Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಇತರ ಕ್ರೀಡೆಗಳು / ಫ್ರೆಂಚ್ ಓಪನ್ಸ್: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಪಿ.ವಿ. ಸಿಂಧು.

ಫ್ರೆಂಚ್ ಓಪನ್ಸ್: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಪಿ.ವಿ. ಸಿಂಧು.

ಪ್ಯಾರಿಸ್​: ಪ್ರಶಸ್ತಿ ಬರ ಎದುರಿಸುತ್ತಿರುವ ಸೈನಾ ನೆಹ್ವಾಲ್​ ಹಾಗೂ ವಿಶ್ವಚಾಂಪಿಯನ್​ಶಿಪ್ ಗೆದ್ದ ನಂತರ ಸ್ಥಿರ ಪ್ರದರ್ಶನ ತೋರಲು ವಿಫಲರಾಗುತ್ತಿರುವ ಪಿವಿ ಸಿಂಧು ಫ್ರೆಂಚ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.ವಿಶ್ವದ 6ನೇ ಶ್ರೇಯಾಂಕದ ಪಿವಿ ಸಿಂಧು ಸಿಂಗಾಪುರದ ಜಿಯಾ ಮಿನ್​ ಯೊ ಅವರನ್ನು 21-10, 21-13 ರಲ್ಲಿ ಮಣಿಸುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.ಮತ್ತೊಬ್ಬ ಸ್ಟಾರ್​ ಆಟಗಾರ್ತಿ ಸೈನಾ ನೆಹ್ವಾಲ್​ 21-10, 21-11 ರಲ್ಲಿ ಡೆನ್ಮಾರ್ಕ್​ನ ಲೈನ್‌ ಮಾರ್ಕ್‌ ಜಾರ್ಸ್‌ ಫೆಲ್ಡ್‌ ವಿರುದ್ಧ ಗೆಲುವು ಸಾಧಿಸಿ ಭಾರತದ ಪರ ಮೊದಲಿಗರಾಗಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದರು.​ ಸೈನಾ ಮುಂದಿನ ಸುತ್ತಿನಲ್ಲಿ 16 ಶ್ರೇಯಾಂಕದ ದಕ್ಷಿಣ ಕೊರಿಯಾದ ಆನ್​ ಸೆ ಯಂಗ್​ ವಿರುದ್ಧ ಸೆಣಸಾಡಲಿದ್ದಾರೆ. ಡಬಲ್ಸ್​ ವಿಭಾಗದಲ್ಲಿ ಸಾಥ್ವಿಕ್​- ಚಿರಾಗ್​ ಜೋಡಿ ವಿಶ್ವದ 2ನೇ ಶ್ರೇಯಾಂಕದ ಇಂಡೋನೇಷ್ಯಾ ಜೋಡಿಯಾದ ಮೊಹಮ್ಮದ್​ ಅಹ್ಸಾನ್​​ ಮತ್ತು ಹೆಂದ್ರ ಸತ್ಯವಾನ್ ವಿರುದ್ಧ 21-18, 18-21, 21-13 ರಲ್ಲಿ ಮಣಿಸುವ ಮೂಲಕ ಆಶ್ವರ್ಯಕರ ಗೆಲುವು ಸಾಧಿಸಿದ್ದಾರೆ.​

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!