Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಮೈತ್ರಿ ಅಭ್ಯರ್ಥಿ ಕುಲಕರ್ಣಿಗೆ ನವಚೇತನ ಆಧ್ಯಾತ್ಮ ಟ್ರಸ್ಟ್ ಬೆಂಬಲ: ಶರೀಫ್ ಸ್ವಾಮೀಜಿ

ಮೈತ್ರಿ ಅಭ್ಯರ್ಥಿ ಕುಲಕರ್ಣಿಗೆ ನವಚೇತನ ಆಧ್ಯಾತ್ಮ ಟ್ರಸ್ಟ್ ಬೆಂಬಲ: ಶರೀಫ್ ಸ್ವಾಮೀಜಿ

Spread the love

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿಯವರಿಗೆ ನವಚೇತನ ಆಧ್ಯಾತ್ಮ ಜಾಗೃತದತ್ತ ಸೇವಾ ಟ್ರಸ್ಟ್ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಸೇವಾ ಟ್ರಸ್ಟ್ ಮುಖ್ಯಸ್ಥರಾದ ಶರೀಪ ಶಿವಯೋಗಿ ಶಾಸ್ತ್ರಿಗಳು ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ರೈತರಾಗಿರುವ ವಿನಯ ಕುಲಕರ್ಣಿ ಅವರಿಗೆ ರೈತರ ಮತ್ತು ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕರಾಗಿದ್ದಾರೆ ಈ ಹಿನ್ನೆಲೆಯಲ್ಲಿ ಸಮಾಜದ ಶ್ರೆಯೋಭಿವೃದ್ಧಿಗಾಗಿ ವಿನಯ ಕುಲಕರ್ಣಿಯವರಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದರು. ಶಾಸಕರಾಗಿ ಮಂತ್ರಿಯಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಅವರಿಗೆ ಮತ್ತೊಮ್ಮೆ ಧಾರವಾಡ ಲೋಕಸಭಾ ಕ್ಷೇತ್ರದ ಸೇವೆಗೆ ಅವಕಾಶ ಕಲ್ಪಸಲು ನಮ್ಮ ಟ್ರಸ್ಟ್ ಸನ್ನದವಾಗಿದೆ ಎಂದು ಅವರು ಹೇಳಿದರು. ಎಲ್ಲಾ ಸಮಾಜ ಬಾಂಧವರು ತಮ್ಮ ಅಮೂಲ್ಯವಾದ ಮತವನ್ನು ಅಭಿವೃದ್ಧಿಗೆ ಶ್ರಮಿಸುವ ನಿಮ್ಮ ಮನೆಯ ಮಗನಾದ ವಿನಯ ಕುಲಕರ್ಣಿಯವರಿಗೆ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಷಡಕ್ಷರಿ ಸ್ವಾಮೀಜಿ, ವಿದ್ಯಾನಂದ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಗುರುಸ್ವಾಮಿಗಳು ಸೇರಿದಂತೆ ಇತರರು ಇದ್ದರು.

Check Also

‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್

Spread the loveತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!