Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಮಗಳನ್ನು ಭೇಟಿ ಮಾಡಿ, ಅಪ್ಪನಾದ ಖುಷಿಯಲ್ಲಿ ತೇಲಾಡಿದ ರಹಾನೆ.

ಮಗಳನ್ನು ಭೇಟಿ ಮಾಡಿ, ಅಪ್ಪನಾದ ಖುಷಿಯಲ್ಲಿ ತೇಲಾಡಿದ ರಹಾನೆ.

ಹೈದರಾಬಾದ್​: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿದೆ. ಆದರೆ, ತಂಡದ ಉಪನಾಯಕ ಅಜಿಂಕ್ಯ ರಹಾನೆಗೆ ಡಬಲ್​ ಧಮಾಕಾ ಸಿಕ್ಕಿದ್ದು, ಪಂದ್ಯದ ನಾಲ್ಕನೇ ದಿನ ಅಪ್ಪನಾದ ಸಂತೋಷದಲ್ಲಿ ಅವರು ತೇಲಾಡಿದ್ದರು. ಧೋನಿ,ರೈನಾ,ರೋಹಿತ್​ ಸಾಲಿಗೆ ರಹಾನೆ.. ಅಜಿಂಕ್ಯಾ ಕುಟುಂಬಕ್ಕೆ ಎಂಟ್ರಿಕೊಟ್ಳು ಮಹಾಲಕ್ಷ್ಮಿ..ರಹಾನೆ ಪತ್ನಿ ಶನಿವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಟೆಸ್ಟ್​ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಅವರು ಮಗುವಿನ ಮುಖ ನೋಡಿ ಖುಷಿ ಪಟ್ಟಿದ್ದಾರೆ. ಇದೇ ವಿಷಯವನ್ನ ತಮ್ಮ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ. 2014ರಲ್ಲಿ ಬಹುಕಾಲದ ಗೆಳತಿ ರಾಧಿಕಾ ಜೊತೆ ಮದುವೆಯಾಗಿರುವ ರಹಾನೆ, ಇದೀಗ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಅಕ್ಟೋಬರ್​ 10ರಿಂದ ಪುಣೆಯಲ್ಲಿ ಎರಡನೇ ಟೆಸ್ಟ್​ ಪಂದ್ಯ ಶುರುವಾಗಲಿರುವ ಕಾರಣ, ರಹಾನೆ ಆದಷ್ಟು ಬೇಗ ತಂಡವನ್ನ ಸೇರಿಕೊಳ್ಳಬೇಕಾಗಿದ್ದು, ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಿಲ್ಲ. ರಹಾನೆ ಅಪ್ಪನಾಗುತ್ತಿದ್ದಂತೆ ಮಾಜಿ ಕ್ರಿಕೆಟರ್‌ ಹರ್ಭಜನ್​ ಸಿಂಗ್​ ಟ್ವೀಟ್​ ಮಾಡಿ ಶುಭಕೋರಿದ್ದು, ಅಮ್ಮ ಹಾಗೂ ಮಗು ರಾಜಕುಮಾರಿ ಆರೋಗ್ಯವಾಗಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಹಾನೆ ಹೆಣ್ಣು ಮಗುವಿನ ತಂದೆಯಾಗುವ ಮೂಲಕ ತಂಡದ ಸಹ ಅಟಗಾರರಾದ ಧೋನಿ, ರೈನಾ, ಭಜ್ಜಿ, ರೋಹಿತ್​ ಹಾಗೂ ವಿಹಾರಿ ಸಾಲಿಗೆ ಸೇರಿಕೊಂಡಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!