Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಪ್ರತ್ಯೇಕ ರಾಜ್ಯದ ಕೂಗು; ಆಗಷ್ಟ್ 2ಕ್ಕೆ ಉ-ಕ ಬಂದ್ !

ಪ್ರತ್ಯೇಕ ರಾಜ್ಯದ ಕೂಗು; ಆಗಷ್ಟ್ 2ಕ್ಕೆ ಉ-ಕ ಬಂದ್ !

ಕರ್ನಾಟಕ ಏಕೀಕರಣಕ್ಕೆ ದೊಡ್ಡದಾದ ಬಲ ತಂದ್ಕೊಟ್ಟಿದ್ದೇ ಉತ್ತರಕರ್ನಾಟಕ. ಅದರಲ್ಲೂ ಅಖಂಡ ಧಾರವಾಡ ಜಿಲ್ಲೆಯ ಪಾತ್ರ ಏಕೀಕರಣದಲ್ಲಿ ಮಹತ್ವದ ಪಾತ್ರ. ಹುಯಿಲಗೋಳ ನಾರಾಯಣರಾವ, ಸಿದ್ದಪ್ಪ ಕಂಬಳಿ ಸಾಕಷ್ಟು ಮಂದಿ ಐಕ್ಯತೆ ಕುರಿತು ಹೋರಾಡಿದ್ದರು. ಈಗ ಅದೇ ಭಾಗದ ಜನ ಉತ್ತರಕರ್ನಾಟಕದ ಪ್ರತ್ಯೇಕ ರಾಜ್ಯದ ಕಹಳೆ ಮೊಳಗಿಸ್ತಿದಾರೆ.

ಉತ್ತರಕರ್ನಾಟಕದ ಜನ ಕಷ್ಟಸಹಿಷ್ಣುಗಳು ನಿಜ. ದಕಶಗಳವರೆಗೂ ಈ ಭಾಗಕ್ಕೆ ಆಗ್ತಿರೋ ಅನ್ಯಾವನ್ನ ನುಂಗಿಕೊಂಡೇ ಅಖಂಡ ಕರ್ನಾಟಕದ ಅಸ್ತಿತ್ವ ಕಾಪಾಡಿಕೊಳ್ಳೋಕೆ ಇಲ್ಲಿನ ಜನ ತ್ಯಾಗ ಗುಣವೇ ಕಾರಣ. ಆದ್ರೇ, ಇದೇ ಜನರೀಗ ಸಿಡಿದೇಳ್ತಿದಾರೆ. ಪ್ರತ್ಯೇಕ ರಾಜ್ಯ ಬೇಕು ಅಂತ ಕೂಗೆಬ್ಬಿಸಿದಾರೆ. ಕುಡಿಯುವ ನೀರಿನ ಮಹದಾಯಿ ಯೋಜನೆ, ಕೈಗಾರಿಕೆ, ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ, ಸಾಲ ಮನ್ನಾದಲ್ಲೂ ಅನ್ಯಾಯ, ಹೀಗೇ ಉತ್ತರಕರ್ನಾಟಕಕ್ಕೆ ಆಗ್ತಿರೋ ತಾರತಮ್ಯದ ಕುರಿತು ಒಂದಿಡೀ ದಿನ ಹೇಳಿದ್ರೂ ಸಾಲಲ್ಲ.  ಅದರಲ್ಲೂ ಈ ಭಾಗದ ರಾಜಕಾರಣಿಗಳ ಅಸಮರ್ಥತೆ ಕೂಡ ಹಿನ್ನಡೆ ತಂದೊಡ್ಡಿದೆ.  ಬಜೆಟ್ ನಲ್ಲೂ ಶೇ. 82ರಷ್ಟು ದಕ್ಷಿಣ ಕರ್ನಾಟಕಕ್ಕೆ ಮೀಸಲು. ಇದರ ವಿರುದ್ಧವೇ ಈ ಭಾಗದ ಜನ ದನಿ ಎತ್ತುತ್ತಿದಾರೆ. ರೈತರ ಸಂಪೂರ್ಣ ಸಾಲ ಮನ್ನಾ, ಮಹದಾಯಿ ವಿವಾದ ಇತ್ಯರ್ಥ ಸೇರಿದಂತೆ ಆಗಿರೋ ಅನ್ಯಾಯ ಸರಪಡಿಸಲು ಆಗ್ರಹಿಸಿ ಹೋರಾಟ ನಡೀತಿದೆ. ಆಗಸ್ಟ್ 2ರಂದು 13 ಜಿಲ್ಲೆಗಳ ಸಂಪೂರ್ಣ ಉತ್ತರಕರ್ನಾಟಕ ಬಂದ್ ಗೆ ಕರೆ ನೀಡ್ಲಾಗಿದೆ. ಬಹುತೇಕ ಸಂಘಟನೆಗಳು ಇದಕ್ಕೆ ಸಾಥ್ ನೀಡ್ತಿವೆ. ಆ ಮೂಲಕ ಪ್ರತ್ಯೇಕ ರಾಜ್ಯಕ್ಕೆ ಕೂಗಿಗೆ ಮತ್ತಷ್ಟು ಬಲ ಬರಲಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರಾದೇಶಿಕ ಅಸಮತೋಲನದ ಬಗ್ಗೆ ದನಿ ಎತ್ತಿರೋದ್ರಿಂದಾಗಿ ಪ್ರತ್ಯೇಕ ರಾಜ್ಯದ ಕೂಗಿಗೆ ಮತ್ತಷ್ಟು ಇಂಬುಕೊಟ್ಟಿದೆ.

