Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡ ಪಾಕ್.

ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡ ಪಾಕ್.

ಲಾಹೋರ್​​: ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡು ನಿರಾಸೆಗೊಳಗಾಗಿದ್ದ ಶ್ರೀಲಂಕಾ ಟಿ-20 ಕ್ರಿಕೆಟ್​​ನಲ್ಲಿ ಅದ್ಭುತ ಸಂಘಟಿತ ಪ್ರದರ್ಶನ ನೀಡಿದ್ದು, ಇದರ ಫಲವಾಗಿ ಮೊದಲ ಚುಟುಕು ಪಂದ್ಯದಲ್ಲಿ ತವರು ನೆಲದಲ್ಲಿ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ರುಚಿ ತೋರಿಸಿದೆ. Sri Lanka winಶ್ರೀಲಂಕಾ ಪ್ಲೇಯರ್​ ಬ್ಯಾಟಿಂಗ್​​ಗಡಾಫಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಶ್ರೀಲಂಕಾ ತಂಡ ಅದ್ಭುತ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಗುಣತಿಲಕ್​ ಹಾಗೂ ಫರ್ನಾಂಡೋ ಮೊದಲ ವಿಕೆಟ್​ನಷ್ಟಕ್ಕೆ 84ರನ್​​ ಕೂಡಿಸಿದ್ರು. 33ರನ್​ ಸಂಪಾದಿಸಿ ಫರ್ನಾಂಡೋ ವಿಕೆಟ್​ ಒಪ್ಪಿಸಿದ ಬಳಿಕ ಗುಣತಿಲಕ್​ ಜೊತೆ ಸೇರಿ ರಾಜಪಕ್ಷೆ ಸಹ ಉತ್ತಮ ಪ್ರದರ್ಶನ ನೀಡಿದರು. ಇದೇ ವೇಳೆ ಗುಣತಿಲಕ್​​ 38 ಎಸೆತಗಳಲ್ಲಿ ಬರೋಬ್ಬರಿ 57ರನ್​ಗಳಿಸಿದ್ರೆ, ರಾಜಪಕ್ಷೆ ಕೇವಲ 22 ಎಸೆತಗಳಲ್ಲಿ 32ರನ್​ಗಳಿಸಿದರು. ನಂತರ ಬಂದ ಕ್ಯಾಪ್ಟನ್​ ಧನುಷ್​ ಶಂಕರ್​​ 17​, ಜಯಸೂರ್ಯ 2​, ಉದ್ದಾನ್​ 5​ ಹಾಗೂ ಹಸರಂಗ್​ ಅಜೇಯ 7 ರನ್​ಗಳಿಕೆ ಮಾಡಿದರು. ಕೊನೆಯದಾಗಿ ಲಂಕಾ ತಂಡ 5 ವಿಕೆಟ್ ​ನಷ್ಟಕ್ಕೆ 165 ರನ್​ಗಳಿಸಿ ಎದುರಾಳಿ ತಂಡಕ್ಕೆ 166 ರನ್​ಗಳ ಟಾರ್ಗೆಟ್​ ನೀಡಿತು.ಪಾಕ್​ ಪರ ಮೊಹಮ್ಮದ್​ ಹಸೀನ್​ 3 ವಿಕೆಟ್​ ಪಡೆದರೆ, ಖಾನ್​ 1ವಿಕೆಟ್​ ಪಡೆದರು.ಶ್ರೀಲಂಕಾ ಅಭಿಮಾನಿಗಳ ಸಂಭ್ರಮಇದಾದ ಬಳಿಕ 166ರನ್​ ಟಾರ್ಗೆಟ್​ ಬೆನ್ನತ್ತಿದ್ದ ಪಾಕ್​ಗೆ ಆರಂಭದಲ್ಲೇ ಉದ್ದಾನ್​ ಬ್ರೇಕ್​ ನೀಡಿದರು. 4 ರನ್​ಗಳಿಸಿದ ಅಹ್ಮದ್​ ಶೆಹಜಾದ್​​ ವಿಕೆಟ್​ ಪಡೆದುಕೊಂಡರು. ಇದರ ಬೆನ್ನಲ್ಲೇ ಉಮರ್​ ಅಕ್ಮಲ್​​ ಖಾತೆ ತೆರೆಯುವುದಕ್ಕೂ ಮುನ್ನವೇ ಪ್ರದೀಪ್​ ಬಲೆಗೆ ಬಿದ್ದು ಪೆವಿಲಿಯನ್​ ಸೇರಿದರು. ಇದಾದ ಬಳಿಕ ಬಾಬರ್​ ಅಜಂ(13) ವಿಕೆಟ್​ ಸಹ ಪಡೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್​ ಸರ್ಫರಾಜ್​​(24) ಅಹ್ಮದ್​​​​(25) ತಂಡಕ್ಕೆ ಆಸರೆಯಾದರೂ ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಬದಂ ಆಸೀಫ್​ ಅಲಿ 6ರನ್​, ಇಮಾದ್​ ವಾಸೀಂ 7ರನ್​, ಅಶ್ರಫ್​​ 8ರನ್​, ಶಬ್ದಾದ್​ ಖಾನ್​​ 6ರನ್​ ಹಾಗೂ ಅಮೀರ್​ 1ರನ್​ಗಳಿಕೆ ಮಾಡಿದರು. ಕೊನೆಯದಾಗಿ ತಂಡ 17.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 101ರನ್​ಗಳಿಕೆ ಮಾಡುವ ಮೂಲಕ 64ರನ್​ಗಳ ಹೀನಾಯ ಸೋಲು ಕಂಡಿತ್ತು. ಇತ್ತ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ನುವಾನ್​ ಪ್ರದೀಪ್​, ಉದ್ಧಾನ್​ ತಲಾ 3ವಿಕೆಟ್​ ಪಡೆದು ಮಿಂಚಿದ್ರೆ, ಹಸರಂಗ್​ 2ವಿಕೆಟ್​ ಹಾಗೂ ರಂಜಿತ್​ 1ವಿಕೆಟ್​ ಪಡೆದುಕೊಂಡರು.ಇನ್ನು ಪಾಕ್ ಪರ ಎರಡನೇ ಟಿ-20 ಪಂದ್ಯವನ್ನಾಡಿರುವ 19 ವರ್ಷದ ಮೊಹಮ್ಮದ್​ ಹಸೈನ್​ ಹ್ಯಾಟ್ರಿಕ್ ವಿಕೆಟ್​ ಪಡೆದುಕೊಂಡು ಮಿಂಚಿದರು. 32ರನ್​ಗಳಿಸಿದ್ದ ರಾಜಪಕ್ಷೆ,17ರನ್​ಗಳಿಸಿದ್ದ ಶಂಕರ್​ ಹಾಗೂ 2ರನ್​ಗಳಿಸಿದ್ದ ಜಯಸೂರ್ಯ ವಿಕೆಟ್​ ಪಡೆದುಕೊಂಡು ಈ ಸಾಧನೆ ಮಾಡಿದರು. ಸಣ್ಣ ವಯಸ್ಸಿನಲ್ಲಿ ಈ ದಾಖಲೆ ನಿರ್ಮಾಣ ಮಾಡಿರುವ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಸಹ ಪಾತ್ರರಾದರು. 16ನೇ ಓವರ್​ನ ಕೊನೆ ಎಸೆತದಲ್ಲಿ ರಾಜಪಕ್ಷೆ ಹಾಗೂ 19ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಉಳಿದ ವಿಕೆಟ್​ ಪಡೆದುಕೊಂಡರು.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!