Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಮದುವೆಯಾಗಿ ಮೂರೇ ನಿಮಿಷಕ್ಕೆ ಗಂಡನಿಗೆ ಡಿವೋರ್ಸ್ ಕೊಟ್ಟಳು ಪತ್ನಿ….

ಮದುವೆಯಾಗಿ ಮೂರೇ ನಿಮಿಷಕ್ಕೆ ಗಂಡನಿಗೆ ಡಿವೋರ್ಸ್ ಕೊಟ್ಟಳು ಪತ್ನಿ….

ಕುವೈತ್​: ಮದುವೆಯಾಗಿ ಒಂದೇ ವರ್ಷಕ್ಕೆ ಅಥವಾ ಒಂದೇ ತಿಂಗಳಿಗೆ ಗಂಡ ಹೆಂಡತಿ ಡಿವೋರ್ಸ್​​ ಕೇಳಿರೋ ಪ್ರಕರಣಗಳ ಬಗ್ಗೆ ಕೇಳಿರ್ತೀರ. ಆದ್ರೆ ಇಲ್ಲೊಂದು ಜೋಡಿ ಮದುವೆಯಾದ ಮೂರೇ ನಿಮಿಷಕ್ಕೆ ಡಿವೋರ್ಸ್​ ಪಡೆದಿದೆ ಎಂದರೆ ನೀವು ನಂಬಲೇಬೇಕು. ಹೌದು. ಕುವೈತ್​​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ದಂಪತಿ ಮದುವೆಯಾಗಿ ಕೇವಲ ಮೂರೇ ನಿಮಿಷದಲ್ಲಿ ವಿಚ್ಛೇದನ ಪಡೆದಿದ್ದಾರೆ. ಮದುವೆಯಾಗಿ ಅತ್ಯಂತ ಕಡಿಮೆ ಸಮಯದಲ್ಲೇ ದಾಂಪತ್ಯ ಜೀವನ ಮುರಿದುಬಿದ್ದಿರೋದು ಕುವೈತ್​​ನ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗ್ತಿದೆ. ಆ ಜೋಡಿ ಕೋರ್ಟ್​ಹಾಲ್​​ನಲ್ಲಿ ಮದುವೆಯಾಗಿ, ಅಲ್ಲಿಂದ ನಿರ್ಗಮಿಸುವ ಮುನ್ನವೇ ವಿಚ್ಛೇದನ ಪಡೆದಿದ್ದಾರೆ. ಬರುವಾಗ ವಧು ವರರಾಗಿ ಬಂದವರು ಹೊರಡುವಾಗ ಮಾಜಿ ಗಂಡ ಹೆಂಡತಿಯಾಗಿ ಹೋಗಿದ್ದಾರೆ.ಅಷ್ಟಕ್ಕೂ ಡಿವೋರ್ಸ್​ ಆಗಿದ್ದಾದ್ರೂ ಯಾಕೆ?ಆಗಿದ್ದಿಷ್ಟೇ. ವಧು ವರ ಕೋರ್ಟ್​​ಹಾಲ್​​ನಲ್ಲಿ ಮ್ಯಾರೇಜ್​​ ಕಾಂಟ್ರಾಕ್ಟ್​​​ಗೆ ಆಗ ತಾನೇ ಸೈನ್​ ಮಾಡಿದ್ದರು. ಬಳಿಕ ಅಲ್ಲಿಂದ ಹೊರಗೆ ಹೋಗುವಾಗ ಜಡ್ಜ್​​ ಮುಂದೆಯೇ ವಧು ಕಾಲು ಜಾರಿ ಬಿದ್ದಿದ್ದಾಳೆ. ಆಗ ವರ ಸ್ಟುಪಿಡ್​ ಎಂದು ಕರೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ, ಇಲ್ಲೇ..ಈಗಲೇ ಡಿವೋರ್ಸ್​ ಬೇಕು ಎಂದಿದ್ದಾಳೆ. ಆ ವೇಳೆಗೆ ಅವರಿಬ್ಬರೂ ಮದುವೆಯಾಗಿ ಕೇವಲ 3 ನಿಮಿಷವಾಗಿತ್ತು ಅಷ್ಟೇ.ಈ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಜನ ವಧುವಿಗೆ ಬೆಂಬಲ ನೀಡಿದ್ದಾರೆ. ಆಕೆ ಮಾಡಿದ್ದು ಸರಿಯಾಗೇ ಇದೆ ಅಂತ ಹೇಳಿದ್ದಾರೆ. ಆರಂಭದಲ್ಲೇ ಗಂಡ ಈ ರೀತಿ ಆಡಿದ್ರೆ ಆತನಿಂದ ದೂರವಾಗೋದೇ ಉತ್ತಮ ಅಂತ ಕಮೆಂಟ್​ ಮಾಡಿದ್ದಾರೆ. ಗೌರವವೇ ಇಲ್ಲದಿದ್ದಾಗ ಆ ಮದುವೆ ಆರಂಭದಿಂದಲೂ ಮುರಿದುಬಿದ್ದಂತೆಯೇ ಎಂದು ಕೆಲವರು ಹೇಳಿದ್ದಾರೆ

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!