ
ತಡೆ ನೀಡಿದಂತಾಗುತ್ತದೆ.
ಹಾಗೂ ಭಕ್ತಾದಿಗಳು ಬಂದು ಹೋಗಲು ದೇವಸ್ಥಾನದ
ಜೀಣೋದ್ಧಾರ ಕಾರ್ಯಕ್ಕೆ ಸರಕಾರದಿಂದ ಧನ ಸಹಾಯವಾದರೆ ಪುರಾತನ
ದೇವಸ್ಥಾನಗಳಲೊಂದಾದ ಈ ಎರಡು ದೇವಸ್ಥಾನಗಳು ಮಂಡ್ಯ ಜಿಲ್ಲಾ, ಮಂಡ್ಯ
ತಾಲ್ಲೂಕು, ಬಸರಾಳು ಹೋಬಳಿ ಪಟ್ಟಣದ ನಂದನಹಳ್ಳಿ ಗ್ರಾಮದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಒಂದು ವೇಳೆ ಮೇಲಿನ ಸೂರು ಭಕ್ತಾಧಿಗಳ ತಲೆಯ ಮೇಲೆ ಬಿದ್ದರೆ ಇದಕ್ಕೆ ಯಾರು ಜವಾಬ್ದಾರರಾಗುತ್ತಾರೆ ಎಂದು ಅಧಿಕಾರಿಗಳಿಗೆ ಅಗ್ರಹಿಸುತ್ತಿದ್ದಾರೆ.
ಇದಕ್ಕೆ ಸಂಬಂದಪಟ್ಟ ಮಂಡ್ಯ ಜಿಲ್ಲಾ ತಹಸೀಲ್ದಾರರು ಹಾಗೂ ಮುರಾಯಿ ಇಲಾಖೆಯವರು ಬಂದು ಪರಿಸ್ಥಿತಿಯನ್ನು ನೋಡಿ
ನಂತರ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಗ್ರಾಮದ ಜನರ ಹೇಳುತ್ತಿದ್ದಾರೆ.
ಗ್ರಾಮೀಣ ಲೆಕ್ಕಾಧಿಕಾರಿಗಳ ಗಮನಕ್ಕೆ ಹೇಳಿದರು ಮಂಡ್ಯ ತಹಶಿಲ್ದಾರ್‍ರವರು
ಅದರಂತೆ ಸರ್ವೇ ಮಾಡಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಕಳುಹಿಸಿಕೊಟ್ಟರು ಅಳತೆ ಮಾಡಿದ ಲೆಕ್ಕಪತ್ರಗಳು ಮುಜರಾಯಿ ಇಲಾಖೆಗೆ ಸೇರಿರುವಂತಹ ದೇವಸ್ಥಾನವು ಎಂದು ಹಣದ ಅನುದಾನ ಬಿಡುಗಡೆಗೆ ಒಪ್ಪಂದದ ಹೇಳಿಕೆಯನ್ನು ಕೊಟ್ಟಿದ್ದಾರೆ.

ಮುಜರಾಯಿ ಇಲಾಖೆ ಒಪ್ಪಿಗೆಯ ಆಧಾರದ ಮೇಲೆ ದೇವಸ್ಥಾನದ ಹಳೆಯ
ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟಡವನ್ನು ಪುನರ್ ಅಭಿವೃದ್ಧಿ ಮಾಡಿ ಎಂದು ಒಪ್ಪಿಗೆ
ಕೋರಿದ್ದರು. ಅದೇ ರೀತಿ ಒಪ್ಪಿಗೆಯಂತೆ ಪುರಾತನ ಕಾಲದ ದೇವಸ್ಥಾನವನ್ನು ಹಾಗೂ ದೇವಸ್ಥಾನದಕ್ಕೆ ಸೇರಿದ ಕಟ್ಟಡವನ್ನು ಗ್ರಾಮಸ್ಥರು ಹೊಸ ಕಟ್ಟಡ ನಿರ್ಮಾಣಕ್ಕೆ ಕೈ
ಹಾಕಿದರು.

