Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ರಿವೀಲ್​ ಆಯ್ತು, ‘ಪಿಗ್ಗಿ ಌಂಡ್​ ನಿಕ್​’ ಲವ್​ ಸ್ಟೋರಿ!.

ರಿವೀಲ್​ ಆಯ್ತು, ‘ಪಿಗ್ಗಿ ಌಂಡ್​ ನಿಕ್​’ ಲವ್​ ಸ್ಟೋರಿ!.

ಬಾಲಿವುಡ್​ ಟೌನ್​ನಲ್ಲಿ, ಇಷ್ಟು ದಿನ ದೀಪಿಕಾ ಌಂಡ್​ ರಣ್​ವೀರ್​ ಮದುವೆಯ ಸಂಭ್ರಮವೇ ಇತ್ತು. ಅವರಿಬ್ಬರ ಲವ್​ ಸ್ಟೋರಿ ಹೇಗೆ ಸ್ಟಾರ್ಟ್​ ಆಯ್ತು, ಅವರಿಬ್ಬರು ಎಲ್ಲಿ ಮೀಟ್​ ಆಗಿದ್ರು ಅನ್ನೋ ವಿಷಯವನ್ನ ಮದುವೆಗೆ ಮುಂಚೆ ಆ ಜೋಡಿ ರಿವೀಲ್​ ಮಾಡಿತ್ತು ಇದೀಗ ಪ್ರಿಯಾಂಕ ಚೋಪ್ರಾ ಮತ್ತು ನಿಕ್​ ಜೋನ್ಸ್ ಸರದಿ. ಹೌದೂ, ಈಗ ಅವರ ಫ್ಯಾನ್ಸ್​ಗಳಲ್ಲಿ ಇವರಿಬ್ಬರ ಲವ್​ ಸ್ಟೋರಿ ಹೇಗ್​​ ಸ್ಟಾರ್ಟ್​ ಆಯ್ತು, ಯಾರು ಮೊದಲು ಪ್ರಪೋಸ್​ ಮಾಡಿದ್ದು? ಎಲ್ಲಿ ಪ್ರಪೋಸ್​ ಮಾಡಿದ್ದು ಅನ್ನೋ ಪ್ರಶ್ನೆಗಳು ಎಲ್ಲರ ತಲೆಯಲ್ಲಿ ಓಡ್ತಿದೆ. ಈ ಪ್ರಶ್ನೆಗಳಿಗೆ ಖುದ್ದು ಪ್ರಿಯಾಂಕ ಌಂಡ್​ ನಿಕ್​ ಉತ್ತರ ಕೊಟ್ಟಿದ್ದಾರೆ.ಪಿಗ್ಗಿ ಌಂಡ್​ ಜೋನ್ಸ್​ ಡೇಟಿಂಗ್​ ಸ್ಟಾರ್ಟ್​ ಆಗಿದ್ದು ಹೇಗೆ? ಯಾವಾಗ..?ಪ್ರಿಯಾಂಕ, ನಿಕ್​ಜೋನ್ಸ್​ ಮೀಟ್​ ಆಗಿ ಎರಡೇ ತಿಂಗಳಲ್ಲೇ ಎಂಗೇಜ್​ಮೆಂಟ್​ ಆದ್ರಾ ಅನ್ನೋ ಪ್ರಶ್ನೆ ಪ್ರಿಯಾಂಕ ಅಭಿಮಾನಿಗಳಲ್ಲಿ ಕಾಡ್ತಾನೇ ಇದೆ. ಅದಕ್ಕೆ ‘ಯೆಸ್-ನೋ‘ ಎರಡೂ ಹೇಳಿದ್ರಂತೆ ​​ಈ ಜೋಡಿ. 2017ರಲ್ಲಿ ನಿಕ್​, ಅಮ್ಮನ ಜೊತೆ ಪ್ರಿಯಾಂಕ ಭೇಟಿ ಮಾಡಿದ್ರು. ಅದಕ್ಕೂ ಮುಂಚೆ ಸೆಪ್ಟೆಂಬರ್ 2016ರಲ್ಲೇ ಈ ಇಬ್ಬರೂ ಜಸ್ಟ್​ ಫ್ರೆಂಡ್ಸ್​ ಆಗಿ ಮಾತನಾಡ್ತಿದ್ರಂತೆ. ಒರಿಜಿನಲೀ ಇವರಿಬ್ಬರೂ ಡೇಟ್​ ಮಾಡೋದಕ್ಕೆ ಸ್ಟಾರ್ಟ್​ ಮಾಡಿದ್ದು 2018ರಿಂದ.