Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್

ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್

2019 : ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನಿಯಾಗಲ್ಲ: ಶರದ್ ಪವಾರ್ಮುಂಬೈ, ಮಾರ್ಚ್ 13: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. ಆದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ನಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಮುಖಂಡ ಶರದ್ ಪವಾರ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ 78 ವರ್ಷ ವಯಸ್ಸಿನ ಪವಾರ್, ‘ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದಾದರೂ ಅದಕ್ಕೆ ಇನ್ನಿತರ ಪಕ್ಷಗಳು ಬೆಂಬಲ ನೀಡುವುದಿಲ್ಲ. ಆ ಕಾರಣ ಬಹುಮತ ಪಡೆಯಲಾಗದೆ ಅದು ಸರ್ಕಾರ ರಚಿಸುವಲ್ಲಿ ವಿಪಲವಾಗುತ್ತದೆ. ಮತ್ತು ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದಿದ್ದಾರೆ.ಲೋಕ ಕದನ LIVE: ಮೋದಿ ವಿರುದ್ಧ ವಾರಣಾಸಿಯಲ್ಲಿ ದೀದಿ ರಣಕಹಳೆ?ಅಕಸ್ಮಾತ್ ಬಿಜೆಪಿಗೆ ಬೇರೆ ಪಕ್ಷಗಳು ಬೆಂಬಲ ನೀಡಿದರು, ಅವರು ಪ್ರಧಾನಿಯನ್ನಾಗಿ ಮತ್ತೆ ನರೇಂದ್ರ ಮೋದಿ ಅವರನ್ನು ನೇಮಿಸುವುದಾದರೆ ಬೆಂಬಲ ನೀಡುವುದಿಲ್ಲ ಎನ್ನುತ್ತಾರೆ. ಆದ್ದರಿದ ಬಿಜೆಪಿ ಅಧಿಕಾರಕ್ಕೆ ಬಂದರೂ, ಬಾರದೆ ಇದ್ದರೂ ಮೋದಿ ಮತ್ತೆ ಪ್ರಧಾನಿಯಾಗೊಲ್ಲ ಎಂದು ಪವಾರ್ ಹೇಳಿದ್ದಾರೆ.”2019 ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ 43 ಸ್ಥಾನಗಳನ್ನು ಗೆಲ್ಲಬಹುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಅವರೆಲ್ಲೋ ಗೊಂದಲದಲ್ಲಿ ಹೇಳಿದ್ದಿರಬೇಕು. ಎಲ್ಲಾ 48 ಕ್ಷೇತ್ರಗಳನ್ನೂ ಬಿಜೆಪಿಯೇ ಗೆಲ್ಲುತ್ತದೆ ಎಂದಿದ್ದರೆ ಸರಿ ಇರುತ್ತಿತ್ತು” ಎಂದ ಅವರು ವ್ಯಂಗ ಮಾಡಿದರು.ಲೋಕಸಭಾ ಚುನಾವಣೆಗೆ ಮುನ್ನ ಕೋಡಿಶ್ರೀ ಭವಿಷ್ಯ: ಬಿಜೆಪಿ ಹೊಡೀರೀ ಹಲಗೀ…ಏಪ್ರಿಲ್ 11 ರಿಂದ ಆರಂಭವಾಗುವ ಚುನಾವಣೆ ಮೇ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!