Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಪ್ರತಿ ಗುರುವಾರ ಉಚಿತ ಯೋಗಕ್ಷೇಮ ಆಪ್ತಸಮಾಲೋಚನೆ.

ಪ್ರತಿ ಗುರುವಾರ ಉಚಿತ ಯೋಗಕ್ಷೇಮ ಆಪ್ತಸಮಾಲೋಚನೆ.

ಹುಬ್ಬಳ್ಳಿ: ಆಧುನಿಕ ದಿನಮಾನಗಳಲ್ಲಿ ಒತ್ತಡದ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಇದರಿಂದ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ. ಈ ದಿಸೆಯಲ್ಲಿ ಸಮಾಜದ ಮಾನಸಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಹಿಷಿ ಟ್ರಸ್ಟ್ ವತಿಯಿಂದ ಪ್ರತಿ ಗುರುವಾರ ಸಂಜೆ 5 ರಿಂದ 7 ರವರೆಗೆ ಉಚಿತ ಆಪ್ತ ಸಮಾಲೋಚನೆ ಸೇವೆ ನೀಡಲಾಗುವುದು ಎಂದು ವಿದ್ಯಾ ಶಿರಹಟ್ಟಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಸಮಾಜದಲ್ಲಿ ಉಲ್ಬಣಗೊಂಡಿರುವ ಆರೋಗ್ಯ, ವೃದ್ದಾಪ್ಯ, ವೃದ್ದರ ಬಗೆಗಿನ ಕಾಳಜಿ ತೆಗೆದುಕೊಳ್ಳುವವರ ಅಭಾವ, ಕಲೆ ಹಾಗೂ ಸಂಪ್ರದಾಯಗಳ ಬಗೆಗೆ ಇಳಿಮುಖವಾಗುತ್ತಿರುವ ಆಸಕ್ತಿ, ಇಂಥವುಗಳಿಗೆ ಮುಂಜಾಗ್ರತೆಯಾಗಿ ಹಲವಾರು ವರ್ಷಗಳ ಹಿಂದೆಯೇ ಈ ದಿಸೆಯಲ್ಲಿ ಕೆಲಸ ಆರಂಭಿಸಲಾಗಿದ್ದು, ಇದೀಗ ಮತ್ತೊಂದು ಹೊಸ ಹೆಜ್ಜೆ ಮುಂದೆ ಇಡಲಾಗುತ್ತಿದ್ದು, ಅದುವೇ ಉಚಿತ ಆಪ್ತಸಮಾಲೋಚನೆ ಸೇವಾಕೇಂದ್ರದ ಯೋಗಕ್ಷೇಮ. ಇದರ ಮೂಲಕ ಸಮಾಜದ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮುಖ್ಯ ಉದ್ದೇಶ ಆಗಿದೆ ಎಂದರು. ಬೆಂಗಳೂರಿನ ಸಮಾಧಾನ ಕೇಂದ್ರದ ಡಾ.ಸಿ.ಆರ್.ಚಂದ್ರಶೇಖರ ಹಾಗೂ ಅವರ ತಂಡದ ಸಂಪನ್ಮೂಲ ವ್ಯಕ್ತಿಗಳಿಂದ ತರಭೇತಿ ಪಡೆದ ನುರಿತ, ಅನುಭವಿ ಆಪ್ತಸಮಾಲೋಚನಾಕಾರರು ಬರುವ ಜನರ ತಲ್ಲಣ, ಮಾನಸಿಕ ಖಿನ್ನತೆಗಳಿಗೆ ಕಿವಿ ಆಗಲಿದ್ದಾರೆ. ಸಂಪೂರ್ಣ ತಾಳ್ಮೆ, ಸಮಾಧಾನದಿಂದ ಆಲಿಸುವುದು ಚಿಕಿತ್ಸಾ ಕ್ರಮವಾಗಿದ್ದು, ಸಮಸ್ಯೆಯೊಂದಿಗೆ ಬಂದವರು ತಾವಾಗಿಯೇ ತಮ್ಮ ಅಂತರಂಗವನ್ನು, ಮನಸ್ಸಿನ ಪದರು ಪದರುಗಳನ್ನು ತೆರೆದಿಡುವಂತೆ ನೆರವು ನೀಡಲಾಗುವುದು. ಗೌಪ್ಯತೆ ಯ ಮಂತ್ರದೊಂದಿಗೆ ಬಂದವರು ಆಪ್ತತೆಯೊಂದಿಗೆ ಅಂತರಂಗದ ಸಖ, ಸಖಿ ಆಗಿ ಅವರು ಆದುಮಿಕೊಂಡಿದ್ದ ಭಾವಕಲ್ಮಷಗಳು ಒತ್ತಿ ಹಿಡಿದ ನಿರಾಸೆ, ಬೇಸರಗಳು, ತಾವಾಗಿಯೇ ಹೊರಬಂದು ಹರಿದು ಹೋಗಲು ಮನ ಹಗುರಾಗಲು ಸಹಾಯ ಮಾಡುತ್ತಾರೆ. ಮತ್ತೊಮ್ಮೆ ಇಂಥ ಖಿನ್ನತೆ, ತಲ್ಲಣಗಳು ಮನದಲ್ಲಿ ಗೂಡು ಕಟ್ಟುವಂತೆ ಕಟ್ಟದಂತೆ ಸೂಕ್ತ ಸಲಹೆ ನೀಡುವರು ಎಂದರು. ಇನ್ನೂ ಯೋಗಕ್ಷೇಮ ಕಾರ್ಯಕ್ರಮ ಒಂದು ವರ್ಷ ಪೂರೈಸಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು, ಪಾಲಕರು, ದಂಪತಿಗಳಿಗಾಗಿ ಮೀಟಿಂಗ್ ಗಳು ಹಾಗೂ ಸಾಮೂಹಿಕ ಆಪ್ತಸಮಾಲೋಚನೆ ಏರ್ಪಡಿಸಲಾಗುತ್ತಿದ್ದು, ಆಸಕ್ತರು ಕೇಂದ್ರಕ್ಕೆ ಭೇಟಿ ಕೊಟ್ಟು ಆಪ್ತಸಮಾಲೋಚನೆ ತೆಗೆದುಕೊಳ್ಳಬಹುದು. ಮಾಹಿತಿಗೆ 8277033139, 9880019258 ಸಂಪರ್ಕಿಸಬಹುದೆಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾವಿತ್ರಿ ಮಹಿಷಿ, ನರಸಿಂಹ ಶಿರಹಟ್ಟಿ, ಪದ್ಮಜಾ ಹುಯಿಲಗೋಳ, ವಿಜಯಾ ದೇಸಾಯಿ ಸೇರಿದಂತೆ ಮುಂತಾದವರು ಇದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!