Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೆಹಲಿ / ಮಲಾವಿಯಿಂದ ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ಚಾಲನೆ..

ಮಲಾವಿಯಿಂದ ಜಗತ್ತಿನ ಮೊದಲ ಮಲೇರಿಯಾ ಲಸಿಕೆಗೆ ಚಾಲನೆ..

ನವದೆಹಲಿ: ಪ್ರಪಂಚದ ಮೊದಲ ಮಲೇರಿಯಾ ಲಸಿಕೆಯನ್ನು ಪ್ರಾಯೋಗಿಕ ಯೋಜನೆ ಮೂಲಕ ಬಿಡುಗಡೆಗೊಳಿಸುತ್ತಿರುವ ಮಲಾವಿ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ.ಆರ್ಟಿಎಸ್, ಎಸ್ ಎಂದು ಕರೆಯಲ್ಪಡುವ ಈ ಮಲೇರಿಯಾ ಲಸಿಕೆಯನ್ನು 2 ವರ್ಷ ವಯಸ್ಸಿನ ಮಕ್ಕಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮಲಾವಿ ತನ್ನ ಪ್ರಾಯೋಗಿಕ ಯೋಜನೆಯಲ್ಲಿ ತಿಳಿಸಿದೆ. ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಘಾನಾ ಮತ್ತು ಕೀನ್ಯಾದಲ್ಲಿ ಕೂಡ ಪರಿಚಯಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಮಲೇರಿಯಾ ಕಾಯಿಲೆ ಇಂದಿಗೂ ಕೂಡ ಮಾರಕ ಖಾಯಿಲೆಯಾಗಿದ್ದು, ಪ್ರತಿ ಎರಡು ನಿಮಿಷಕ್ಕೆ ಒಂದು ಮಗು ಈ ಕಾಯಿಲೆಯಿಂದ ಸಾವನ್ನಪ್ಪುತ್ತದೆ. ಪ್ರತಿ ವರ್ಷ ಆಫ್ರಿಕಾವೊಂದರಲ್ಲೇ 250,000 ಮಕ್ಕಳು ಮಲೇರಿಯಾ ಕಾಯಿಲೆಗೆ ಬಲಿಯಾಗುತ್ತಾರೆ. ಇನ್ನು ವಿಶ್ವದಲ್ಲಿ 435,000 ಜನರು ಸಾವನ್ನಪ್ಪುತ್ತಾರೆ ಎನ್ನಲಾಗಿದೆ.ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ 5 ವರ್ಷದೊಳಗಿನ ಮಕ್ಕಳು ಈ ಖಾಯಿಲೆಯಿಂದಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!