ಸೋಮಶೇಖರ್ ಕೋತಂಬ್ರಿ, ಅಧ್ಯಕ್ಷ, ಉ-ಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ
2002ರಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಬಲ ಬಂತು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ಉತ್ತರಕರ್ನಾಟಕ ಸ್ವಾಭಿಮಾನ ಸ್ತೂಪ ಕೂಡ ಅನಾವರಣ ಮಾಡಲಾಗಿತ್ತು. ಜತೆಗೆ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜ ಆರೋಹಣ ಮಾಡಲಾಗಿತ್ತು. ಇದಕ್ಕಾಗಿ  74 ಮಂದಿ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ. ನಂಜುಂಡಪ್ಪ ವರದಿ ಹಾಗೂ ಡಾ. ಸ್ವಾಮಿನಾಥನ್ ಆಯೋಗಗಳು ವರದಿ ನೀಡಿವೆ.  124 ಹಿಂದುಳಿದ, 25-30 ತಾಲೂಕು ಅತ್ಯಂತ ಹಿಂದುಳಿದಿವೆ ಅಂತ ವರದಿಯಲ್ಲಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸೋದಕ್ಕಾಗಿ ಕೆಲ ಶಿಫಾರಸು ಮಾಡಾಲಾಗಿತ್ತು. ನೀರಾವರಿ, ಕೈಗಾರಿಕೆ, ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಿಗೂ ಈ ಭಾಗಕ್ಕೆ ಅನ್ಯಾಯ ಮುಂದುವರೆದೇ ಇದೆ. ದಕ್ಷಿಣ ಕರ್ನಾಟಕದ ಬೆಂಗಳೂರಿನಲ್ಲಿ 50 ಸಾವಿರ ಕೋಟಿ ಅನುದಾನ ಮೆಟ್ರೋ ಯೋಜನೆಗೆ ತೆಗೆದಿರಿಸಿದಾಗ, ಉತ್ತರಕರ್ನಾಟಕಕ್ಕೂ 28 ಸಾವಿರ ಕೋಟಿ ನೀಡ್ಬೇಕೆಂದು ಆಗ್ರಹಿಸಲಾಗಿತ್ತು. ಆದ್ರೇ, ಈ ಭಾಗಕ್ಕೆ ಕೊಟ್ಟಿದ್ದು ಬರೀ  2 ಸಾವಿರ ಕೋಟಿ ರೂ. ಅಷ್ಟೇ.. ರೈತರು ಬೆಳೆದ ಬೆಳೆಗಳ ಬೆಲೆ ಪರಿಷ್ಕರಣೆಯಾಗ್ತಿಲ್ಲ. ಮಾರುಕಟ್ಟೆ ಜತೆಗೆ ಕೃಷಿಗೆ ಪೂರಕ ಬಜೆಟ್ ನೀಡ್ಲಿಲ್ಲ. ಸಾಲ ಮನ್ನಾ ಬರೀ ಪೊಳ್ಳು ಭರವಸೆ. 34 ಸಾವಿರ ಕೋಟಿ ಅಂತ ಹೇಳಿದ್ರೂ ಇದಕ್ಕಾಗಿ ಬರೀ 6 ಸಾವಿರ ತೆಗೆದಿರಿಸಿದಾರೆ ಅನ್ನೋದು ಆಕ್ರೋಶಕ್ಕೆ ಮತ್ತೊಂದು ಕಾರಣ. ಬೆಳಗಾವಿಯಲ್ಲಿ ಸುವರ್ಣಸೌಧವಿದೆ. ಧಾರವಾಡ, ಕಲಬುರ್ಗಿಯಲ್ಲಿ ಹೈಕೋರ್ಟ್ ಗಳಿವೆ.  ತಾಲೂಕು, ಜಿಲ್ಲೆಗಳ ರಚನೆಯಾಗಿವೆ. ಆಡಳಿತಾತ್ಮಕವಾಗಿ ಹೊಸ ರಾಜ್ಯ ರಚನೆಯಾದ್ರೇ ತಪ್ಪೇನಿಲ್ಲ. ಸಿಎಂ ಹೆಚ್ ಡಿಕೆ ಒಂದ್ ಸಮಿತಿ ರಚಿಸಿ ಉತ್ತರಕರ್ನಾಟಕ ರಾಜ್ಯದ ಗಡಿ ಗುರುತಿಸುವಂತಾಗ್ಬೇಕು. ತಾರತಮ್ಮ ನಿವಾರಣೆಗೆ ಪ್ರತ್ಯೇಕ ರಾಜ್ಯವೇ ಪರಿಹಾರ ಅಂತಿದಾರೆ ಹೋರಾಟಗಾರರು. ಮಹಾದೇವಪ್ಪ, ರೈತ ಮುಖಂಡ
ತೆಲಂಗಾಣ ಮಾದರಿ ಉತ್ತರಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಕೊಟ್ರೇ ತಪ್ಪೇನಿಲ್ಲ. ಪ್ರತ್ಯೇಕ ರಾಜ್ಯ ಬೇಕೇಬೇಕು ಅಂತಿದಾರೆ ಹೋರಾಟಗಾರರು, ಇದಕ್ಕೆ ನಿಜಕ್ಕೂ ಸ್ಪಂದನೆ ಸಿಗುತ್ತಾ.. ಈ ಭಾಗದ ರಾಜಕಾರಣಿಗಳು ತಮ್ಮ ಬದ್ಧತೆಯನ್ನ ತೋರಿಸ್ತಾರಾ ನೋಡ್ಪೇಕು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!