Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಮಣಕವಾಡ ಶ್ರೀಗಳು ಸಾಮಾಜಿಕ ಕಾರ್ಯಗಳಿಂದ ಜನಜನಿತರಾಗಿದ್ದಾರೆ: ನಿರಂಜನನಂದಾಪುರಿ ಶ್ರೀಗಳು

ಮಣಕವಾಡ ಶ್ರೀಗಳು ಸಾಮಾಜಿಕ ಕಾರ್ಯಗಳಿಂದ ಜನಜನಿತರಾಗಿದ್ದಾರೆ: ನಿರಂಜನನಂದಾಪುರಿ ಶ್ರೀಗಳು

Spread the love

ಮಣಕವಾಡ: ಸಿದ್ಧರಾಮದೇವರು ಈ ಭಾಗದಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ತಮ್ಮ ಪ್ರವಚನದ ಶಕ್ತಿಯಿಂದ ಜನಜನಿತರಾಗಿದ್ದಾರೆ ಎಂದು ಕನಕಗುರು ಪೀಠದ ನಿರಂಜನನಂದಾಪುರಿ ಸ್ವಾಮೀಜಿ ತಿಳಿಸಿದರು.ಸಿದ್ಧರಾಮದೇವರ ಚರಪಟ್ಟಾಧಿಕಾರ ಪ್ರಯುಕ್ತ ಆಯೋಜಿಸಲಾಗಿರುವ ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ತಂದೆ ತಾಯಿ ತಮ್ಮ ಮಕ್ಕಳನ್ನು ದೇಶ ಕಾಯುವ ಸೈನಿಕ ಕೆಲಸಕ್ಕೆ ಹಾಗೂ ಸನ್ಯಾಸತ್ವ ಸ್ವೀಕಾರಕ್ಕೆ ಕಳಿಸುವುದಿಲ್ಲ ಧರ್ಮದ ಸಂಸ್ಕೃತಿ ಉಳಿಯಬೇಕು ಎನ್ನುವಂತ ಸದುದ್ದೇಶದಿಂದ ಅವರನ್ನು ಸಮಾಜಕ್ಕೆ ನೀಡಿದ ಅವರ ತಂದೆ ತಾಯಿಗೆ ಈ ಮಣಕವಾಡ ಅಷ್ಟೇ ಅಲ್ಲದೆ ಈ ಸಮಾಜ ಋಣಿಯಾಗಿದೆ. ಕರಿ ಕಂಬಳಿ ಎಂಬುದು ಮೈಲಿಗೆ ರಹಿತವಾದ ವಸ್ತುವಾಗಿದೆ. ಧರ್ಮ ಕಟ್ಟುವ ಸ್ವಾಮಿಗಳು ಸಮಾಜ ಪಸರಿಸುವ ಕಾರ್ಯದಲ್ಲಿ ತೊಡಗಿದಾಗ ಯಾವುದೇ ಮೈಲಿಗೆ ಇರುವುದಿಲ್ಲ ಎಂದು ಅವರು ಹೇಳಿದರು.ಬಳಿಕ ಮಾತನಾಡಿದ ಮಹೇಶ ನಾಲವಾಡ, 108 ಹಳ್ಳಿಗಳಲ್ಲಿ ಸಂಚರಿಸುವ ಮೂಲಕ ಆಧ್ಯಾತ್ಮಿಕ ಸಂಚಲನ ಸೃಷ್ಟಿಸುವ ಮೂಲಕ ಸಿದ್ಧರಾಮದೇವರು ಸಾರ್ವಜನಿಕ ಹಿತಾಸಕ್ತಿಗೆ ಶ್ರಮಿಸಿದ್ದಾರೆ ಎಂದರು‌. ಸ್ವಾಮೀಜಿಗಳು ಎಂಬುವರು ಸಮಾಜವನ್ನು ಸುಧಾರಿಸುವ ಮೂಲಕ ಹೊಸ ಸಂಚಲನ ಸೃಷ್ಟಿಸುವ ಶಕ್ತಿಯಾಗಿದೆ ಎಂದು ಅವರು ಹೇಳಿದರು. ಬ್ರಿಟಿಷರಲ್ಲಿ ದೇವರ ನಾಡು ಎಂದು ಸಾರಿರುವುದು ಮಹಾನ ಸಾಧಕರು ಮಠ ಮಾನ್ಯದ ಸ್ವಾಮೀಜಿಗಳು ಎಂದರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಒಂದು ತಿಂಗಳ ಪರ್ಯಂತರವಾಗಿ ನಡೆಯುತ್ತಿರುವ ಕಾರ್ಯಕ್ರಮ ವಿಶೇಷವಾಗಿದೆ. ಅಲ್ಲದೇ ಹಿಂದಿನ ಶ್ರೀಗಳು ತಮ್ಮ ಪವಾಡಗಳ ಮೂಲಕ ಸಮಾಜದ ಅಡಕು ತೊಡಕುಗಳನ್ನು ತಿದ್ಧಿ ಆಧ್ಯಾತ್ಮಿಕ ಧಾರ್ಮಿಕ ಚಿಂತನಗೆಳಿಂದ ಸಮಾಜಮುಖಿಯಾಗಿದ್ದರು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಶಿರಹಟ್ಟಿ ಪಕ್ಕೀರ ಸಿದ್ಧರಾಮ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಗದಗ ತೋಂಟದಾರ್ಯ ಸ್ವಾಮೀಜಿ, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್ ಮುಖಂಡರಾದ ಅನೀಲ ಪಾಟೀಲ, ವಿನೋದ ಅಸೂಟಿ, ಬಂಗಾರೇಶ ಹಿರೇಮಠ ಸೇರಿದಂತೆ ಇತರರು ಇದ್ದರು.

Check Also

ಮೈಸೂರು ದಸರಾ, ಎಷ್ಟೊಂದು ಸುಂದರ, ಜಂಬೂ ಸವಾರಿ; ನೋಡೋಣ ಬನ್ನಿ ರೀ.. !

Spread the loveಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೋರೊನಾ ಹಿನ್ನಲೆಯಲ್ಲಿ ಸಾವಿರಾರು ಜನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!