Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಭರತ ಭೂಮಿಯ ಮಣ್ಣು ಭಕ್ತರಿಗೆ ಸಂಜೀವಿನಿ: ಅನ್ನದಾನೇಶ್ವರ .

ಭರತ ಭೂಮಿಯ ಮಣ್ಣು ಭಕ್ತರಿಗೆ ಸಂಜೀವಿನಿ: ಅನ್ನದಾನೇಶ್ವರ .

ಮಣಕವಾಡ: ಭರತ ಭೂಮಿಯ ಮಣ್ಣನ್ನು ಭಕ್ತಿಯಿಂದ ಅಂಗಾರವೆಂದು ಹಣೆಗೆ ಧರಿಸಿದರೇ ಬಂದ ಕಷ್ಟವೆಲ್ಲ ಭಯಲಾಗಿ ಬದುಕು ಹಸನಾಗುತ್ತದೆ ಅಂತಹ ಸಂಜೀವಿನಿ ಶಕ್ತಿ ಹೊಂದಿರುವುದು ನಮ್ಮ ಪುಣ್ಯ ಭೂಮಿ ಎಂದು ಅನ್ನದಾನೇಶ್ವರ ಸ್ವಾಮೀಗಳು ಹೇಳಿದರು.ಧಾರವಾಡ ಜಿಲ್ಲೆಯ ಮಣಕವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಪುರಾಣದಲ್ಲಿ ಬಸವಾದಿ ಶರಣರ ಪ್ರವಚನದಲ್ಲಿ ಮಾತನಾಡಿದ ಅವರು, ಭಕ್ತಿಯಿಂದ ಅಂಗಾರವೆಂದು ಮಣ್ಙನ್ನು ಹಣೆಗೆ ಧರಿಸಿದರೇ ಬದುಕು ಬಂಗಾರವಾಗುತ್ತದೆ. ಹನ್ನೆರಡನೇ ಶತಮಾನದ ವಚನಕಾರರಾದ ಬಸವಣ್ಣನವರು ಸಾಮಾಜಿಕ ಕಾರ್ಯಗಳತ್ತ ತಮ್ಮ ತತ್ವಾದರ್ಶಗಳನ್ನು ನೀಡ ಸಮಾಜವನ್ನು ಸುಧಾರಿಸುವಲ್ಲಿ ಹಾಗೂ ಆಧ್ಯಾತ್ಮಿಕ ಚಿಂತನೆಯತ್ತ ಬೆಳಕು ಹಾಯಿಸಿದ ಮಹಾ ಮೇದಾವಿ ಶಿವಶರಣರು. ಕಾಯಕದಿಂದ ಬಂದಿರುವಂತ ಪ್ರತಿಫಲವನ್ನು ದಾಸೋಹ ಮಾಡಿರುವಂತ ದಾಸೋಹಿಗಳು 12ನೇ ಶತಮಾನದ ಬಸವಣ್ಣನವರು. ಅವರ ಜೀವನ ಸಿದ್ದಾಂತ ಪ್ರತಿಪಾಲನೆ ಮಾಡಿದರೆ ಮನುಷ್ಯನಲ್ಲಿ ಆಸೆಯೆಂಬುದು ಇರುವುದಿಲ್ಲ ಸಮಾಜಿಕ ಕಾರ್ಯಗಳಲ್ಲಿ ಹಾಗೂ ಧಾರ್ಮಿಕ ಚಿಂತನೆಗಳತ್ತ ತೊಡಗುವಲ್ಲಿ ಪೂರಕವಾಗಿದೆ. ಅಲ್ಲದೇ ಸಂತ ಎಂಬುವಂತವರು ಬಡತನದ ಇಳೆಯಿಂದ ಬೇಸತ್ತರು ಕೂಡ ಸಾಧಕನಾಗಿ ಜೀವಿಸುವವನೇ ನಿಜವಾದ ಸಂತ ಎಂದರು. ಕೇವಲ ವ್ಯಕ್ತಿ ಮೈತೊಳೆದು ಕೊಳ್ಳುವುದರಿಂದ ಮೈಲಿಗೆ ಹೋಗಲಾಡಿಸಲು ಸಾಧ್ಯವಿಲ್ಲ ಮೈಲಿಗೆ ಎಂಬುದು ಮನಸ್ಸಿನಿಂದ ಹೋಗಬೇಕು ಮನಸ್ಸಿನ ಭಾವನೆ ಪರೋಪಕಾರಿಯಾಗಿ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯಲ್ಲಿರ ಬೇಕು ವಿನಃ ಯಾವುದೆ ಅನ್ಯ ವಿಚಾರಗಳತ್ತ ಎಂದು ಅವರು ಹೇಳಿದರು.ಧಾರವಾಡ ಜಿಲ್ಲೆ ಮಣಕವಾಡ ಗ್ರಾಮದ ಪರಮಪೂಜ್ಯ ಸಿದ್ಧರಾಮದೇವರ ಚರಪಟ್ಟಾಧಿಕಾರ ನಿಮಿತ್ತವಾಗಿ ತಿಂಗಳ ಪರ್ಯಂತರವಾಗಿ ಹಮ್ಮಿಕೊಳ್ಳಲಾಗಿದ್ದ ಬಸವ ಪುರಾಣಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತಾಧಿಗಳು ಭಕ್ತಿ ಕಾಣಿಕೆ, ಬಸವ ಬುತ್ತಿ, ದಾಸೋಹ ಸೇವೆಯನ್ನು ನೀಡುತ್ತ ಬಂದಿರುವುದು ವಿಶೇಷ ಸಂಗತಿಯಾಗಿದೆ.ರಾಜ್ಯದ ವಿವಿಧ ಮೂಲೆಗಳಿಂದ ಚರಪಟ್ಟಾಧಿಕಾರಕ್ಕೆ ಆಗಮಿಸುವ ಭಕ್ತಾಧಿಗಳು ತುಲಾಭಾರ ಸೇವೆ, ದಾಸೋಹ ಸೇವೆಗೆ‌ ಧನ ಧಾನ್ಯಗಳನ್ನು ಹೊತ್ತು ತಂದು ಭಕ್ತಿಪೂರ್ವಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡ, ಗದಗ, ಬೆಳಗಾಂ, ಬಾಗಲಕೋಟ,ಬಿಜಾಪುರ, ಹಾವೇರಿ, ದಾವಣಗೆರೆ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳಿಂದ ಶ್ರೀ ಮಠಕ್ಕೆ ಆಗಮಿಸುತ್ತಿದ್ದಾರೆ. ಆಧ್ಯಾತ್ಮಿಕತೆಗೆ ಸಾಕ್ಷಿಯಾಗಿರುವ ಶ್ರೀ ಮಠಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ವಿಶೇಷವಾಗಿ ವೃದ್ಧರು, ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ.ಪುರಾಣ ಕಾರ್ಯಕ್ರಮದಲ್ಲಿ ಸಿದ್ಧರಾಮದೇವರು, ತುಪ್ಪದ ಕುರಹಟ್ಟಿ ಶ್ರೀಗಳು, ಹತ್ತಿಕಣಬಸೂರು ಶ್ರೀಗಳು, ಆನ್ವೇರಿ ಶ್ರೀಗಳು, ಹಂದಿಗುಂದ ಶ್ರೀಗಳು, ಮುಗಳಿ ಶ್ರೀಗಳು, ಈಶ್ವರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!