ಇವರಿಬ್ಬರಲ್ಲಿ ಫ್ರೆಂಡ್ಸ್​ ಆಗಿ ಮೂವ್​ ಮಾಡಿದ್ದು ಯಾರು..?ನಿಕ್​ ಜೋನ್ಸ್​ ಅಮೆರಿಕನ್​ನ​ ಫೇಮಸ್​ ಸಿಂಗರ್​, ಪ್ರಿಯಾಂಕ ಚೋಪ್ರ ಬಾಲಿವುಡ್​ನ ಬೋಲ್ಡ್​ ಆಕ್ಟ್ರೆಸ್. ​ಇವರಿಬ್ಬರ ಸ್ನೇಹ ಸ್ಟಾರ್ಟ್​ ಆಗಿದ್ದು 2016ರಲ್ಲಿ. ಇವರಿಬ್ಬರ ಸ್ನೇಹದ ಗಿಡವನ್ನ, ಪ್ರೀತಿಯ ಹೂ ರೀತಿ ಟರ್ನ್​ ಮಾಡೋದಕ್ಕೆ ಫಸ್ಟ್​ ಹೆಜ್ಜೆ ಇಟ್ಟಿದ್ದೇ ನಿಕ್​ ಜೋನ್ಸ್​. ಮೊದಲು ನಿಕ್​, ಪ್ರಿಯಾಂಕರ ಟ್ವಿಟ್ಟರ್​ನಲ್ಲೆ ಮೆಸ್ಸೇಜ್​ ಮಾಡಿದ್ರಂತೆ. “ನನ್ನ ಮ್ಯೂಚ್ಯುಯಲ್​ ಫ್ರೆಂಡ್ಸ್​ನಿಂದ ನಾನು ತುಂಬಾ ಕೇಳ್ಪಟ್ಟಿದ್ದೀನಿ. ಯಾಕೆ ನಾವಿಬ್ಬರೂ ಮೀಟ್​ ಮಾಡ್ಬಾರ್ದು.?” ಅಂತ ಸೆಪ್ಟೆಂಬರ್​ 8 2016ರಲ್ಲಿ ಟ್ವೀಟ್​ ಮಾಡಿದ್ರಂತೆ. ಅದಕ್ಕೆ ಪ್ರಿಯಾಂಕ ”ನನ್ನ ಟೀಂ, ನನ್ನ ಅಭಿಮಾನಿಗಳು ಈ ಮೆಸ್ಸೇಜ್​ನ ನೋಡ್ತಾ ಇರ್ತಾರೆ, ನೀವು ನನ್ನ ಮೊಬೈಲ್‌ಗೆ ಯಾಕ್‌ ಟೆಕ್ಸ್ಟ್​ ಮಾಡ್ಬಾರ್ದು” ಅಂತ ಪ್ರಿಯಾಂಕ ರಿಪ್ಲೈ ಕೊಟ್ರಂತೆ. ​ ​ ​ ​ಇವರಿಬ್ಬರಲ್ಲಿ ಫಸ್ಟ್​ ಪ್ರಪೋಸ್​ ಮಾಡಿದ್ದು ಯಾರು.?ಇನ್ನೂ ಇಷ್ಟೆಲ್ಲಾ ಕ್ಲೋಸ್​ ಆಗಿ ಮೂವ್​ ಆಗಿದ್ದವರಿಗೆ, ಪ್ರಪೋಸ್​ ಮಾಡೋದೇನು ಅಷ್ಟ್​ ಕಷ್ಟ ಆಗಿರ್ಲಿಲ್ಲ. ಯಾಕಂದ್ರೆ, ಇವರಿಬ್ಬರ ನಡುವೆ ಅಷ್ಟು ಕ್ಲೋಸ್​ನೆಸ್​ ಬಿಲ್ಡ್​ ಆಗಿತ್ತು. ವೆನಿಟಿ ಆಸ್ಕರ್ಸ್​ ಫಂಕ್ಷನ್​ನಲ್ಲಿ ಇವರಿಬ್ಬರು ಮತ್ತೆ ಮೀಟ್​ ಆಗ್ತಾರೆ.