Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ರಾಜೀನಾಮೆ ನೀಡುವಂತೆ ಪರಿಕ್ಕರ್​​ಗೆ 48 ಗಂಟೆ ಡೆಡ್​ಲೈನ್​..!

ರಾಜೀನಾಮೆ ನೀಡುವಂತೆ ಪರಿಕ್ಕರ್​​ಗೆ 48 ಗಂಟೆ ಡೆಡ್​ಲೈನ್​..!

ಗೋವಾ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಗೋವಾದ ವಿಪಕ್ಷಗಳು 48 ಗಂಟೆ ಡೆಡ್​ಲೈನ್ ನೀಡಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್​ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಪರಿಕ್ಕರ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಪರಿಕ್ಕರ್​ 9 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆಡಳಿತ ಮರು ಸ್ಥಾಪನೆಗೆ ಪರಿಕ್ಕರ್ ರಾಜೀನಾಮೆ ನೀಡಬೇಕು ಅಂತಾ ಒತ್ತಾಯಿಸಿದ್ದಾರೆ. ಇನ್ನು ಪ್ರತಿಭಟನೆಗೆ ಎನ್​ಸಿಪಿ, ಶಿವಸೇನೆ ಸೇರಿದಂತೆ ಎನ್​ಜಿಓ ಕಾರ್ಯಕರ್ತರು ಸಾಥ್​ ನೀಡಿದ್ದು ನಮಗೆ ಪೂರ್ಣಾವಧಿಯ ಮುಖ್ಯಮಂತ್ರಿ ಬೇಕಿದೆ ಅಂತಾ ಪಟ್ಟು ಹಿಡಿದಿದ್ದಾರೆ

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!