Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಮದ್ಯ ಪ್ರೀಯರಿಗೆ ಮತದಾನದಿಂದ ಬಾರಿ ಆಫರ್

ಮದ್ಯ ಪ್ರೀಯರಿಗೆ ಮತದಾನದಿಂದ ಬಾರಿ ಆಫರ್

Spread the love

ಹುಬ್ಬಳ್ಳಿ: ಜಿಲ್ಲೆಗಳಲ್ಲಿ ಹೇಗಾದರೂ ಮಾಡಿ ಈ ಬಾರಿ‌ ಮತದಾನ ಪ್ರಮಾಣ ಹೆಚ್ಚಿಸಲೇಬೇಕೆಂದು ಧಾರವಾಡ ಜಿಲ್ಲಾಡಳಿತಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿವೆ. ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮತದಾರ ಪ್ರಭುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಡಳಿತ ಈ ಕ್ರಮಕ್ಕೆ ಈಗಾಗಲೇ ಸಾರ್ವಜನಿಕರಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗತ್ತಿವೆ. ಇದರ ಮಧ್ಯ ಈಗ ನಗರದ ಕರ್ನಾಟಕ ವೈನ್ ಸ್ಟೊರ್ ಮಾಲೀಕರೊಬ್ಬರು ಜಿಲ್ಲಾಡಳಿಕ್ಕೆ ಸಾಥ್ ನೀಡುವ ಮೂಲಕ ಮಧ್ಯ ಪ್ರಿಯರು ಮತದಾನದಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದಾರೆ.ಮತದಾನ ಮಾಡಿ ಬಂದ ಮದ್ಯ ಪ್ರಿಯರಿಗೆ ಬಂಪರ್ ಆಫರ್ ನೀಡುತ್ತಿದ್ದಾರೆ. ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಶಾಹಿ ಗುರುತು ತೋರಿಸಿದರೆ 3% ಡಿಸ್ಕೌಂಟ್ ಕೂಡ ನೀಡಲಾಗುತ್ತದೆ. ಇದು ಹಲವಾರು ಮದ್ಯ ಪ್ರೀಯ ಮತದಾರರಲ್ಲಿ ಮತದಾನದ ಜಾಗೃತಿ ಅರಿವನ್ನು ಮೂಡಿಸುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ ವಿನೂತನ ಪ್ರಯೋಗವಾಗಿದೆ. ಧಾರವಾಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಜಾರಿಯಲ್ಲಿರುವ ವಿಭಿನ್ನ ಮತದಾನ ಜಾಗೃತಿ ಅಭಿಯಾನ ಎಂದು ಕೂಡ ಕರೆಯಬಹುದಾಗಿದೆ. ರಾಜಕೀಯ ಪಕ್ಷಗಳು ನೀಡುವ ಮದ್ಯದ ಆಮಿಷಕ್ಕೆ ಬಲಿಯಾಗಿ ಮತವನ್ನು ಮಾರಿಕೊಳ್ಳಬಾರದು ಮದ್ಯ ಪ್ರೀಯರು ಪ್ರಮಾಣಿಕವಾಗಿ ತಮ್ಮ ಹಕ್ಕನ್ನು ಚಲಾಯಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಈ ಮತದಾನದ ಅಭಿಯಾನ ಜಾರಿ ಮಾಡಲಾಗಿದೆ ಎಂದು ವೈನ್ ಸ್ಟೋರ ಮಾಲೀಕರು ಹೇಳಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಡಳಿತದ ಪ್ರಯತ್ನಕ್ಕೆ ಕೈ ಜೋಡಿಸಿರುವ ವೈನ್ ಸ್ಟೋರ್ ಮದ್ಯ ಪ್ರೀಯರ ಮತದಾನಕ್ಕೆ ಹೆಚ್ಚು ಒತ್ತು ನೀಡಿರುವುದು ಶ್ಲಾಘನೀಯವಾಗಿದೆ.

Check Also

ಮೈಸೂರು ದಸರಾ, ಎಷ್ಟೊಂದು ಸುಂದರ, ಜಂಬೂ ಸವಾರಿ; ನೋಡೋಣ ಬನ್ನಿ ರೀ.. !

Spread the loveಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೋರೊನಾ ಹಿನ್ನಲೆಯಲ್ಲಿ ಸಾವಿರಾರು ಜನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!