Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಬಡವರ ಹಸಿದ ಹೊಟ್ಟೆ ತುಂಬಿಸಲು ಮತ್ತೆ ನಾಲ್ಕು ಇಂದಿರಾ ಕ್ಯಾಂಟೀನ್ ಗೆ ಚಾಲನೆ

ಬಡವರ ಹಸಿದ ಹೊಟ್ಟೆ ತುಂಬಿಸಲು ಮತ್ತೆ ನಾಲ್ಕು ಇಂದಿರಾ ಕ್ಯಾಂಟೀನ್ ಗೆ ಚಾಲನೆ

Spread the love

ಹುಬ್ಬಳ್ಳಿ ನ.೧೭ : ನಗರದ ಉಣಕಲ್ ಕೆರೆ ಉದ್ಯಾನವನ, ಕಿಮ್ಸ, ಹೊಸಬಸ್ ನಿಲ್ದಾಣ ಹಾಗೂ ಬೆಂಗೇರಿ ಸಂತೆ ಮೈದಾನಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಖಾತೆಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವ್ಹಿ. ದೇಶಪಾಂಡೆಯವರು ಉದ್ಘಾಟಿಸಿದರು. ಸಚಿವ ದೇಶಪಾಂಡೆ ಮಾತನಾಡಿ, ರೈತರು, ಬಡವರ ಪಾಲಿನ ತಾಯಿಯಂತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸ್ಮರಣಾರ್ಥ ರಾಜ್ಯದಲ್ಲಿ ಮುಖ್ಯವಾಗಿ ಪಟ್ಟಣ ಪ್ರದೇಶದಲ್ಲಿ ರಾಜ್ಯದ ಎಲ್ಲಾ ಕಡೆ ಪ್ರಾರಂಭವಾಗಿವೆ. ಇಡೀ ರಾಜ್ಯದಲ್ಲಿ ಅಡುಗೆ ಕೋಣೆ ಸಹಿತವಾಗಿ ೧೭೧, ಮತ್ತು ಕೇವಲ ಕ್ಯಾಂಟಿನ್‌ಗಳು ೨೪೮ ಕಡೆ ಇವೆ. ಧಾರವಾಡ ಜಿಲ್ಲೆಯಲ್ಲಿ ೧೨ ಇಂದಿರಾ ಕ್ಯಾಂಟೀನ್‌ಗಳಿವೆ ಧಾರವಾಡದಲ್ಲಿ ಎರಡು ಹಾಗೂ ಹುಬ್ಬಳ್ಳಿಯಲ್ಲಿ ನಾಲ್ಕು ಕ್ಯಾಂಟಿನ್‌ಗಳನ್ನು ಇಂದು ಆರಂಭಿಸಲಾಗುತ್ತಿದೆ. ಬಡವರು, ಕಾರ್ಮಿಕರಿಗೆ, ಕೂಲಿಕಾರರಿಗೆ ಮುಂಜಾನೆ ರೂ.೫ ರಲ್ಲಿ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಪ್ರತ್ಯೆÃಕವಾಗಿ ರೂ.೧೦/- ರಲ್ಲಿ ಭೋಜನ ಕೂಪನ್‌ಗಳನ್ನು ಪಡೆಯಬಹುದು. ಒಟ್ಟು ರೂ.೨೫/-ಗಳಲ್ಲಿ ಒಬ್ಬ ವ್ಯಕ್ತಿ ದಿನದ ಮೂರು ಹೊತ್ತು ಆಹಾರ ಪಡೆಯಬಹುದು. ಇದಕ್ಕಾಗಿ ಒಟ್ಟು ಒಬ್ಬ ವ್ಯಕ್ತಿಗೆ ೫೭ ರೂ. ಖರ್ಚಾಗುತ್ತದೆ. ಸರ್ಕಾರ ೩೨ ರೂ. ಸಬ್ಸಿಡಿ ನೀಡುತ್ತದೆ. ಪುರಸಭೆ,ನಗರಸಭೆ ವ್ಯಾಪ್ತಿಯ ಕ್ಯಾಂಟೀನ್ ಗಳ ಪೂರ್ಣ ಸಬ್ಸಿಡಿ ಸರಕಾರ ಭರಿಸಲಿದೆ.ಮಹಾನಗರಪಾಲಿಕೆ ವ್ಯಾಪ್ತಿಯ ಕ್ಯಾಂಟೀನ್ ಗಳ ಸಬ್ಸಿಡಿಯ ಶೇ.೭೦ ರಷ್ಟು ಹಣ ಆ ಸಂಸ್ಥೆಗಳು ಭರಿಸಬೇಕು.ಈ ಹಿಂದೆ ತಮಿಳುನಾಡಿನಲ್ಲಿ ಇಂತಹ ಕ್ಯಾಂಟೀನ್‌ಗಳು ಇದ್ದವು. ಅನ್ನಭಾಗ್ಯ, ಕ್ಷಿÃರಭಾಗ್ಯ, ವೃದ್ಧಾಪ್ಯ, ವಿಧವಾ ಪಿಂಚಣಿಯಂತಹ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸರಕಾರ ಜನಹಿತ ಕಾಯುತ್ತಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಯ ಪಿಂಚಣಿ ಬಾಕಿ ಮೊತ್ತದ ಕುರಿತು ಸರಕಾರಕ್ಕೆ ಆ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಲು ವಿಳಂಬ ಮಾಡಿದ್ದರಿಂದ ಸಮಸ್ಯೆ ಉದ್ಭವಿಸಿದೆ ಎಂದರು.ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಮಾತನಾಡಿ ಮಹಾನಗರಪಾಲಿಕೆಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳ ಸಬ್ಸಿಡಿಯನ್ನೂ ಸಹ ಸಂಪೂರ್ಣವಾಗಿ ಸರಕಾರವೇ ಭರಿಸಬೇಕು.ಪಿಂಚಣಿಯ ಬಾಕಿ ವೇತನದ ಮೊತ್ತ ಸರಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಸಂಸದ ಪ್ರಹ್ಲಾದ ಜೋಷಿ,ಶಾಸಕರಾದ ಸಿ.ಎಸ್.ಶಿವಳ್ಳಿ,ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಹಾನಗರಪಾಲಿಕೆ ಮೇಯರ್ ಸುಧೀರ್ ಸರಾಫ್, ಉಪಮೇಯರ್ ಮೇನಕಾ ಹುರಳಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ,ರಾಜಣ್ಣ ಕೊರವಿ, ಉಮೇಶ ಕೌಜಗೇರಿ,ನಜೀರ್ ಹೊನ್ಯಾಳ,ಮುಖಂಡರಾದ ಅಲ್ತಾಫ್ ಹಳ್ಳೂರ,ಸದಾನಂದ ಡಂಗನವರ,ಮೋಹನ ಅಸುಂಡಿ,ಅನಿಲಕುಮಾರ ಪಾಟೀಲ, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್, ಮಹಾನಗರಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ತಹಸೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಅನೇಕ ಅಧಿಕಾರಿಗಳು, ಗಣ್ಯರು ಇದ್ದರು.

Check Also

ಆಗಸ್ಟ್ 8 ರ ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

Spread the loveಆಗಸ್ಟ್ 8 ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!