Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಭಿಲಾಯಿ ಉಕ್ಕು ಘಟಕದಲ್ಲಿ ಸ್ಫೋಟ: 9 ಕಾರ್ಮಿಕರ ಸಜೀವ ದಹನ..

ಭಿಲಾಯಿ ಉಕ್ಕು ಘಟಕದಲ್ಲಿ ಸ್ಫೋಟ: 9 ಕಾರ್ಮಿಕರ ಸಜೀವ ದಹನ..

ರಾಯ್​ಪುರ (ಛತ್ತೀಸ್‍ಗಢ): ಇಲ್ಲಿನ ಭಿಲಾಯಿ ಉಕ್ಕು ಉತ್ಪಾದನಾ ಘಟಕದಲ್ಲಿ ಅನಿಲ ಕೊಳವೆ ಮಾರ್ಗದಲ್ಲಿ ಸ್ಫೋಟ ಸಂಭವಿಸಿದ್ದು, 9 ಮಂದಿ ಕಾರ್ಮಿಕರು ಅಸುನೀಗಿದ್ದಾರೆ. 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಭಿಲಾಯಿ ಪಟ್ಟಣದಲ್ಲಿರುವ ಕಲ್ಲಿದ್ದಲು ಕುಲುಮೆಯಲ್ಲಿ ಇಂದು ಮಧ್ಯಾಹ್ನ ಸ್ಫೋಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸರು ಮತ್ತು ಭಾರಿ ಸಂಖ್ಯೆಯಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 6 ಮಂದಿ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರ (SAIL) ಭಿಲಾಯಿ ಉಕ್ಕು ಘಟಕವನ್ನು ನಿರ್ವಹಿಸುತ್ತದೆ.
ಭಾರತೀಯ ರೈಲ್ವೇಗೆ ವಿಶ್ವ ದರ್ಜೆಯ ರೈಲ್​​ಗಳನ್ನು ಸರಬರಾಜು ಮಾಡುವ ಏಕೈಕ ಉತ್ಪಾದನಾ ಘಟಕ ಇದಾಗಿದೆ. 260 ಮೀಟರ್​ ಉದ್ದನೆಯ rail ಗಳು ಇಲ್ಲಿ ತಯಾರಾಗುತ್ತವೆ. ಜೊತೆಗೆ ಇನ್ನೂ ಅನೇಕ ಮಾದರಿಗಳ ಹೆವಿ ಡ್ಯೂಟಿ ಸ್ಟೀಲ್​ ಪ್ರಾಡಕ್ಟ್​​ಗಳು ಇಲ್ಲಿ ತಯಾರಾಗುತ್ತವೆ. ಘಟಕವು ವಾರ್ಷಿಕ 3.153 ಮೆಟ್ರಿಕ್​ ಟನ್​ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!