Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ರೈತರು ಅವರ ಹಕ್ಕು ಕೇಳ್ತಿದ್ದಾರೆ ಫ್ರೀ ಗಿಫ್ಟ್ ಅಲ್ಲ-ರಾಗಾ..

ರೈತರು ಅವರ ಹಕ್ಕು ಕೇಳ್ತಿದ್ದಾರೆ ಫ್ರೀ ಗಿಫ್ಟ್ ಅಲ್ಲ-ರಾಗಾ..

ನವದೆಹಲಿ: ಬೆಂಬಲ ಬೆಲೆ ನಿಗದಿ, ಸ್ವಾಮಿನಾಥನ್​​ ವರದಿ ಜಾರಿಗೊಳಿಸುವಂತೆ ರೈತರು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ​, ಗುಜರಾತ್​, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶದಿಂದ ಆಗಮಿಸಿದ್ದ 1ಲಕ್ಷಕ್ಕೂ ಹೆಚ್ಚು ರೈತರು ನಮಗೆ ಅಯೋಧ್ಯೆ ಬೇಡ ರೈತರ ಸಾಲ ಮನ್ನಾ ಮಾಡಿ ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೇವೆ ಅಂತಾ ರಾಹುಲ್ ರೈತರಿಗೆ ಭರವಸೆ ನೀಡಿದ್ರು. ಜಂತರ್​​ಮಂತರ್​ನಲ್ಲಿ ರೈತರ ಪರವಾಗಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. 15 ಶ್ರೀಮಂತ ಉದ್ಯಮಿಗಳ ಸುಮಾರು 3.5 ಲಕ್ಷ ಕೋಟಿ ಸಾಲಮನ್ನಾ ಮಾಡುವ ಪ್ರಧಾನಿ ಮೋದಿಜಿಗೆ ದೇಶದ ರೈತರ ಸಾಲಮನ್ನಾ ಮಾಡಲು ಯಾಕೆ ಸಾಧ್ಯವಿಲ್ಲ ಅಂತಾ ಪ್ರಶ್ನಿಸಿದ್ದಾರೆ. ರೈತರು ಮೋದಿಯಿಂದ ಫ್ರೀ ಗಿಫ್ಟ್ ಕೇಳುತ್ತಿಲ್ಲ, ಬದಲಾಗಿ ಅವರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ ಅಂತಾ ರೈತರ ಪರವಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!