Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಮುಂಬೈ ವಿರುದ್ದ ರೋಚಕ ಜಯ ಗಳಿಸಿದ ಕರ್ನಾಟಕ.

ಮುಂಬೈ ವಿರುದ್ದ ರೋಚಕ ಜಯ ಗಳಿಸಿದ ಕರ್ನಾಟಕ.

​ ಬೆಂಗಳೂರು: ಹಾಲಿ ವಿಜಯ ಹಜಾರೆ ಚಾಂಪಿಯನ್​ ಮುಂಬೈ ತಂಡ ಶಿವಂ ದುಬೆಯ ಸ್ಫೋಟಕ ಶತಕದ ಹೊರತಾಗಿಯೂ ಕರ್ನಾಟಕ ತಂಡದ ಮುಂದೆ ಮಂಡಿಯೂರಿದೆ.ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಕರ್ನಾಟಕ ತಂಡ 50 ಓವರ್​ಗಳಲ್ಲಿ 312 ರನ್​ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್​ 58, ದೇವದತ್​ ಪಡಿಕ್ಕಲ್​ 79, ಮನೀಷ್ ಪಾಂಡೆ 62, ರೋಹನ್​ ಕದಂ 32, ಶರತ್​ ಬಿಆರ್​ 28, ಕೆ ಗೌತಮ್ 22, ಹಾಗೂ ಮಿಥುನ್​ 14 ರನ್​ಗಳಿಸಿ 312 ರನ್​ಗಳ ಬೃಹತ್​ ಮೊತ್ತಕ್ಕೆ ಕಾರಣರಾದರು.313 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ತಂಡ 48.1 ಓವರ್​ಗಳಲ್ಲಿ ಆಲೌಟ್ ಆಗುವ ಮೂಲಕ ಕೇವಲ 9 ರನ್​ಗಳಿಂದ ಸೋಲೊಪ್ಪಿಕೊಂಡಿತು. ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದ ಶಿವ ದುಬೆ 68 ಎಸೆತಗಳಲ್ಲಿ 10 ಸಿಕ್ಸರ್​ ಹಾಗೂ 7 ಬೌಂಡ​ರಿ ನೆರವಿನಿಂದ 118 ರನ್​ಗಳಿಸಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿ ವಿಫಲರಾದರು. ಪ್ರಮುಖ ಬ್ಯಾಟ್ಸ್​ಮನ್​ಗಳಾದ ಅಯ್ಯರ್​ (11), ಸಿದ್ದಾರ್ಥ್​ ಲಾಡ್​(34), ಆದಿತ್ಯ ತರೆ(32), ಸೂರ್ಯಕುಮಾರ್​ ಯಾದವ್​(26) ರನ್​ ಗಳಿಸಲು ವಿಫಲರಾಗಿದ್ದು ತಂಡದ ಸೋಲಿಗೆ ಕಾರಣವಾಯಿತು.ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ತೋರಿದ ಮಿಥುನ್​ 3 ವಿಕೆಟ್, ಕೆ ಗೌತಮ್​3​, ಪ್ರಸಿದ್​ ಕೃಷ್ಣ 2, ರೋನಿತ್​ ಹಾಗೂ ಶ್ರೇಯಸ್​ ಗೋಪಾಲ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!