Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಮೀಟೂ ಎಲ್ಲಿಂದ ಶುರುವಾಯ್ತು ಅನ್ನೋದು ನಿಮಗೆ ಗೊತ್ತಾ..

ಮೀಟೂ ಎಲ್ಲಿಂದ ಶುರುವಾಯ್ತು ಅನ್ನೋದು ನಿಮಗೆ ಗೊತ್ತಾ..

ನವ ದೆಹಲಿ: ಮೀಟೂ ಸದ್ಯ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಮಹಿಳೆಯರ ಮೇಲೆ ಗಪ್​ಚುಪ್ಪಾಗಿ ನಡೆದ ಹಲವು ಕಹಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನ ನೋಡಿ ಎಲ್ಲರೂ ಆಶ್ಚರ್ಯವಾಗಿದ್ದಾರೆ. ಇಷ್ಟಕ್ಕೂ ಇದು ಹೇಗೆ ಪ್ರಾರಂಭವಾಯಿತು ಅಂತೀರಾ. ಹಾಲಿವುಡ್​ನಲ್ಲಿ ವೀಯಾನ್​ಸ್ಟೈನ್​ ಎನ್ನುವ ನಿರ್ಮಾಪಕ ತನ್ನ ಸಿನಿಮಾದಲ್ಲಿ ಕೆಲಸ ಮಾಡುವ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದ್ದನಂತೆ. ಆ ಮಹಿಳೆಯರನ್ನ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದನಂತೆ. ಒಂದು ವೇಳೆ ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಅವರನ್ನ ರೇಪ್​ ಮಾಡುತ್ತಿದ್ದನಂತೆ.. ವೀಯಾನ್​ಸ್ಟೈನ್​ ಹೀಗೆಯೇ ಸುಮಾರು 70ಕ್ಕೂ ಅಧಿಕ ಮಹಿಳೆಯರ ಬಾಳನ್ನು ಹಾಳು ಮಾಡಿದ್ದಾನೆ ಎಂದು ಆರೋಪಿಸಿ, ಪತ್ರಕರ್ತೆಯೊಬ್ಬರು ನ್ಯೂಯಾರ್ಕ್ಸ್​ ಟೈಮ್ಸ್​​ನಲ್ಲಿ ಆರ್ಟಿಕಲ್​ ಬರೆದಿದ್ದರಂತೆ.
ಅದಾದ ಬಳಿಕ ಪ್ರತಿನಿತ್ಯ ಮೀಟೂ ಅಂತಾ ಹಲವಾರು ಮಹಿಳೆಯರು ಆರೋಪ ಮಾಡೋದಕ್ಕೆ ಶುರುಮಾಡಿದ್ರಂತೆ. ಟೈಮ್ಸ್​ ಪತ್ರಿಕೆಯ ಪತ್ರಕರ್ತೆಯರಾದ ಕಂಟೋರ್​ ಮತ್ತು ಥೂಹೆಮ್​ ಅತ್ಯುನ್ನತ ಸ್ಥಾನದಲ್ಲಿರುವವರ ಮತ್ತು ಶ್ರೀಮಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನ ಬಹಿರಂಗವಾಗಿ ಪತ್ರಿಕೆಗಳಲ್ಲಿ ವರದಿ ಮಾಡಿದ್ರು. ಅವರ ಈ ಪರಿಶ್ರಮಕ್ಕೆ ವಿಶ್ವ ಖ್ಯಾತ ದಿ ನ್ಯೂಯಾರ್ಕ್ ರೊನಾರ್ನ್​​ ಫಾರೋ ಪ್ರಶಸ್ತಿ ನೀಡಿ ಆ ಪತ್ರಕರ್ತರನ್ನ ಗೌರವಿಸಲಾಯಿತು. ಅಲ್ಲಿಂದ ಶುರುವಾದ ಮೀಟೂ ಅಭಿಯಾನ ಇದೀಗ ಸ್ಯಾಂಡಲ್​ವುಡ್​ವರೆಗೂ ಬಂದು ತಲುಪಿದೆ.
ಇದಕ್ಕೂ ಮೊದಲು ಕೂಡ ಮೀಟೂ ಅಸ್ತಿತ್ವದಲ್ಲಿತ್ತು. ಆಫ್ರಿಕನ್​-ಅಮೆರಿಕನ್​ ನಾಗರಿಕ ಹಕ್ಕುಗಳ ಕಾರ್ಯಕರ್ತರಾದ ತರಾನಾ ಬರ್ಕ್ ಈ ಪದವನ್ನ ಬಳಸಿದ್ದರಂತೆ. ಸ್ಪ್ಯಾನಿಷ್​ನಲ್ಲಿ #YoTambien, ಇಟಲಿಯಲ್ಲಿ #QuellaVoltaChe, ಫ್ರೆಂಚ್​ನಲ್ಲಿ #BalanceTonPorc ಎನ್ನುವ ಹೆಸರುಗಳಲ್ಲಿ ಈ ಮೀಟೂ ಆವರಿಸಿದೆ.
ಅವರು ತಮ್ಮ ಮೇಲೆ ಮಾಡಿದಂತಹ ದೌರ್ಜನ್ಯವನ್ನ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!