Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಬೆಂಗಳೂರಿನ ಪಬ್, ಬಾರ್, ರೆಸ್ಟೋರೆಂಟ್ ಗಳು ಧೂಮಪಾನ ನಿಷೇಧಿತ ವಲಯ: ಬಿಬಿಎಂಪಿ ಸುತ್ತೋಲೆ

ಬೆಂಗಳೂರಿನ ಪಬ್, ಬಾರ್, ರೆಸ್ಟೋರೆಂಟ್ ಗಳು ಧೂಮಪಾನ ನಿಷೇಧಿತ ವಲಯ: ಬಿಬಿಎಂಪಿ ಸುತ್ತೋಲೆ

ಬೆಂಗಳೂರು: ಬೆಂಗಲೂರಿನ ಹೋಟೆಲ್ ಗಳು, ಕ್ಲಬ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳು ಇನ್ನು ಮುಂದೆ ಧೂಮಪಾನ ಮುಕ್ತವಾಗಲಿದೆ. ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟೆ, ಪಬ್ ಗಳನ್ನು “ಸಂಪೂರ್ಣ ಧೂಮಪಾನ ನಿಷೇಧಿತ ವಲಯ” ವನ್ನಾಗಿ ರೂಪಿಸಲು ಬೃಅಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೀರ್ಮಾನಿಸಿದ್ದು ಇದಕ್ಕಾಗಿ ಸುತ್ತೋಲೆಯನ್ನು ಹೊರಡಿಸಿದೆ.
ಮುಂದಿನ ದಿನಗಳಲ್ಲಿ ಈ ನಿಯಮವನ್ನು ಪಾಲಿಸದ ಹೋಟೆಲ್, ಪಬ್, ಬಾರ್ ಗಳ ಪರವಾನಗಿಯನ್ನು ರದ್ದು ಮಾಡುವುದಾಗಿ ಸಹ ಸುತ್ತೋಲೆಯ ಮೂಲಕ ಎಚ್ಚರಿಸಲಾಗಿದೆ. ನಿಯಮಗಳನ್ನು ಪರ್ಣಾಮಕಾರಿಯಾಗಿ ಅನುಸರಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಆರೋಗ್ಯ ವಿಭಾಗದ ಅಡಿಯಲ್ಲಿ ತಂಬಾಕು ಕಂಟ್ರೋಲ್ ಸೆಲ್ ಅನ್ನು ಸ್ಥಾಪಿಸಿದೆ.
30 ಕ್ಕಿಂತಲೂ ಹೆಚ್ಚು ಇರುವ ಆಸನ ಸಾಮರ್ಥ್ಯವನ್ನು ಹೊಂದಿರುವ ಪಬ್, ಬಾರ್, ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳು ಕಾನೂನಿನ ಪ್ರಕಾರ ಗೊತ್ತುಪಡಿಸಿದ ಧೂಮಪಾನ ವಲಯವನ್ನು ಸ್ಥಾಪಿಸಬಯಸಿದರೆ ಅವುಗಳು ತಂಬಾಕು ಕಂಟ್ರೋಲ್ ಸೆಲ್ ನಿಂದ ಎನ್ ಓಸಿ ಪಡೆಯುವುದು ಕಡ್ಡಾಯವಾಗಲಿದೆಎಂದು ಬಿಬಿಎಂಪಿ ಕಮಿಷನರ್ ಎನ್ ಮಂಜುನಾಥ ಪ್ರಸಾದ್ ಬುಧವಾರ ಹೇಳಿದರು.
ಆಹಾರ, ಮದ್ಯ, ನೀರು, ಪಾನೀಯಗಳನ್ನು ಗೊತ್ತುಪಡಿಸಿದ ಧೂಮಪಾನ ವಲಯದಲ್ಲಿ ಪೂರೈಸಲು ರೆಸ್ಟೋರೆಂಟ್ ಅಥವಾ ಬಾರ್ ಗಳಿಗೆ ಅನುಮತಿಸುವುದಿಲ್ಲ.ಈ ನಿಯಮಗಳನ್ನು ಅನುಸರಿಸಲಾಗದಿದ್ದರೆ, ಮಾಲೀಕರು ತಕ್ಷಣವೇ ಧೂಮಪಾನ ವಲಯವನ್ನು ತೆಗೆದು ಹಾಕಬೇಕು. ಇಲ್ಲದೆ ಹೋದಲ್ಲಿ  ಬಿಬಿಎಂಪಿ ಅಧಿಕಾರಿಗಳು ತಮ್ಮ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಬಹುದು. ಬೆಂಕಿ ಅಪಘಾತಗಳನ್ನು ತಪ್ಪಿಸಲು ಮತ್ತು ಸಾರ್ವಜನಿಕರಲ್ಲಿ ಉತ್ತಮ ಆರೋಗ್ಯ ಕಾಳಜಿಯನ್ನು ತರಲು ಹೆಚ್ಚು ಹೆಚ್ಚು  ಧೂಮಪಾನ ಮುಕ್ತ ವಲಯಗಳನ್ನು ರಚಿಸಲು ನೆರವಾಗುವಂತೆ ಸಾರ್ವಜನಿಕರು, ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಅವರು ಮನವಿ ಮಾಡಿದ್ದಾರೆ.
ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಆಯೋಜನೆಯಾಗಿದ್ದ  ಜಾಗೃತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಾದ ಕ್ರಮ ಜಾರಿಗೆ ತರಲಾಗುತ್ತಿದೆ.ಧೂಮಪಾನಿಗಳಧೂಮಪಾನದಿಂದ ಅಥವಾ ಧೂಮಪಾನದ ಧೂಮದಿಂಡ ಸಾರ್ವಜನಿಕರನ್ನು ರಕ್ಷಿಸಲು ಈ ಕ್ರಮ ಅನುಸರಿಸಲು ತೀರ್ಮಾನಿಸಲಾಗಿದೆ. ಅಕ್ರಮ ಧೂಮಪಾನ ಪ್ರದೇಶಗಳು / ವಲಯಗಳನ್ನು ನಿಗ್ರಹಿಸುವ ಅಗತ್ಯದ ಬಗ್ಗೆ ಕೌನ್ಸಿಲ್  ಸರ್ವಸಮ್ಮತ ನಿರ್ಣಯಕ್ಕೆ ಬಂದಿದೆ.
ಕಾನೂನು ಉಲ್ಲಂಘನೆ ಮಾಡುವ ಪಬ್, ಬಾರ್, ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂಡು ಮೇಯರ್ ಆರ್ ಸಂಪತ್ ರಾಜ್ ಭರವಸೆ ನೀಡಿದ್ದಾರೆ.
ಯಾರು ಏನೆನ್ನುತ್ತಾರೆ?
ಧೂಮಪಾನದ ನಿಯಮವು ಯಾವಾಗಲೂ ಗೊತ್ತುಪಡಿಸಿದ ಪ್ರದೇಶಕ್ಕೆ ಸೀಮಿತವಾಗಿದ್ದರೂ, ಹೊಸ ನಿಯಮವು ಓಪನ್ ಏರ್ ಪಬ್ ಗಳಿಗೆ ಹೇಗೆ ಅನ್ವಯವಾಗುತ್ತದೆ ಎನ್ನುವುದು ಅಸ್ಪಷ್ಟವಾಗಿದೆ, ಇದನ್ನು ಬಿಬಿಎಂಪಿ ಸ್ಪಷ್ಟಪಡಿಸಬೇಕು ಎಂದು ಇಂದಿರಾನಗರದ ವಾಪೋರ್ ಪಬ್ & ಬ್ರೆವರಿ, ಮಾಲೀಕ ಅಕ್ಷತ್ ಪ್ರಸಾದ್ ಹೇಳಿದ್ದಾರೆ.
ಇಂದಿರಾನಗರದಲ್ಲಿನ ಮತ್ತೊಂದು ಪಬ್ ಮಾಲೀಕರು ಇದು ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ, ಅದರಲ್ಲೂ ವಿಶೇಷವಾಗಿ ಅಧಿಕಾರಿಗಳು ಮ್ಯೂಸಿಕ್ ಗಾಗಿ ಪರವಾನಗಿ ,ಓಸಿ ಪರವಾನಗಿಯನ್ನು ಕೇಳಿದ್ದಾರೆ. ಹೀಗಾಗಿ ನಮಗೆ ಇನ್ನೊಂದು ಪರವಾನಗಿ ಅಗತ್ಯವಿಲ್ಲ. ಎಂದಿದ್ದಾರೆ.
ನಿಯಮಾವಳಿ ಅನುಸರಣೆಗಾಗಿ ಪಬ್ ಹಾಗೂ ಬಾರ್ ಗಳಿಗೆ  3-6 ತಿಂಗಳು ಕಾಲಾವಕಾಶ ನೀಡಬೇಕು. ಧೂಮಪಾನಕ್ಕಾಗಿ ಗೊತ್ತುಪಡಿಸಿದ ಸ್ಥಳ ಎನ್ನುವುದು ಗೊಂದಲಕಾರಿಯಾಗಿದೆ, ಈ ಬಗ್ಗೆ ಸ್ಪಷ್ಟನೆ ಬೇಕು.ಎಂದು ಎಂಜಿ ರಸ್ತೆ ಎಬೋನಿ ರೆಸ್ಟಾರೆಂಟ್  ಮಾಲೀಕ ರಾಜೇಶ್ ರಾಜರಾಮ್ ಹೇಳಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!