Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮಿತ್ರರ ಮುನಿಸಿಗೆ ಮಣಿದ ಹೆಚ್​​ಡಿಕೆ, 141 ಇನ್ಸ್​​ಪೆಕ್ಟರ್​​ ವರ್ಗಾವಣೆಗೆ ಬ್ರೇಕ್​..!

ಮಿತ್ರರ ಮುನಿಸಿಗೆ ಮಣಿದ ಹೆಚ್​​ಡಿಕೆ, 141 ಇನ್ಸ್​​ಪೆಕ್ಟರ್​​ ವರ್ಗಾವಣೆಗೆ ಬ್ರೇಕ್​..!

ಬೆಂಗಳೂರು: ಸರ್ಕಾರ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನ ನೋಡಿದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲವೇನೋ ಅನ್ನೋ ಅನುಮಾನ ಸಹಜವಾಗಿಯೇ ಹುಟ್ಟಿಕೊಳ್ಳುತ್ತಿದೆ.
ಯಾಕಂದ್ರೆ ಮೊನ್ನೆ ಸಾರಿಗೆ ಇಲಾಖೆ ಬಸ್​ ದರಲ್ಲಿ ಶೇ.18 ರಷ್ಟು ಏರಿಸಿ ಆದೇಶ ಹೊರಡಿಸಿತ್ತು. ಆದೇಶ ಹೊರ ಬಿದ್ದ ನಿಮಿಷಾರ್ಧದಲ್ಲೇ ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆ ನೀಡಿದ್ದರು. ಇದೀಗ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶದಲ್ಲೂ ಸಿಎಂ ಹೆಚ್​ಡಿಕೆ ಅದನ್ನೇ ಮಾಡಿದ್ದಾರೆ.
ನಿನ್ನೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, 141 ಇನ್ಸ್​ಪೆಕ್ಟರ್​ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ವರ್ಗಾವಣೆ ಆದೇಶ ಹೊರಡಿಸಿ ಒಂದು ದಿನ ಕೂಡ ಪೂರ್ತಿಯಾಗಿ ಕಳೆದಿಲ್ಲ. ಅಷ್ಟರೊಳಗೆ ರಾಜ್ಯ ಸರ್ಕಾರ ಇನ್ಸ್​​ಪೆಕ್ಟರ್​ಗಳ ವರ್ಗಾವಣೆಗೆ ತಡೆ ನೀಡಿದೆ.
ಯಾಕೆ ವರ್ಗಾವಣೆಗೆ ಬ್ರೇಕ್​..?
ಇನ್ಸ್​ಪೆಕ್ಟರ್​ಗಳ ವರ್ಗಾವಣೆಗೆ ಕಾಂಗ್ರೆಸ್​​​ನ​ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ತಾವು ಶಿಫಾರಸು ಮಾಡಿದ್ದ ಪತ್ರಕ್ಕೆ ಸಿಎಂ ಕುಮಾರಸ್ವಾಮಿ ಮಾನ್ಯತೆ ನೀಡಿಲ್ಲ. ನಮ್ಮನ್ನ ಕಡೆಗಣಿಸಿ ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ ಅಂತಾ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮಿತ್ರ ಪಕ್ಷಗಳ ಅಸಮಾಧಾನದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಇನ್ಸ್​​ಪೆಕ್ಟರ್​ಗಳ ವರ್ಗಾವಣೆ  ಆದೇಶಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ವಾ..?
ಸಿಎಂ ಕುಮಾರಸ್ವಾಮಿ ಮಾಡುತ್ತಿರುವ ಈ ರೀತಿಯ ಸರ್ಕಸ್​ಗಳನ್ನ ನೋಡಿದ್ರೆ ಮೋಲ್ನೋಟಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಾಗುತ್ತಿದೆ. ಹೇಗಾದರೂ ಮಾಡಿ ಐದು ವರ್ಷ ಸರ್ಕಾರವನ್ನು ನಡೆಸಲೇಬೇಕು ಅಂತಾ ಪಣ ತೊಟ್ಟಿರುವ ಸಿಎಂ ಕುಮಾರಸ್ವಾಮಿ, ಮಿತ್ರ ಪಕ್ಷದ ನಾಯಕರ ಒತ್ತಡಕ್ಕೆ ಮತ್ತೆ ಮಣಿದಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಮುಸುಕಿನ ಗುದ್ದಾಟ ಮುಂದುವರಿದಿದೆ ಅನ್ನೋದು ಸಾಬೀತಾಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!