Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಭಾರತದ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಹರಿಣಗಳ ತಂಡದ ಬ್ಯಾಟಿಂಗ್​ ವೈಫಲ್ಯ : ಅಹಂ ಕಡಿಮೆ ಮಾಡಿಕೊಳ್ಳಲು ಬವುಮಾ ಸಲಹೆ.

ಭಾರತದ ವಿರುದ್ಧದ ಟೆಸ್ಟ್​​ ಪಂದ್ಯದಲ್ಲಿ ಹರಿಣಗಳ ತಂಡದ ಬ್ಯಾಟಿಂಗ್​ ವೈಫಲ್ಯ : ಅಹಂ ಕಡಿಮೆ ಮಾಡಿಕೊಳ್ಳಲು ಬವುಮಾ ಸಲಹೆ.

ಪುಣೆ: ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸಮನ್​​ಗಳು ವೈಫಲ್ಯ ಅನುಭವಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಬ್ಯಾಟ್ಸ್​ಮನ್​ ಮಾತನಾಡಿದ್ದಾರೆ. ಟೀಂ ಇಂಡಿಯಾದ 601ರನ್​ಗಳಿಗೆ ಉತ್ತರ ನೀಡಲು ಮುಂದಾದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​​ನಲ್ಲಿ 168ರನ್​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 8ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೇನು ಉಳಿದೆರಡು ವಿಕೆಟ್​ಗಳನ್ನ 200ರ ಗಡಿಯೊಳಗೆ ಟೀಂ ಇಂಡಿಯಾ ಆಲೌಟ್​ ಮಾಡಲಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ ಈ ವೇಳೆ 9ನೇ ವಿಕೆಟ್​ಗೆ ಒಂದಾದ ಫಿಲ್ಯಾಂಡರ್​ ಹಾಗೂ ಕೇಶವ್​ ಮಹಾರಾಜ್​ ತಂಡಕ್ಕೆ ಯಾರೋ ಊಹೆ ಮಾಡದ ರೀತಿಯಲ್ಲಿ ಚೇತರಿಕೆ ನೀಡಿದ್ರು. ಈ ಜೋಡಿ ಬರೋಬ್ಬರಿ 109 ರನ್​ಗಳ ಜೊತೆಯಾಟ ನೀಡಿದರು. ಫಿಲ್ಯಾಂಡರ್​​ 44ರನ್​ಗಳಿಕೆ ಮಾಡಿದರೆ, ಮಹಾರಾಜ್​ 72ರನ್​ಗಳಿಕೆ ಮಾಡಿದರು. ಹೀಗಾಗಿ ತಂಡ 275ರನ್​ಗಳಿಕೆ ಮಾಡುತ್ತದೆ. ಈ ಜೋಡಿ ವಿಕೆಟ್​ ಪಡೆದುಕೊಳ್ಳಲು ಟೀಂ ಇಂಡಿಯಾ ಬೌಲರ್​ಗಳು ಹರಸಾಹಸ ಪಡುತ್ತಾರೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ತೆಂಬಾ ಬಾವುಮಾ ಮಾತನಾಡಿದ್ದಾರೆ. Temba Bavumaಆಫ್ರಿಕಾ ತಂಡದ ಬ್ಯಾಟ್ಸ್​​ಮನ್​ಗಳುಕೆಳ ಕ್ರಮಾಂಕದ ಬ್ಯಾಟ್ಸ್​​ಮನ್​ಗಳು ಉತ್ತಮವಾಗಿ ಬ್ಯಾಟಿಂಗ್​ ಮಾಡಿದಾಗ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಲ್ಲಿರುವ ಅಹಂ ಕಡಿಮೆಯಾಗುತ್ತದೆ. ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಯಾವ ರೀತಿಯಾಗಿ ಎದುರಾಳಿಗಳನ್ನ ಎದುರಿಸಿದ್ದಾರೆ ಎಂಬುದನ್ನ ಈ ಇನ್ನಿಂಗ್ಸ್​​ನಿಂದ ನೋಡಿ ನಾವು ಕಲಿತುಕೊಳ್ಳಬೇಕಿದೆ. ನಿಜವಾಗಲೂ ನಮ್ಮಿಂದ ಉತ್ತಮವಾದ ಬ್ಯಾಟಿಂಗ್​ ಮೂಡಿ ಬರಬೇಕಾದರೆ ಕೆಳ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಿಂದ ಕಲಿಯಬೇಕಾಗಿದ್ದು ತುಂಬಾ ಇದೆ ಎಂದಿದ್ದಾರೆ. ಈಗಾಗಲೇ ಮುಗಿದು ಹೋಗಿರುವ ಮೊದಲ ಟೆಸ್ಟ್​ ಹಾಗೂ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ನಾವು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಅದನ್ನ ಅಳವಡಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ ಎಂದಿದ್ದಾರೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!