Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮಂಗಳೂರಿನ ಬೈಕಂಪಾಡಿಯಲ್ಲಿ ಕಬ್ಬಿಣದ ಅದಿರು ಕಾರ್ಖಾನೆ ಹೂಡಿಕೆ ಮಾಡಲು ನಿರ್ಧಾರ.

ಮಂಗಳೂರಿನ ಬೈಕಂಪಾಡಿಯಲ್ಲಿ ಕಬ್ಬಿಣದ ಅದಿರು ಕಾರ್ಖಾನೆ ಹೂಡಿಕೆ ಮಾಡಲು ನಿರ್ಧಾರ.

ಮಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ ಸಂಸ್ಥೆಯು ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಹೂಡಿಕೆ ಮಾಡಲಿದೆ ಎಂದುದಕ್ಷಿಣ ಕನ್ನಡ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಡೆದ ಸಾರ್ವಜನಿಕ ಆವಾಹಲು ಸ್ವೀಕಾರ ಕಾರ್ಯಕ್ರಮದಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ ಸ್ಥಾಪಿಸುವ ಯೋಜನೆಯ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು .ಯೋಜನಾ ವೆಚ್ಚ ,ಉದ್ಯೋಗ ಪರಿಸರ ಮಾಲಿನ್ಯ ಆಗದಂತೆ ಸ್ಥಾವರ ನಿರ್ಮಾಣ ,ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತು ಕಂಪನಿ ಕೈಗೊಂಡ ನಿರ್ಣಯಗಳ ಕುರಿತು ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದರು .ಸಂಸ್ಥೆಯ ಅಧೀನದಲ್ಲಿ ಒಟ್ಟು 166.16 ಎಕರೆ ಭೂಮಿ ಲಭ್ಯವಿದೆ .11 ಎಕರೆ ಪ್ರದೇಶದಲ್ಲಿ ನೂತನ ಘಟಕ ತಲೆ ಎತ್ತಲಿದೆ .54.8 ಎಕರೆ ಗ್ರೀನ್ ಬೆಲ್ಟ್ ಗಾಗಿ ಮೀಸಲಿರಿಸಲಾಗಿದೆ .ನೇರವಾಗಿ 511 ಮಂದಿಗೆ ,ಪರೋಕ್ಷವಾಗಿ 1500 ಮಂದಿಗೆ ಉದ್ಯೋಗ ಅವಕಾಶ ದೊರೆಯಲಿದೆ ಎಂದು ಹೇಳಿದರು .ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಮಂಗಳೂರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ 836.6 ಕೋಟಿ ರುಪಾಯೀ ಹೂಡಿಕೆ ಮಾಡಿ 1.8 ಟನ್ ಸಾಮರ್ಥ್ಯದ ಕೋಕ್ ಓವೆನ್ ಪ್ಲಾಂಟ್ ,10 ಮೆಗಾ ವ್ಯಾಟ್ ಸಾಮರ್ಥ್ಯದ ಕಪ್ಟಿವ್ ಪವರ್ ಪ್ಲಾಂಟ್ ,2 ಲಕ್ಷ ಟನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಡಕ್ಟ್ರೈಲ್ ಐರನ್ ಸ್ಟನ್ ಪೈಪ್ ಪ್ಲಾಂಟ್ ಸ್ಥಾವರ ಆರಂಭಿಸುವ ಯೋಜನೆ ರೂಪಿಸಲಾಗಿದೆ .ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಬೇಕು .ಪರಿಸರಮಾಲಿನ್ಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಪುರುಷೋತ್ತಮ ಚಿತ್ರಾಪುರ ಒತ್ತಾಯಿಸಿದರು .ಸ್ಥಳೀಯರ ಅವಾಹಲುಗಳನ್ನು ಸ್ವೀಕರಿಸಿದ್ದೇವೆ .ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರ ಬೇಡಿಕೆ ಅವರ ಮನವಿ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು .ಸಭೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ರಾಜಶೇಖರ್ ಪುರಾಣಿಕ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುರುಗೇಶ್ ಉಪಸ್ಥಿತರಿದ್ದರು .

Share

About SRINIVAS BIG TV NEWS, MANGALORE

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!