ಕಾಂಗ್ರೆಸ್ – ಜೆ. ಡಿ. ಎಸ್. ಎಂದು ಪ್ರತಿಯೊಬ್ಬ ಶಾಸಕರುಗಳಿಗೆ ಎಂ.
ಶ್ರೀನಿವಾಸ್, ಸಿ. ಎನ್. ಪುಟ್ಟರಾಜು ಮತ್ತು ಮಂಡ್ಯ ಲೋಕಸಭೆ ಸಂಸದರು ಎಲ್.
ಆರ್. ಶಿವರಾಮೇಗೌಡರು ಇವರುಗಳ ಗಮನಕ್ಕೆ ಸೂಚನೆ ಕೊಟ್ಟಿದ್ದರು. ಆದರೆ ಈಗ
ಪರಿಸ್ಥಿತಿಯು ತುಂಬಾ ಬದಲಾಗಿದೆ ರಾಜಕೀಯ ಒಂದೆಡೆಯಾದರೆ ನಮ್ಮ ಗ್ರಾಮಸ್ಥರು ದೇವಸ್ಥಾನದ ಬಗ್ಗೆ ಮಾಡಿಕೊಂಡ ಮನವರಿಕೆಗಳಿಗೆ ಬೆಲೆ ಇಲ್ಲದಂತದಾಗಿದೆ. ಇದರಿಂದ ಬೇಸತ್ತ ಊರಿನ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಅಂದಿನ ಕಾಂಗ್ರೆಸ್ – ಜೆ. ಡಿ.
ಎಸ್. ಮೈತ್ರಿ ಸರ್ಕಾರವು ಮುಜರಾಯಿ ಇಲಾಖೆಗೆ ಮಿನಿಸ್ಟರ್ ಪರಮೇಶ್ವರ್ ನಾಯ್ಕ್ ಮುಜರಾಯಿ ಇಲಾಖೆಯ ಅಧಿಕಾರಿಗಳು ಹಣದ ಅನುದಾವನ್ನು ಬಿಡುಗಡೆ ಮಾಡಿ ಕೊಡ್ತೀವಿ
ಅಂತ ಆಶ್ವಾಸನೆ ಕೊಟ್ಟಂತಹ ಅಧಿಕಾರಿಗಳು ಈಗೆಲ್ಲಿಗೆ ಹೋದರು ಎಂಬ ಗ್ರಾಮದ ಜನರ ಆಕ್ರೋಶ ಹಾಗೂ ಆರೋಪ ಇವತ್ತು ಬಿ. ಜೆ. ಪಿ ಸರ್ಕಾರವು ಅಧಿಕಾರದಲ್ಲಿದ್ದು
ಬಿ. ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಅಶೋಕ್‍ ಗಮನಕ್ಕೂ ಕೂಡ ಕೊಟ್ಟಿದ್ದೆವು ಅವರು ಒಂದು ಪತ್ರವನ್ನು ನಮ್ಮ
ಕೈಗೆ ಕೊಟ್ಟು ಕೈ ತೊಳೆದುಕೊಂಡರು. ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಭೇಟಿ ಮಾಡಿ ಮಂಡ್ಯ ಆಫೀಸ್ ಕೊಠಡಿಗೆ ಹೋಗಿ ಪತ್ರವನ್ನು
ಕೊಟ್ಟಿದ್ದೇವೆ ಸಂಸದೆ ಸುಮಲತಾ ಅವರ ಪಿ. ಎ. ಮತ್ತೆ ನಮ್ಮನ್ನು ಆಫೀಸಿಗೆ ಕರೆಸಿ ಕೈಗೆ
ಈ ಪತ್ರವನ್ನು ಕೊಟ್ಟು ಮುಜರಾಯಿ ಇಲಾಖೆಗೆ ತಲುಪಿಸಿ ಎಂದು ಹೇಳಿ ಕಳುಹಿಸಿದ್ದರು.
ಬಿ. ಎಸ್. ಯಡಿಯೂರಪ್ಪ ದಯವಿಟ್ಟು ನಮ್ಮ ಬಸರಾಳು
ಹೋಬಳಿ ಪಟ್ಟಣದ ನಂದನಹಳ್ಳಿ ಗ್ರಾಮದಲ್ಲಿ ಎರಡು ಮೂರು ತಲೆಮಾರಿನ ದೇವಸ್ಥಾನಗಳು
ಅಭಿವೃದ್ಧಿಗೆ ತಮ್ಮ ಸಹಕಾರದ ಅಗತ್ಯವಿದೆ ದಯಮಾಡಿ ನಮ್ಮ ಈ ಎರಡು ಪುರಾತನ
ದೇವಾಲಯಗಳ ಜೀರ್ಣೋದ್ಧಾರವನ್ನು ಮಾಡಲು ಹಣವನ್ನು ಬಿಡುಗಡೆ ಮಾಡಿ ಕೊಡುವಂತೆ ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿಯ ಗ್ರಾಮಸ್ಥರ ಮನವಿ ತಾವು ಈ
ಮನವಿಯನ್ನು ಪರಿಗಣಿಸಿ ಸರ್ಕಾದಿಂದ ಅನುದಾನವನ್ನು ಬಿಡುಗಡೆಯ ಅನುಮತಿ ಕೊಟ್ಟು
ನಮ್ಮ ದೇವಸ್ಥಾನಗಳ ಜೀಣೋದ್ಧಾರ ಮಾಡಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.

Share

About Bora nayak BIG TV NEWS, Mandya

Check Also

ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮಂಡ್ಯ ಮಾಕವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇವೇಗೌಡ (55)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ .ಬ್ಯಾಂಕ್,ಟ್ರ್ಯಾಕ್ಟರ್. ಇತರೆ ಕೈ ಸಾಲ ಸೇರಿ 8 …

Leave a Reply

Your email address will not be published. Required fields are marked *

error: Content is protected !!