ಇವರಿಬ್ಬರು ಒಟ್ಟಿಗೇ ಪಾರ್ಟಿ​ ಮಾಡ್ತಾ ಇರ್ತಾರೆ, ಆಗ್ಲೇ, ನಿಕ್​ ಜೋನ್ಸ್​, ವೈನ್​ನ ಕೆಳಗಿಟ್ಟು, ಎಲ್ಲರ ಮುಂದೆ ಮಂಡಿ ಊರಿ, ಪ್ರಪೋಸ್ ಮಾಡ್ತಾರೆ. ​ಪ್ರಪೋಸ್​ ಮಾಡಿ 45 ಸೆಕಂಡ್​ಗೆ ಪ್ರಿಯಾಂಕ ಓಕೆ ” ಅಂದಿದ್ರಂತೆ. ಇದನ್ನ ಅಂತರಾಷ್ಟ್ರೀಯ ನಿಯತಕಾಲಿಕೆಗೆ ಪ್ರಿಯಾಂಕ ಹೇಳಿದ್ದಾರೆ.ಫ್ಯಾಮಿಲಿ ಮೀಟ್​ನಲ್ಲಿ, ನಿಕ್​ ಪಿಗ್ಗಿಗೆ ‘‘ಕಿಸ್’’​ ಮಾಡಿದ್ರಾ?ಪ್ರಪೋಸ್​ ಆದ್ಮೇಲೆ, ಪ್ರಿಯಾಂಕ, ನಿಕ್​ ಜೋನ್ಸ್​ರನ್ನ ತಮ್ಮ ಮನೆಗೆ ‘ಗ್ರೀಟ್​’ ಮಾಡಿದ್ರಂತೆ. ಪಿಗ್ಗಿ ಅವರ ತಾಯಿಯನ್ನ ಮೀಟ್​ ಮಾಡೋಕೆ ನಿಕ್​ ಬಂದಿದ್ರಂತೆ. ಮೀಟ್​ ಗ್ರೀಟ್​ ಆದ್ಮೇಲೆ, ಪ್ರಿಯಾಂಕ, ನಿಕ್​ರಿಂದ ಕಿಸ್ ಎಕ್ಸ್​ಪೆಕ್ಟ್​ ಮಾಡಿದ್ರಂತೆ. ಬಟ್​, ನಿಕ್​ ಕಿಸ್​ ಮಾಡಿಲ್ಲ, ಬದಲಾಗಿ ಪ್ರಿಯಾಂಕಾ ಬೆನ್ನು ತಟ್ಟಿ ಹೊರಟರಂತೆ. ಯಾಕಂದ್ರೆ, ಅಲ್ಲಿ ಪಿಗ್ಗಿ ಅವರ ತಾಯಿ ಇದ್ರಂತೆ. ಅವರಿಗೆ ರೆಸ್ಪೆಕ್ಟ್​ ಕೊಡ್ಬೇಕು ಅಂತ ಹೇಳಿ ಕಿಸ್​ ಮಾಡ್ದೇ ಹೋಗಿದ್ರಂತೆ.ಇಷ್ಟ್ ದಿನ, ಈ ಇಬ್ಬರ ಜೋಡಿಯಲ್ಲಿ, ಯಾರು ಯಾರಿಗೆ ಪ್ರಪೋಸ್​ ಮಾಡಿದ್ರು ಅನ್ನೋ ಪ್ರಶ್ನೆ ಕಾಡ್ತಿತ್ತು. ಆದ್ರೀಗ, ಈ ಪ್ರಶ್ನೆಗೆ ಫುಲ್​ ಸ್ಟಾಪ್ ಬಿದ್ದಿದೆ. ಡಿಸೆಂಬರ್‌ 1 ಮತ್ತು 2 ರಂದು ಜೋಧ್‌ಪುರ್‌ನಲ್ಲಿ ನಡೆಯಲಿರುವ ನಿಕ್​ ಜೋನಾಸ್​ ಮತ್ತು ಪ್ರಿಯಾಂಕ ಚೋಪ್ರಾ ಅದ್ದೂರಿ ವಿವಾಹ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!