Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಬಾಬಾ ರಾಮ್​ಪಾಲ್ ಆಶ್ರಮದಲ್ಲಿ ಕೊಲೆ ಪ್ರಕರಣ: ಇಂದು ತೀರ್ಪು ಪ್ರಕಟ..

ಬಾಬಾ ರಾಮ್​ಪಾಲ್ ಆಶ್ರಮದಲ್ಲಿ ಕೊಲೆ ಪ್ರಕರಣ: ಇಂದು ತೀರ್ಪು ಪ್ರಕಟ..

ಚಂಡೀಗಢ: ಕೊಲೆ ಹಾಗೂ ದೇಶ ದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿರುವ ಹರಿಯಾಣದ ಸ್ವಯಂ ಘೋಷಿತ ದೇವಮಾನವ, ಸತ್​ಲೋಕ್​ ಆಶ್ರಮದ ಮುಖ್ಯಸ್ಥ ಬಾಬಾ ರಾಮ್​ಪಾಲ್​ ಪ್ರಕರಣದ ತೀರ್ಪು ಇಂದು ಹೊರ ಬೀಳಲಿದೆ. ತಿಸಾರ್​ ಕೋರ್ಟ್​ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸಲಿದ್ದು, ಮುಂಜಾಗ್ರತಾ ಕೃಮವಾಗಿ ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್​ನಿಂದ ತಿಸಾರ್​ಗೆ ಹೋಗುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 2006ರಲ್ಲಿ ಸತ್​ಲೋಕ್ ಆಶ್ರಮದಲ್ಲಿ ನಡೆದ ಕೊಲೆ, ವಂಚನೆ ಕೇಸ್​ಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತನಾಗಿ 2014 ರಿಂದ ಬಾಬಾ ರಾಮ್​ಪಾಲ್​ ಜೈಲುವಾಸ ಅನುಭವಿಸುತ್ತಿದ್ದಾರೆ. ಇನ್ನು, 2014ರಲ್ಲಿ ರಾಮ್​ಪಾಲ್​ನನ್ನು ಬಂಧಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಸುಮಾರು 15,000 ಆಶ್ರಮದ ಭಕ್ತರು ಅಡ್ಡಿಪಡಿಸಿದ್ದರು. ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿದಂತೆ ರಾಮ್​ಪಾಲ್ ವಿರುದ್ಧ ದೂರು ದಾಖಲಾಗಿದ್ದು ಇಂದು ತೀರ್ಪು ಪ್ರಕಟವಾಗಲಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!