Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಬಂಗಾಳ ಸಿಎಂ ಆಪ್ತ, ಮಾಜಿ ಪೊಲೀಸ್​​ ಕಮಿಷನರ್​ ಇಂದು ಅರೆಸ್ಟ್​..?

ಬಂಗಾಳ ಸಿಎಂ ಆಪ್ತ, ಮಾಜಿ ಪೊಲೀಸ್​​ ಕಮಿಷನರ್​ ಇಂದು ಅರೆಸ್ಟ್​..?

ಕೋಲ್ಕತ್ತ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಆಪ್ತ, ಮಾಜಿ ಪೊಲೀಸ್​ ಕಮಿಷನರ್​​ ರಾಜೀವ್ ಕುಮಾರ್​ ದೇಶ ಬಿಟ್ಟು ತೆರಳದಂತೆ ನಿನ್ನೆ ಸಿಬಿಐ ಏರ್​ಪೋರ್ಟ್​ ಅಧಿಕಾರಿಗಳಿಗೆ ನೋಟಿಸ್​ ನೀಡಿತ್ತು. ಈಗ ಇದರ ಬೆನ್ನಲ್ಲೆ ಇಂದು ರಾಜೀವ್​ ಕುಮಾರ್​ರನ್ನ ಸಿಬಿಐ ತಂಡ ಬಂಧಿಸಿ ಶಾರದಾ ಚಿಟ್​ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ರಾಜೀವ್​ರನ್ನ ತನಿಖೆ ಮಾಡಲು ಅವರ ಆಫೀಸ್​ ಮತ್ತು ಮನೆಗೆ ತೆರಳಿದ್ದಾಗ ಸಿಎಂ ಮಮತಾ ಬ್ಯಾನರ್ಜಿ 70 ಗಂಟೆ ಕಾಲ ಪ್ರತಿಭಟನೆ ಮಾಡಿದ್ದರು. ಸದ್ಯ ಇದು ಸಹ ತನಿಖೆಯಲ್ಲಿ ಪ್ರಮುಖವಾದ ಅಂಶವಾಗಿದ್ದರಿಂದ ವಿಚಾರಣೆಯಲ್ಲಿ ಈ ಬಗ್ಗೆನೂ ಪ್ರಶ್ನೆಗಳನ್ನ ಕೇಳಲಾಗುತ್ತದೆ ಅಂತ ತಿಳಿದುಬಂದಿದೆ. ರಾಜೀವ್​ 1989ರ ಐಪಿಎಸ್​ ಬ್ಯಾಚ್​ನ ಅಧಿಕಾರಿಯಾಗಿದ್ದು, ಪೋಂಜಿ ಸ್ಕ್ಯಾಮ್​ನಲ್ಲಿಯೂ ಪ್ರಮುಖ ಆರೋಪಿ ಅಂತ ಹೆಸರು ಕೇಳಿ ಬಂದಿದೆ. ಶಾರದಾ ಚಿಟ್​ ಫಂಡ್​ ಕೇಸ್​​ಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆ ನಾಶಪಡಿಸಿದ ಆರೋಪ ರಾಜೀವ್​ ಅವರ ಮೇಲಿದೆ. ಈ ಕುರಿತು ತನಿಖೆಗೆಂದು ಇದೇ ಫೆಬ್ರವರಿಯಲ್ಲಿ ರಾಜೀವ್​ ಮನೆಗೆ ಸಿಬಿಐ ತಂಡ ತೆರಳಿತ್ತು. ಈ ವೇಳೆ ಸಿಎಂ ದೀದಿ, ಧರಣಿ ಮಾಡಿ ತನಿಖೆಗೆ ಅಡ್ಡಿ ಪಡಿಸಿ, ಇದು ‘ಸಾಂವಿಧಾನಿಕ ನಿಯಮಗಳ ಮೇಲೆ ದಾಳಿ’ ಎಂದು ಕರೆದಿದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!