Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಬೆಟ್ಟಿಂಗ್, ಗೂಂಡಾ ಕಾಯಿದೆ ಜಾರಿ: ಡಿಜಿ & ಐಜಿಪಿ ಎಚ್ಚರಿಕೆ

ಬೆಟ್ಟಿಂಗ್, ಗೂಂಡಾ ಕಾಯಿದೆ ಜಾರಿ: ಡಿಜಿ & ಐಜಿಪಿ ಎಚ್ಚರಿಕೆ

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದಿದ್ದು, ಈ ಸಂದರ್ಭದಲ್ಲಿ ಯಾರೆಲ್ಲಾ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೋ ಅವರ ವಿರುದ್ಧ ಗೂಂಡಾ ಹಾಗೂ ಕೋಕಾ ಕಾಯಿದೆ ಜಾರಿಗೊಳಿಸುವುದಾಗಿ ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಯಾರು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೋ ಅವರ ವಿರುದ್ಧ ಗೂಂಡಾ ಕಾಯ್ದೆ ತೆರೆಯಿರಿ ಎಂದು ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಡಿಜಿ & ಐಜಿಪಿ ಆದೇಶಿಸಿದ್ದಾರೆ.ಚುನಾವಣೆ ಬಳಿಕ, ಅತಿಹೆಚ್ಚು ಬೆಟ್ಟಿಂಗ್ ಮಂಡ್ಯದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ, ಎಲ್ಲರ ವಿರುದ್ಧ ಗೂಂಡಾ ಕಾಯ್ದೆ ತೆರೆಯಲು ಚಿಂತನೆ ನಡೆಸಲಾಗಿದೆ. ಒಮ್ಮೆ ಈ ಕೋಕಾ ಕಾಯ್ದೆ ಅಥವಾ ಗೂಂಡಾ ಕಾಯ್ದೆ ಹಾಕಿದರೆ ಬಂಧಿತ ಆರೋಪಿಗಳನ್ನ ನ್ಯಾಯಾಲಯಕ್ಕೆ‌ ಹಾಜರುಪಡಿಸುವ ಅಗತ್ಯವಿಲ್ಲ. ನೇರವಾಗಿ ಜೈಲಿಗೆ ಕಳುಹಿಸಬಹುದು. ಈ ಹಿನ್ನೆಲೆ ಬೆಟ್ಟಿಂಗ್ ತಡೆಯಲು ಡಿಜಿ & ಐಜಿಪಿ ಸೂಚನೆ ನೀಡಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!