Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮಹದೇಶ್ವರ ಬೆಟ್ಟದ ಶಮಿವೃಕ್ಷದ ವಿಶೇಷ ಪೂಜೆಗೆ ಹರಿದು ಬಂದ ಭಕ್ತಸಾಗರ.

ಮಹದೇಶ್ವರ ಬೆಟ್ಟದ ಶಮಿವೃಕ್ಷದ ವಿಶೇಷ ಪೂಜೆಗೆ ಹರಿದು ಬಂದ ಭಕ್ತಸಾಗರ.

ಮಂಡ್ಯ : ವಿಜಯದಶಮಿಯ ಅಂಗವಾಗಿಪಟ್ಟಣದ ಪುರಗ್ರಾಮದ ಹೊರವಲಯದ ಕರೋಟಿ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ ಗಂಗಾಪೂಜೆ, ಶಮೀ ವೃಕ್ಷಪೂಜೆ ಶ್ರೀ ಬಸವೇಶ್ವರ, ಶ್ರೀ ಮಹದೇಶ್ವರ ಹಾಗೂ ಶ್ರೀ ವನದೇವತೆಯ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಶ್ರೀ ಮಹದೇಶ್ವರ ಬೆಟ್ಟ ಕ್ಷೇತ್ರವು ಶ್ರೀ ಬಸಪ್ಪಸ್ವಾಮಿ ಅವರ ನೇತೃತ್ವದಲ್ಲಿ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ. ಲೋಕಕಲ್ಯಾಣಕ್ಕಾಗಿ ನಡೆದ ಶಮೀವೃಕ್ಷದ ಬನ್ನೀಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದ ಭಕ್ತರಿಗೆ ನಿಮ್ಮ ಬಾಳು ಬಂಗಾರವಾಗಲೀ ಎಂದು ಬನ್ನೀ ಎಲೆಗಳನ್ನು ನೀಡಿ ಹರಸಿ ಆಶೀರ್ವದಿಸಿದ್ದು ವಿಶೇಷವಾಗಿತ್ತು.ಶ್ರೀ ಕ್ಷೇತ್ರಕ್ಕೆ ಆಗಮಿಸಲು ಸುಸಜ್ಜಿತವಾದ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ತಾಲೂಕು ಆಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳು ಗಮನ.ಹರಿಸಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಶ್ರೀ ಕ್ಷೇತ್ರದ ಭಕ್ತವೃಂದವು ಮನವಿ ಮಾಡಿದೆ.ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಭಕ್ತರಿಗೆ ಉಚಿತವಾಗಿ ದಾಸೋಹ ಮತ್ತು ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!