Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಅಸ್ತಿತ್ವಕ್ಕೆ

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಅಸ್ತಿತ್ವಕ್ಕೆ

ಚಾಮರಾಜನಗರ: ಮಾನವನ ಹಕ್ಕುಗಳಿಗಾಗಿ ದಿನನಿತ್ಯ ಹೋರಾಟ ನಡೆಯುತ್ತಿದ್ದು, ಮಾನವ ಹಕ್ಕುಗಳಿಗೆ ಧಕ್ಕೆ ಬಂದಾಗ ಸಮಸ್ಯಗಳು ಉದ್ಭವವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಪಿ. ದಿಡ್ಡಿ ತಿಳಿಸಿದರು. ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯಿಂದ ನಡೆದ ಚಾಮರಾಜನಗರ ಜಿಲ್ಲಾ ಘಟಕ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾನವನಿಗೆ ಹಕ್ಕುಗಳು ಏಕೆ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಹಕ್ಕುಗಳಿಗೆ ತನ್ನದೆಯಾದ ಪ್ರಾಮುಖ್ಯತೆ ಇದ್ದು, ಸ್ವಾತಂತ್ರ್ಯ ಪಡೆಯುವುದು ನಮ್ಮ ಜನ್ಮ ಸಿದ್ಧ ಹಕ್ಕಾಗಿದೆ. ಸಂವಿಧಾನಾತ್ಮಕವಾಗಿ ಹಕ್ಕುಗಳು ಅಡಕವಾಗಿದ್ದು, ಜೀವಿಸುವುದೂ ಸೇರಿದಂತೆ ಇತರೆ ಹಕ್ಕುಗಳು ಉಲ್ಲಂಘನೆಯಾದರೆ ಅದನ್ನು ಕಾನೂನಿನಡಿ ಎದುರಿಸಬಹುದು. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳುವಳಿಕೆ ನೀಡಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿದ್ದ ಸರ್ಕಾರಿ ಸಹಾಯಕ ಅಬಿಯೋಜಕ ರಾಜಣ್ಣ ಮಾತನಾಡಿ, ಪ್ರತಿಯೊಬ್ಬ ಮಾನವ ತನ್ನದೇ ಆದ ಹಕ್ಕು ಬಾಧ್ಯತೆ ಹೊಂದಿರುತ್ತಾನೆ. ಜಾತಿ, ವರ್ಣಬೇಧ, ಗಂಡು ಹೆಣ್ಣು ಎಂಬ ಭಾಷೆ ಮತ್ತು ಧರ್ಮಗಳ ಹೆಸರಿನಲ್ಲಿ ಷೋಷಣೆಗಳು ನಡೆಯುವುದು ಕಾನೂನು ಬಾಹಿರವಾಗಿದೆ. ಇದಲ್ಲದೇ ಜೀತ ಪದ್ಧತಿ, ಗುಲಾಮಗಿರಿ ಕಾನೂನು ಉಲ್ಲಂಘನೆಯಾಗಿದ್ದು,ಪೊಲೀಸರು ಗುರುತರವಾದ ದೂರು ಇಲ್ಲದೇ ಯಾರನ್ನು ಬಂಧಿಸುವಂತಿಲ್ಲ. ಇತ್ತಿಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಸ್ವಯಂ ಸೇವ ಸಂಸ್ಥೆಗಳು ಗಮನ ಹರಿಸಿ ಅನ್ಯಾಯವನ್ನು ಸರಿಪಡಿಸಬೇಕೆಂದು ಸಲಹೆ ನೀಡಿದರು.ಮಾನವ ಹಕ್ಕು ರಕ್ಷಣೆ ಮತ್ತುಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ರಾಜ್ಯಾಧ್ಯಕ್ಷೆ ಲಕ್ಷಿಮಹೇಶ್ ಮಾತನಾಡಿ, ಸಮಾಜದಲ್ಲಿ ಅಸಮಾನತೆ ಹಾಗೂ ಭ್ರಷ್ಟಾಚಾರದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಕಛೇರಿಗಳಲ್ಲಿ ಹಣ ನೀಡದೇ ಕೆಲಸವಾಗುತ್ತಿಲ್ಲ. ಇದರ ವಿರುದ್ಧ ಹೋರಾಟ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದರು. ಪ್ಲಾಸ್ಟಿಕ್ ನಿರ್ಮೂಲನೆ, ಧನಗಳ ಸಾಗಾಣಿಕೆ, ಗಾಂಜಾ ಮಾರಾಟ, ಅಕ್ರಮ ಕ್ಲಬ್‌ ಮತ್ತು ರೆಸಾರ್ಟ್, ಹಾಗೂ ಮಧ್ಯ ಮಾರಾಟದ ವಿರುದ್ಧ ಹೋರಾಟ ರೂಪಿಸಲಾಗುವುದೆಂದರು.ಸಾರ್ವಜನಿಕರು ತಮ್ಮ ಸಮಸ್ಯೆಗಳು ಏನೇ ಇದ್ದರು ಸಂಘದ ಕಛೇರಿಗೆ ಬಂದು ದೂರು ನೀಡಿದ್ದಲ್ಲಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮೋಹನ್‌ಕುಮಾರ್, ನಾಗರಾಜ ಬಾರ್ಕಿ, ವಕೀಲರ ಸಂಘದ ಅಧ್ಯಕ್ಷ ರವಿಕಾಂತ್, ಪತ್ರಕರ್ತರ ಸಂಘದ ಅಧ್ಯಕ್ಷ ರಂಗೂಪುರ ಶಿವಕುಮಾರ್, ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಶಿವಪ್ರಸಾದ್ ಎಸ್, ಉಪನ್ಯಾಸಕ ಮಹದೇವಸ್ವಾಮಿ, ಮಾಧ್ಯಮ ಸಂಪಾದಕ ಪ್ರದಿಪ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share

About ASLAM PASHA BIG TV NEWS, Chamraj nagar

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!