Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಭದ್ರತಾ ಸಾಮಗ್ರಿಗಳ ಮೇಕ್ ಇನ್ ಇಂಡಿಯಾಗೆ 9 ಸಾವಿರ ಕೋಟಿ..!

ಭದ್ರತಾ ಸಾಮಗ್ರಿಗಳ ಮೇಕ್ ಇನ್ ಇಂಡಿಯಾಗೆ 9 ಸಾವಿರ ಕೋಟಿ..!

ನವದೆಹಲಿ: ಭಾರತೀಯ ಭದ್ರತಾ ಪಡೆಗಳಿಗೆ 9,100 ಕೋಟಿ ರೂಪಾಯಿ ವೆಚ್ಚದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧಪಡಿಸಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್​ ನೇತೃತ್ವದ ಡಿಫೆನ್ಸ್​ ಅಕ್ಯುಸಿಶನ್​ ಕೌನ್ಸಿಲ್​ (ಡಿಎಸಿ) ಅನುಮೋದನೆ ನೀಡಿದೆ. ರಕ್ಷಣಾ ಸಾಮಾಗ್ರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲು ಮತ್ತು ಸಿದ್ಧಪಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಭಾರತ್​ ಡೈನಮಿಕ್ ಲಿಮಿಟೆಡ್​ ಅಡಿಯಲ್ಲಿ ​ಎರಡು ‘ಆಕಾಶ ಮಿಸೈಲ್​ ಸಿಸ್ಟಮ್​’ಗಳನ್ನು ಕೊಂಡುಕೊಳ್ಳಲು ತಿಳಿಸಿದೆ. ಆಕಾಶ ಮಿಸೈಲ್​ ಸಿಸ್ಟಮ್​ ಅಪ್​ಗ್ರೇಡ್​ ವರ್ಷನ್​ ಆಗಿದ್ದು ಹೊಸ ಅನ್ವೇಷಕ ತಂತ್ರಜ್ಞಾನವನ್ನ ಹೊಂದಿದೆ. ಭದ್ರತಾ ಕಾರ್ಯಚರಣೆ ವೇಳೆ ತನ್ನ ಸುತ್ತಲೂ 360 ಡಿಗ್ರಿ ಆವೃತ್ತಿಯಲ್ಲಿ ಕಣ್ಣು ಹಾಯಿಸಿ ರಕ್ಷಣೆ ಮಾಡುವಂತ ತಂತ್ರಜ್ಞಾನ ಹೊಂದಿದೆ.
T90 ಟ್ಯಾಂಕರ್​ಗಳಿಗೆ ಹೆಚ್ಚಿನ ಒತ್ತು
ಇಂಡಿವಿಶುವಲ್​ ಅಂಡರ್​ ವಾಟರ್​ ಬ್ರೀಥಿಂಗ್​ ಆಪರಾಟಸ್​​ (IUWBA)ನ T90 ಟ್ಯಾಂಕರ್​ಗಳ ಅಭಿವೃದ್ಧಿ ಮತ್ತು ವಿನ್ಯಾಸವನ್ನು ಮೊದಲಿನಂತೆ ಮುಂದುವರಿಸಲು ಡಿಎಸಿ ತಿಳಿಸಿದೆ. ಗಂಭೀರ ಸಮಸ್ಯೆಗಳಲ್ಲಿ ಹಾಗೂ ತುರ್ತುಪರಿಸ್ಥಿತಿಗಳಲ್ಲಿ ತಕ್ಷಣ ಸಿಬ್ಬಂದಿ ತಪ್ಪಿಸಿಕೊಳ್ಳಲು T90 ಟ್ಯಾಂಕರ್​ಗಳು ಅಗತ್ಯವಾದ ಗೇರ್​ಗಳನ್ನು ಹೊಂದಿದೆ. ಇದಕ್ಕೆ ಅಳವಡಿಸಿರುವ ವೆಪನ್​ ಸಿಸ್ಟಮ್​ನ್ನು ಇನ್ನಷ್ಟು ಅಭಿವೃದ್ಧಿ ಮತ್ತು ವಿನ್ಯಾಸಕ್ಕೆ ಡಿಎಸಿ ಅನುಮತಿ ನೀಡಿದೆ. ಅಲ್ಲದೇ T90 ಟ್ಯಾಂಕರ್​ಗಳ ವೆಪನ್​ನನ್ನು ಹೇಗೆ ಬಳಕೆ ಮಾಡುವುದು ಮತ್ತು ಅದನ್ನು ಹೇಗೆ ಉಪಯೋಗಿಸುವುದು ಎಂಬುದರ ಕುರಿತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಭದ್ರತಾ ಪಡೆಗೆ ತರಬೇತಿ ನೀಡಲಿದೆ. ವಿದೇಶಗಳಿಂದ ಹಿಂದೆ ಖರೀದಿಸಿದ್ದ ಎಲ್ಲ ವಸ್ತುಗಳನ್ನು ಸ್ಥಳೀಯವಾಗಿ ಸಿದ್ಧಪಡಿಸಲಾಗಿದೆ. ಇದನ್ನು ಕೇಂದ್ರದ ‘ಮೇಕ್​ ಇನ್​ ಇಂಡಿಯಾ’ ಯೋಜನೆಯಡಿ ಮಾಡಲಾಗಿದೆ ಎಂದು ಡಿಎಸಿ ತಿಳಿಸಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!