Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಮೂರು ಸಾವಿರ ಮಠದ ರಸ್ತೆಯಲ್ಲಿ ರಸ್ತೆಯ ಮೇಲೆ ಹರಿಯುತ್ತಿರುವ ಚೆರಂಡಿ ನೀರು.

ಮೂರು ಸಾವಿರ ಮಠದ ರಸ್ತೆಯಲ್ಲಿ ರಸ್ತೆಯ ಮೇಲೆ ಹರಿಯುತ್ತಿರುವ ಚೆರಂಡಿ ನೀರು.

ಪಾಲಿಕೆಗೆ ಜನರಿಂದ ಹಿಡಿಶಾಪ.ಹುಬ್ಬಳ್ಳಿ: ಅವಳಿನಗರದ ಪ್ರಮುಖ ರಸ್ತೆಯಲ್ಲಿಯೇ ಒಳಚರಂಡಿಯ ಮ್ಯಾನ್ ಹೋಲ್ ಗಳು ಬ್ಲಾಕ್ ಆಗಿದ್ದು, ಪರಿಣಾಮ ಚೆರಂಡಿಯ ಕೊರಚೆ ನೀರು ರಸ್ತೆಯ ಮೇಲೆ ಹರಿಯುವಂತಾಗಿದೆ.‌ ಹೌದು, ಇತಿಹಾಸ ಪ್ರಸಿದ್ಧ ಮೂರುಸಾವಿರ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೇ ಮ್ಯಾನ್ ಹೋಲ್ ಬ್ಲಾಕ್ ಆಗಿದ್ದು, ಸತತವಾಗಿ ರಸ್ತೆ ಮೇಲೆ ಕೊಳಚೆ ಹರಿಯುವಂತಾಗಿದೆ. ಪರಿಣಾಮ ಮೂರು ಸಾವಿರ ಮಠದ ಒಳಗಡೆ ಹೋಗಬೇಕೆಂದರೆ ಈ ಕೊಳಚೆ ನೀರನ್ನು ತುಳಿದೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ಮ್ಯಾನ್‌ ಹೋಲ್ ಕಳೆದ ಒಂದು ವಾರದಿಂದ ಹರಿಯುತ್ತಿದ್ದರು ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಸಮಸ್ಯೆ ಕುರಿತು ಸ್ಥಳೀಯರು ನೂರಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರು ಕೂಡಾ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನೂ ಈ ಸಮಸ್ಯೆ ಇಲ್ಲಿ ಅಷ್ಟೇ ಅಲ್ಲದೇ ಕಾಟನ್ ಮಾರ್ಕೆಟ್ ಮುಖ್ಯ ರಸ್ತೆಯಲ್ಲಿ, ಬಸವವನದ ಟ್ರಾಫಿಕ್ ಸಿಗ್ನಲ್ ಬಳಿ, ಲೋಕಪ್ಪನ ಹಕ್ಕಲದ ಮಂಜುನಾಥ ಹೊಟೇಲ್ ಬಳಿ, ದಾಜಿಬಾನ್ ಪೇಟೆಯ ದುರ್ಗಾದೇವಿ ದೇವಸ್ಥಾನದ ಪಕ್ಕ, ಗಣೇಶ ಪೇಟೆಯ ಮೀನು ಮಾರ್ಕೆಟ್, ಮಂಗಳ ಓಣಿಯ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ಮ್ಯಾನ್ ಹೋಲ್ ಹಾಳಾಗಿ ಹೋಗಿವೆ. ಇಷ್ಟೆಲ್ಲಾ ನಗರದಲ್ಲಿ ಸಮಸ್ಯೆಗಳಿದ್ದರು ಪಾಲಿಕೆ ಅಧಿಕಾರಿಗಳು ಮಾತ್ರ ದುರಸ್ತಿ ಮಾಡಲ್ಲ. ಅಲ್ಲದೇ ಮ್ಯಾನ್ ಹೋಲ್ ಬ್ಲಾಕ್ ಆದಾಗ ಕನಿಷ್ಠ 15 ರಿಂದ 30 ದಿನಗಳಲ್ಲಿ ದುರಸ್ತಿ ಮಾಡಿಸಬೇಕೆಂಬ ನಿಯಮವಿದೆ. ಆದರೆ ಆ ರೀತಿಯ ಕೆಲಸಗಳು ನಗರದಲ್ಲಿ ಆಗುತ್ತಿಲ್ಲ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!