Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ,

ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ,

ಬೆಂಗಳೂರು: ವಾಟ್ಸ್​ಆ್ಯಪ್​​ ಫಾರ್ವರ್ಡ್​ ಮೆಸೇಜ್​ಗಳು ಹೇಗೆ ಸಮಾಜವನ್ನ ಹಾಗೂ ಸಮಾಜದ ಜನರನ್ನು ತಲ್ಲಣಗೊಳಿಸುತ್ತವೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಬರೊಬ್ಬರಿ ನಾಲ್ಕು ವರ್ಷದ ಹಿಂದಿನ ವಾಟ್ಸ್​ಆ್ಯಪ್​​ ಸಂದೇಶವೊಂದು ಮರಳಿ ಹರೆದಾಡುವ ಮೂಲಕ ಬೆಂಗಳೂರಿನ ಕುಟುಂಬವನ್ನು ಇಂಡಿಹಿಪ್ಪೆ ಮಾಡಿ ಹಾಕಿದೆ ಎಂದರೆ ನಂಬಲೇಬೇಕು.
‘‘ಚಿಕ್ಕ ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ. ತಲೆಗೆ ಗಂಭೀರ ಗಾಯವಾಗಿದೆ. ಆತನ ಪೋಷಕರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ ಮಾಡುವ ಮೂಲಕ ಆತನ ತಂದೆ-ತಾಯಿಗಳು ಆಸ್ಪತ್ರೆಗೆ ತಲುಪುವಂತಾಗಲು ನೆರವಾಗಿ. ದಯವಿಟ್ಟು ಇದನ್ನು ಶೇರ್ ಮಾಡಿ ಎಂಬುದು ನನ್ನ ಮನವಿ’’ ಎನ್ನುವ ಸಂದೇಶವೇ ಆ ಸಂದೇಶ. ಸಂದೇಶ 25 ಸೆಕೆಂಡ್​ಗಳಲ್ಲಿ 25 ಜನರಿಂದ ಶೇರ್​ ಆಗಿದೆ. ಅಂತೆಯೇ ಬೆಂಗಳೂರಿನ ಬನಶಂಕರಿ ನಿವಾಸಿ ಪ್ರಶಾಂತ್ ಸಂಬರ್ಗಿ (42)ಯನ್ನು ತಲುಪಿದೆ. ಮುಂಜಾನೆ ಈ ಸಂದೇಶವನ್ನು ನೋಡಿ ಪ್ರಶಾಂತ್ ಹೌಹಾರಿದ್ದಾರೆ. ಆ ಸಂದೇಶದಲ್ಲಿದ್ದ ಫೋಟೋ ತನ್ನ ಸಹೋದರಿಯ ಮಗನನ್ನೇ ಹೋಲುತ್ತಿದ್ದದ್ದು, ಅವರನ್ನು ಬೆಚ್ಚಿ ಬೀಳಿಸಿದೆ. ತಕ್ಷಣ ಪ್ರಶಾಂತ್​ ಸಹೋದರಿಗೆ ಕರೆ ಮಾಡಿ ವಿಚಾರಿಸಿದ್ದಲ್ಲದೆ, ಆ ಸಂದೇಶವನ್ನು ತಮ್ಮ ಸಹೋದರಿಗೂ ಕಳುಹಿಸಿದ್ದಾರೆ. ಶಾಲೆಗೆ ಹೋದ ಸಹೋದರಿಯ ಮಗು ಶಾಲೆಗೆ ತಲುಪಿದ್ದಾನೆಯೇ ಇಲ್ಲವೋ ಎನ್ನುವುದನ್ನು ಶಾಲಾ ಆಡಳಿತ ಮಂಡಳಿವರು ತಿಳಿಸಿಲ್ಲ ಎನ್ನುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತದೆ. ಪ್ರಶಾಂತ್ ಮೀಟಿಂಗ್​ನಲ್ಲಿದ್ದ ತನ್ನ ಸಹೋದರಿಯ ಗಂಡನಿಗೂ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅವರು ಸಹ ಆತಂಕಕ್ಕೀಡಾಗಿದ್ದಾರೆ. ಪ್ರಶಾಂತ್​ ಕಿಮ್ಸ್​ಗೆ ಪೋನ್​ ಹಾಯಿಸಿ ವಿಚಾರಿಸಿದಾಗ ಕಾಕತಾಳಿಯವೆಂಬಂತೆ ಅಲ್ಲೂ ಪಾಲಕರಿಲ್ಲದ ಮಗುವೊಂದು ದಾಖಲಾಗಿತ್ತು. ಬಳಿಕ ಶಾಲೆಗೆ ಹೋಗಿ ವಿಚಾರಿಸಲು ಮಗು ಶಾಲೆಯಲ್ಲೇ ಇರುವುದನ್ನು ಕಂಡು ಇಡೀ ಕುಟುಂಬಸ್ಥರು ನಿರಾಳರಾಗಿದ್ದಾರೆ. ಸುಳ್ಳು ವದಂತಿಗಳಿಗೆ ಅಕ್ಷರಸ್ಥರಾದ ನೀವೇ ಹೀಗೆ ಹೆದರಿದರೆ ಹೇಗೆ, ತಾಂತ್ರಿಕ ತೊಂದರೆಯ ಕಾರಣ ಮಗು ಶಾಲೆಗೆ ಹಾಜರಾಗಿರುವುದರ ಕುರಿತು ಸಂದೇಶ ಕಳುಹಿಸಲಾಗಿಲ್ಲ ಅಂತಾ ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ. ಇನ್ನು ಸಂದೇಶದ ಜಾಡು ಹಿಡಿದು ಹೋದ ಪ್ರಶಾಂತ್​ಗೆ ಸಂದೇಶ ರವಾನಿಸಿದವನು ಸಿಗುತ್ತಾನೆ. ಅವನನ್ನು ಏಕೆ ಇದನ್ನು ಕಳುಹಿಸಿದೆ ಎಂದು ಕೇಳಿದ್ದಕ್ಕೆ ಅವನ ಉತ್ತರ ಹೊಸ ಮೊಬೈಲ್​ ಖರಿದೀ ಮಾಡಿದ್ದೆ, ವಾಟ್ಸ್​​ ಆ್ಯಪ್​ ಬ್ಯಾಕ್​ ಆಫ್​ನ ಸಂದರ್ಭದಲ್ಲಿ ವ್ಯಾಟ್ಸ್​ ಆಫ್​ ಕೆಸಲ ಮಾಡುತ್ತೋ ಇಲ್ಲವೋ ಎಂದು ಪರೀಕ್ಷಿಸಲು ಸಂದೇಶ ಕಳುಹಿಸಿದ್ದೇನೆ ಎಂದಿದ್ದಾನೆ.
ನಿಮ್ಮ ಸಲಹೆ, ಸೂಚನೆ ಮತ್ತು

Share

About Shaikh BIG TV NEWS, Hubballi

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!