Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಯೋಗಿ ನಾಡಲ್ಲಿ, ಮೋದಿ ಱಲಿ ಮುಗಿಸಿ ಬರುತ್ತಿದ್ದ ಮತ್ತೊಬ್ಬ ಪೊಲೀಸ್​ ಕಲ್ಲೇಟಿಗೆ ಬಲಿ..!

ಯೋಗಿ ನಾಡಲ್ಲಿ, ಮೋದಿ ಱಲಿ ಮುಗಿಸಿ ಬರುತ್ತಿದ್ದ ಮತ್ತೊಬ್ಬ ಪೊಲೀಸ್​ ಕಲ್ಲೇಟಿಗೆ ಬಲಿ..!

ಲಖೌನ್: ಬುಲಂದರ್​ಶಹರ್​​ನಲ್ಲಿ ನಡೆದ ಪೊಲೀಸ್​​​ ಇನ್ಸ್​ಪೆಕ್ಟರ್ ಸುಭೋದ್​ ಕುಮಾರ್​ ಸಿಂಗ್​ರ​​ ಹತ್ಯೆಯ ಕಹಿ ಘಟನೆ ಇನ್ನೂ ಹಸಿ ಹಸಿಯಾಗಿದೆ. ಇದರ ಬೆನ್ನಲ್ಲೇ, ನಿನ್ನೆ ಗಾಜೀಪುರ ಜಿಲ್ಲೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್​​ ಪೇದೆಯೊಬ್ಬ ಮೃತಪಟ್ಟಿದ್ದಾರೆ.ಗಾಜೀಪುರ್​​ನಿಂದ 350ಕಿ.ಮೀ. ದೂರವಿರುವ ಕಥವಾದಲ್ಲಿ ಹತ್ಯೆ ನಡೆದಿದ್ದು, ಮೃತ ಪೇದೆಯನ್ನು ನಾನೆರಾ ಪೊಲೀಸ್​ ಠಾಣೆಯ ಸುರೇಶ್​​ ವತ್ಸ್​​ ಎಂದು ಗುರುತಿಸಲಾಗಿದೆ. ನಿಶಾದ್​ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ನಿಷಾದ್​​ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕಾಗಿ, ಜಿಲ್ಲಾ ಹೆಡ್​ ಕ್ವಾರ್ಟರ್ಸ್​ ಬಳಿ ಧರಣಿ ನಡೆಸಲು ಅನುಮತಿ ಕೇಳಿದ್ರು. ಆದ್ರೆ ಮೋದಿಯ ಱಲಿ ಇದ್ದಿದ್ದರಿಂದ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ, ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ರು.ಇನ್ನು ಈ ಮಧ್ಯೆ ಱಲಿ ಮುಗಿಸಿಕೊಂಡ ಬರುತ್ತಿದ್ದ ಪೊಲೀಸರು, ಹೆದ್ದಾರಿಯಿಂದ ತೆರಳುವಂತೆ ಧರಣಿ ನಿರತರಿಗೆ ಸೂಚಿಸಿದ್ರು ಎನ್ನಲಾಗಿದೆ. ಇದ್ರಿಂದ ರೊಚ್ಚಿಗೆದ್ದ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆಸಿದ್ರು. ಈ ವೇಳೆ ಕಲ್ಲೇಟಿಗೆ ಸುರೇಶ್​ ವತ್ಸ್​ ಎಂಬ ಕಾನ್​ಸ್ಟೇಬಲ್​ ಬಲಿಯಾಗಿದ್ದಾನೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್​​ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಅಲ್ಲದೇ ಮೃತ ಪೊಲೀಸ್​ ಪೇದೆಯ ಕುಟುಂಬಕ್ಕೆ ₹40 ಲಕ್ಷ ಹಾಗೂ ಹಾಗೂ ಪೇದೆಯ ಪೋಷಕರಿಗೆ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!