Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ರನ್ ಪಡೆಯದ ಪೂಜಾರಗೆ ಅವಾಚ್ಯ ಪದ ಬಳಕೆ ಮಾಡಿದ ರೋಹಿತ್​ ಶರ್ಮಾ.‌

ರನ್ ಪಡೆಯದ ಪೂಜಾರಗೆ ಅವಾಚ್ಯ ಪದ ಬಳಕೆ ಮಾಡಿದ ರೋಹಿತ್​ ಶರ್ಮಾ.‌

ವಿಶಾಖಪಟ್ಟಣಂ: ದ. ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದ 4ನೇ ದಿನ ಚೇತೇಶ್ವರ್​ ಪೂಜಾರಾ ಜೊತೆ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ರೋಹಿತ್‌ ಶರ್ಮಾ ಬಳಸಿರುವ ಪದ ಮೈಕ್​​ನಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.ದಕ್ಷಿಣ ಆಫ್ರಿಕಾದ ಬೌಲರ್​ ಪೀಡ್​ ಎಸೆದ ಚೆಂಡನ್ನು ರೋಹಿತ್​ ಶರ್ಮಾ ಕವರ್​ ಪಾಯಿಂಟ್​​ನತ್ತ ಹೊಡೆದು ಒಂದು ರನ್​ ಕದಿಯಲು ಮುಂದಾಗಿದ್ದಾರೆ. ಈ ವೇಳೆ ನಾನ್​ಸ್ಟ್ರೈಕ್​​ನಲ್ಲಿದ್ದ ಪೂಜಾರ​ ಮೊದಲು ಓಡಲು ಮುಂದಾಗಿ ತದನಂತರ ಹಿಂದೆ ಬಂದು No No ಎಂದಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಹಿತ್​​ ಅವಾಚ್ಯ ಶಬ್ದ ಪ್ರಯೋಗ ಮಾಡಿದ್ದು, ಅದು ಸ್ಟಂಪ್​ ಮೈಕ್​​ನಲ್ಲಿ ರೆಕಾರ್ಡ್‌ ಆಗಿದೆ. ರೋಹಿತ್​,ಚೇತೇಶ್ವರ್​ಇದೇ ವಿಷಯವನ್ನಿಟ್ಟುಕೊಂಡು ಇಂಗ್ಲೆಂಡ್​ನ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಟ್ವೀಟಿಸಿದ್ದು, ಈ ಸಲ ವಿರಾಟ್​​ ಕೊಹ್ಲಿ ಅಲ್ಲ ರೋಹಿತ್​ ಶರ್ಮಾ ಎಂದು ಲೇವಡಿ ಮಾಡಿದ್ದಾರೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!