Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ರಾಜೀವ್​​​ ಗಾಂಧಿ ಹಂತಕರ ಬಿಡುಗಡೆಗೆ ವೈಕೋ ಒತ್ತಾಯಿಸ್ತಿರೋದೇಕೆ..?

ರಾಜೀವ್​​​ ಗಾಂಧಿ ಹಂತಕರ ಬಿಡುಗಡೆಗೆ ವೈಕೋ ಒತ್ತಾಯಿಸ್ತಿರೋದೇಕೆ..?

ಚೆನ್ನೈ : ರಾಜೀವ್​ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಏಳು ಜನ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಚೆನ್ನೈನಲ್ಲಿ ಎಮ್​​ಡಿಎಂಕೆ ಪಕ್ಷದ ಅಧ್ಯಕ್ಷ ವೈಕೋ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಗವರ್ನರ್​​​ ಬನ್ವಾರಿಲಾಲ್​​​​ ಪುರೋಹಿತ್​​​​ ಬಳಿ ಪ್ರತಿಭಟನಾಕಾರರು ಬೇಡಿಕೆಯನ್ನಿಟ್ಟರು. ಇನ್ನು ವಿರೋಧ ಪಕ್ಷಗಳಾದ ಡಿಎಂಕೆ, ಸಿಪಿಐ ಹಾಗೂ ಸಿಪಿಐ-ಎಂ ಪ್ರತಿಭಟನೆಗೆ ಬೆಂಬಲ ನೀಡಿದವು. ಸಂವಿಧಾನದ 161ನೆ ವಿಧಿಯ ಪ್ರಕಾರ ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸುಂತೆ ಎಂಡಿಎಂಕೆ ಪಕ್ಷದ ಅಧ್ಯಕ್ಷ ವೈಕೋ ಗವರ್ನರ್​ ಬಳಿ ಕೇಳಿಕೊಂಡಿದ್ದಾರೆ. ಅಪರಾಧಿಗಳಾದ ಪೆರಾರಿವಲನ್​​​, ಮುರುಗನ್​, ನಳಿನ್​​​​​​, ಸಂತನ್​, ರವಿಚಂದ್ರನ್, ಜಯಕುಮಾರ್ ಹಾಗೂ ರೋಬೆರ್ಟ್​ ಪ್ಯಾಸ್​ ನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಈ 7 ಜನ ಕೈದಿಗಳು 27 ವರ್ಷಗಳ ಹಿಂದೆ ರಾಜೀವ್​​​​​​ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!