Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಬಿ ಎಚ್ ಕೆ ಫಿಶ್ ಮಾಲ ಮಾಲೀಕ ಇರ್ಷಾದ ಕುಸುಗಲ್ ನೇತೃತ್ವದಲ್ಲಿ ರಂಜಾನ ತಿಂಗಳದ ಪ್ರತಿದಿನ ಇಪ್ತಿಯಾರ್ ಕೂಟ.

ಬಿ ಎಚ್ ಕೆ ಫಿಶ್ ಮಾಲ ಮಾಲೀಕ ಇರ್ಷಾದ ಕುಸುಗಲ್ ನೇತೃತ್ವದಲ್ಲಿ ರಂಜಾನ ತಿಂಗಳದ ಪ್ರತಿದಿನ ಇಪ್ತಿಯಾರ್ ಕೂಟ.

Spread the love

ಹುಬ್ಬಳ್ಳಿ: ಇಸ್ಲಾಂ ಧರ್ಮದ ಪವಿತ್ರ ರೋಜಾ ಆಚರಣೆಯ ಮೂಲಕ ಧಾರ್ಮಿಕ ಪರಂಪರೆಯನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ಬಿಎಚ್ ಕೆ ಫಿಶ್ ಮಾಲ್ ಮಾಲೀಕರಾದ ಇರ್ಷಾದ ಕುಸುಗಲ ಅವರು ಸುಮಾರು ಏಳು ನೂರು ರೋಜಾ ಆಚರಿಸುವ ಬಡ ಜನರಿಗೆ ಇಪ್ತಿಯಾರ್ ಕೂಟವನ್ನು ಎರಡು ವರ್ಷದಿಂದ ಆಚರಿಸುವ ಮೂಲಕ ರಂಜಾನ ತಿಂಗಳಲ್ಲಿ ಪ್ರತಿದಿನ ಸಂಜೆ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಶಾನ್ ರಾಯಭಾಗ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿ ಹೊರಡಿಸಿ ಮಾತನಾಡಿದ ಅವರು, ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ ಹಬ್ಬದ ಅಂಗವಾಗಿ ಪ್ರತಿವರ್ಷ ಮುಸಲ್ಮಾನರು ಒಂದು ತಿಂಗಳ ಕಾಲ ರೋಜಾ (ಉಪವಾಸ) ಆಚರಣೆ ಮಾಡುವುದು ಹಿಂದಿನ ಕಾಲದಿಂದಲೂ ಸಮಾಜದಲ್ಲಿ ನಡೆದುಕೊಂಡು ಬಂದಿರುವ ಆಚರಣೆಯಾಗಿದೆ. ದೇಶದಾದ್ಯಂತ ಪ್ರತಿಯೊಬ್ಬ ಮುಸಲ್ಮಾನರೂ ಸಹ ರೋಜಾ ಆಚರಣೆ ನಮಾಜ್‍ನಲ್ಲಿ ತೊಡಗಿ ದೇವರ ಸ್ಮರಣೆಯನ್ನು ಮಾಡುವ ಮೂಲಕ ಪೈಗಂಬರರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಒಂದು ತಿಂಗಳ ಕಾಲ ಸೂರ್ಯ ಉದಯಿಸುವ ಮೊದಲು ಸೂರ್ಯಾಸ್ತವಾಗುವ ನಂತರದವರೆಗೂ ಯಾವುದೆ ರೀತಿಯ ಆಹಾರವನ್ನು ಸೇವಿಸದೇ ಮನಸ್ಸಿನಲ್ಲಿ ಕೆಟ್ಟ ಯೋಚನೆಯನ್ನು ಮಾಡದೇ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂಬ ಉದ್ದೇಶದಿಂದ ಈ ಉಪವಾಸ ವೃತವನ್ನು ಕೈಗೊಳ್ಳಲಾಗುತ್ತದೆ ಎಂದರು.ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ರಂಜಾನ ತಿಂಗಳದಲ್ಲಿ ಪ್ರತಿದಿನವೂ ಇಪ್ತಿಯಾರ ಕೂಟವನ್ನು ಏರ್ಪಡಿಸುವ ಮೂಲಕ ಬಡ ಜನರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರತಿದಿನವೂ ವಿವಿಧ ಹಾಗೂ ವಿಭಿನ್ನ ರೀತಿಯ ಅಹಾರದ ವ್ಯವಸ್ಥೆ ಮಾಡಲಾಗುತ್ತದೆ.ಒಂದು ದಿನಕ್ಕೆ ಸುಮಾರು 25-30 ಸಾವಿರ ರೂಪಾಯಿ ಖರ್ಚು ಆಗುತ್ತದೆ ಎಂದರು.ಉಪವಾಸದ ಮಹತ್ವ: ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮತ್ತು ಜೀವನ ಆನಂದವನ್ನು ಹೆಚ್ಚಿಸುತ್ತದೆ. ಉಪವಾಸ ಮಾಡುವದರೊಂದಿಗೆ ಮನಸ್ಸಿನಲ್ಲಿ ಏಳುವ ಬಯಕೆಯನ್ನು ನಿಗ್ರಹ ಮಾಡಿಕೊಂಡು ತಮ್ಮನ್ನು ತಾವು ಹತೋಟಿಯಲ್ಲಿ ಇಟ್ಟುಕೊಂಡು ಒಳ್ಳೆಯ ಕೆಲಸದಲ್ಲಿ ಮುಂದುವರೆಯುವ ಉದ್ದೇಶ ಈ ಉಪವಾಸ ವ್ರತದ ಹಿಂದಿನದು.ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವ್ಯಾಪಾರಿ ಇರ್ಷಾದ ಅಹಮದ ಕುಸಗಲ ಅವರು ಪ್ರತಿವರ್ಷ ರಂಜಾನ ಹಬ್ಬದ ಪ್ರಯುಕ್ತ ಉಪವಾಸ ವ್ರತ ಕೈಗೊಳ್ಳುವ ,ಮುಸಲ್ಮಾನ ಬಾಂಧವರಿಗೆ 30 ದಿನಗಳ ಕಾಲವೂ ಸಂಜೆ ರೋಜಾ ಬಿಡುವ ವೇಳೆ ಆಹಾರವನ್ನು ನೀಡುತ್ತಿದ್ದಾರೆ. ಹುಬ್ಬಳ್ಳಿಯ ಬಿ.ಎಚ್.ಕೆ. ಫೀಶಿ ಮಾಲ್ ನ ಮಾಲೀಕರಾಗಿರುವ ಇರ್ಷಾದ ಅವರು ತಮ್ಮ ಸ್ವ ಇಚ್ಚೆಯಿಂದ ಸ್ವಂತ ಖರ್ಚಿನಲ್ಲಿ ಒಂದು ಒಳ್ಳೆಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿದಿನ ಸಂಜೆ 7 ಗಂಟೆಗೆ ಹುಬ್ಬಳ್ಳಿಯ ಗಣೇಶ ಪೇಟ ಬಳಿಯ ಬಿ.ಎಚ್. ಕೆ ಮೀನು ಮಳಿಗೆಯ ಎದುರು ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

Check Also

ಭಾರಿ ಬೆಲೆ ಬಾಳುವ ಅಕ್ರಮ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು

Spread the loveಕೊಳ್ಳೇಗಾಲ ಭಾ.ತ.ಮ 553 ಲೀಟರ್, ಬಿಯರ್ 2.64, ಸೇಂದಿ 46, ಕಳ್ಳ ಭಟ್ಟಿ ಸಾರಾಯಿ 19 ವರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!