Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಯುಪಿ ಯೋಧ ತಂಡವನ್ನು ಮಣಿಸಿದ ತೆಲುಗು ಟೈಟನ್ಸ್​.

ಯುಪಿ ಯೋಧ ತಂಡವನ್ನು ಮಣಿಸಿದ ತೆಲುಗು ಟೈಟನ್ಸ್​.

ಗ್ರೇಟರ್​ ನೋಯ್ಡಾ: ಪ್ರೋ ಕಬಡ್ಡಿ ಲೀಗ್​ನ 7 ಸೀಸನ್​ನಲ್ಲಿ ಕೊನೆಯ ಪಂದ್ಯವಾಡಿದ ತೆಲುಗು ಟೈಟನ್ಸ್​ ಬಲಿಷ್ಠ ಯುಪಿ ಯೋದ ತಂಡವನ್ನು ಬಗ್ಗುಬಡಿದು ಗೆಲುವಿನ ಮೂಲಕ ಟೂರ್ನಿಗೆ ಗುಡ್​ ಬೈ ಹೇಳಿದೆ.ನೋಯ್ಡಾದ ಶಹೀದ್​ ವಿಜಯ್​ಸಿಂಗ್​ ಪಥಿಕ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್​ನ 129ನೇ ಪಂದ್ಯದಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿರುವ ತೆಲುಗು ಟೈಟನ್ಸ್​ ಬಲಿಷ್ಠ ಯುಪಿ ಯೋಧ ತಂಡವನ್ನು 41-36ರಲ್ಲಿ ಮಣಿಸಿತು.ಮೊದಲಾರ್ಧದಲ್ಲಿ ಯೋಧ 20-14ರಲ್ಲಿ ಮುನ್ನಡೆ ಸಾಧಿಸಿತ್ತು. ಅಲ್ಲದೆ ದ್ವಿತೀಯಾರ್ಧದ 12ನೇ ನಿಮಿಷದಲ್ಲೂ 32-18ರಲ್ಲಿ ಮುನ್ನಡೆಯಲ್ಲೆ ಇತ್ತು. ಆದರೆ, ಕೊನೆಯ 8 ನಿಮಿಷ ಆಟದಲ್ಲಿ ಸಿದ್ದಾರ್ಥ್​ ದೇಸಾಯಿಯ ಆರ್ಭಟಕ್ಕೆ ನಲುಗಿ ಪಂದ್ಯವನ್ನು ಕಳೆದುಕೊಂಡಿತು.ಅದ್ಭುತ ರೈಡಿಂಗ್​ ನಡೆಸಿದ ಸಿದ್ದಾರ್ಥ್​ ದೇಸಾಯಿ 15 ಅಂಕ ಸಂಪಾದಿಸಿ ಟಾಪ್​ ರೈಡರ್​ ಎನಿಸಿಕೊಂಡರು. ಫರಾದ್​ ಮಿಲಘರ್ದನ್​ 4 ಡಿಫೆಂಡರ್​ಗಳಾದ ಕೃಷ್ಣ ಮದಾನೆ 4, ಅಂಕಿತ್ ಬೆನಿವಾಲ್​ 3, ರಾಕೇಶ್​ ಗೌಡ 3, ಸಿ ಅರುಣ್​ 2 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯೋಧ ತಂಡದ ಪರ ಶ್ರೀಕಾಂತ್​ ಜಾಧವ್​ 8, ರಿಷಾಂಕ್​ ದೇವಾಡಿಗ 8, ಮೋನು ಗೋಯಟ್​ 4, ಡಿಫೆಂಡರ್​ ಸುಮಿತ್​ 5, ನಿತೇಶ್​ ಕುಮಾರ್​ 4 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!