Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮಾಲೀಕರ ಬೇಜವಾಬ್ದಾರಿತನದಿಂದ ಅಮಾಯಕ ಬಲಿ.

ಮಾಲೀಕರ ಬೇಜವಾಬ್ದಾರಿತನದಿಂದ ಅಮಾಯಕ ಬಲಿ.

ಮಂಡ್ಯ: ಬೆಂಗಳೂರಿನ ಆನಂದ್ ಸ್ವೀಟ್ಸ್ ಅಂಡ್ ಸರ್ವಿಸ್ ನ ಬೇಜವಾಬ್ದಾರಿಯಿಂದ ಅಮಾಯಕ ಯುವಕ ಮಾಕವಳ್ಳಿಯ ನಾಗೇಶ್ ಬಲಿಯಾಗಿದ್ದಾರೆ. ಮಂಡ್ಯ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದ ರಾಮೇಗೌಡರ ಮಗ ನಾಗೇಶ್ ಬೆಂಗಳೂರಿನ ಹೆಸರಾಂತ ಜಿಗಣಿ ನಗರದ ಆನಂದ್ ಸ್ವೀಟ್ಸ್ ಅಂಡ್ ಸರ್ವಿಸ ಈಟಿಪಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದು ತಡರಾತ್ರಿ ನಾಗೇಶ್ ರವರು ಈಟಿಪಿ ದುಸ್ಥಿತಿಯಲ್ಲಿದ್ದು ಕಂಡು ಸರಿಪಡಿಸಲು ಹೋದಾಗ ಇಟಿಪಿ ಒಳಭಾಗಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ನಾಗೇಶ್ ರವರೊಡನೆ ಕೆಲಸ ಮಾಡುವ ಕಾರ್ಮಿಕರು ಗ್ರಾಮದ ಮುಖಂಡರಿಗೆ ತಿಳಿಸಿದ್ದಾರೆ ಈ ಅನಾಹುತಕ್ಕೆ ಕಾರಣ ವ್ಯವಸ್ಥಾಪಕರು ಈಟಿಪಿ 12 ಅಡ್ಡಿ ಅಳ ಇದ್ದ ಒಳಭಾಗಕ್ಕೆ ಮೆಟ್ಟಿಲು ವ್ಯವಸ್ಥೆ ಸುಧಾರಿಸಿಲ್ಲ. ಮತ್ತು ಆಕ್ಸಿಜನ್ ವ್ಯವಸ್ಥೆ ಇಲ್ಲದ ಕಾರಣ ನಾಗೇಶ್ ರವರು ಮೇಲ್ ಬರಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನಪ್ಪಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಗೆ ಕೊಂಡೊಯ್ಯಲಾಗಿದೆ ಅದಲ್ಲದೆಕಾರ್ಖಾನೆಯಿಂದ ಯಾವುದೇ ರೀತಿಯಲ್ಲಿ ಫಿ.ಎಫ್. ಮತ್ತು ಇ.ಎಸ್.ಐ ಇರುವುದಿಲ್ಲ‌ . ಇದಕಿಂತ ಹೆಚ್ಚಾಗಿ ಕಾರ್ಖಾನೆಗಳ ಸ್ವಸ್ಥಾ ಇಲಾಖೆಯ ಅದಿನಿಯಮವನ್ನು ಉಲಂಘನೆ ಮಾಡಿರುತ್ತಾರೆ. ಇದಕ್ಕೆ ಕಾರ್ಮಿಕ ಆಯುಕ್ತರೆ ನೆರಹೂಣೆಗಾರರು. ಮೃತನ ಕಾರ್ಮಿಕನ ಕುಟುಂಬಕ್ಕೆ ಸರ್ಕಾರ ಮತ್ತು ಕಂಪನಿಯ ಆಡಳಿತ ಮಂಡಳಿ ಮುಖ್ಯಸ್ಥರಾದ ರಂಗನ್ನೇಗೌಡ ಪರಿಹಾರ ಕೋಡಿಸಿಕೋಡಬೆಕುದು ಗ್ರಾಮದ ಹಿರಿಯರು ಮುಖಂಡರು ಬೆಂಗಳೂರಿನ ಜಿಗಣಿಯ ನಗರದ ಆನಂದ್ ಸ್ವೀಟ್ಸ್ ಅಂಡ್ ಸರ್ವಿಸ್ ಕಂಪನಿಯ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಯೋಗೇಶ್ , ಕುಮಾರ್ , ತಮ್ಮೇಗೌಡ ಕರೋಟಿ, ಮಹದೇವ್, ಗ್ರಾಮದ ಮುಖಂಡರಾದ ಲಾಯರ್ ರಘು , ರಾಮೇಗೌಡ, ಪುಟ್ಟೇಗೌಡ, ದಿಲೀಪ್ ಮತ್ತಿತರರು ಇದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!