Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ರೈತರು ಹಾಗೂ ಹಾಲು ಉತ್ಪಾದಕರ ಹಿತ ಕಾಪಾಡಲು ಸರ್ಕಾರಕ್ಕೆ ರೈತ ಮುಖಂಡರ ಆಗ್ರಹ.

ರೈತರು ಹಾಗೂ ಹಾಲು ಉತ್ಪಾದಕರ ಹಿತ ಕಾಪಾಡಲು ಸರ್ಕಾರಕ್ಕೆ ರೈತ ಮುಖಂಡರ ಆಗ್ರಹ.

ಮಂಡ್ಯ: ಕೇಂದ್ರ ಸರ್ಕಾರವು ಹೈನು ಉತ್ಪನ್ನಗಳನ್ನು ವಿದೇಶಗಳಿಂದ ರಫ್ತು ಮಾಡಲು ಅನುಮತಿ ನೀಡುತ್ತಿರುವುದರಿಂದ ರಾಷ್ಟದ ಹೈನುಗಾರಿಕೆ ಉದ್ಯಮದ ಮೇಲೆ ದುಷ್ಪರಿಣಾಮ ಬೀರಲಿದ್ದು 15ಕೋಟಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋಧಿ ಅವರು ಹೊರ ರಾಷ್ಟ್ರಗಳು ಹೈನುಗಾರಿಕೆ ಉತ್ಪನ್ನಗಳು ಹಾಗೂ ಹಾಲನ್ನು ರಫ್ತು ಮಾಡಲು ನೀಡಿರುವ ಅನುಮತಿಯನ್ನು ಹಿಂಪಡೆದು ದೇಶದ ರೈತರು ಹಾಗೂ ಹಾಲು ಉತ್ಪಾದಕರ ಹಿತ ಕಾಪಾಡುವ ಬದ್ಧತೆಯನ್ನು ಪ್ರದರ್ಶನ ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತ ಮುಖಂಡರು ಹಾಗೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ ಅವರು ಹೈನುಗಾರಿಕೆ ಉತ್ಪನ್ನಗಳನ್ನು ರಪ್ತು ಮಾಡಲು ಅನುಮತಿ ನೀಡಿರುವ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು..ಮಂಡ್ಯ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ರೈತವಿರೋಧಿಯಾಗಿದೆ. ತಾಲ್ಲೂಕಿನ ರೈತರು ಬೆಳೆದಿರುವ ಕಬ್ಬಿಗೆ 16 ತಿಂಗಳುಗಳಾಗುತ್ತಿದ್ದರೂ ಕಬ್ಬನ್ನು ಕಡಿಯಲು ರೈತರಿಗೆ ಆದೇಶ ನೀಡದೇ ನೆರೆಯ ತಾಲೂಕುಗಳ ಕಬ್ಬನ್ನು ತರಿಸಿಕೊಂಡು ತಾಲ್ಲೂಕಿನ ರೈತರನ್ನು ವಂಚಿಸುತ್ತಿದೆ.ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರು ಕೂಡಲೇ ಜಿಲ್ಲೆಯ ಬೇರೆ ತಾಲ್ಲೂಕಿನ ಕಬ್ಬು ತರಿಸಿ ಅರೆಯುವ ಪ್ರಮಾಣವನ್ನು ಕಡಿಮೆ ಮಾಡಿ ತಾಲ್ಲೂಕಿನ ರೈತರು ಬೆಳೆದಿರುವ ಕಬ್ಬನ್ನೇ ಅಧಿಕ ಪ್ರಮಾಣದಲ್ಲಿ ಅರೆಯಬೇಕು, ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಉಗ್ರವಾದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ರೈತನಾಯಕ ಮುದುಗೆರೆ ರಾಜೇಗೌಡ ಎಚ್ಚರಿಕೆ ನೀಡಿದರು.ಸಭೆಯಲ್ಲಿ ರಾಜ್ಯ ರೈತಸಂಘದ ಹಿರಿಯ ಉಪಾಧ್ಯಕ್ಷ ಕೆ.ಆರ್.ಜಯರಾಂ, ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರೈತಮುಖಂಡ ಮುದ್ದುಕುಮಾರ್, ಮನ್ ಮುಲ್ ನಿರ್ದೇಶಕರಾದ ಡಾಲುರವಿ ಭಾಗವಹಿಸಿ ಮಾತನಾಡಿದರು.ರೈತನಾಯಕ ಲಕ್ಷ್ಮೀಪುರಜಗಧೀಶ್, ಪಿಬಿ ಮಂಚನಹಳ್ಳಿ ನಾಗಣ್ಣಗೌಡ, ನಗರೂರು ಕುಮಾರ್, ಬೂಕನಕೆರೆ ನಾಗರಾಜು, ಚೌಡೇನಹಳ್ಳಿ ಪುಟ್ಟೇಗೌಡ, ನಾರಾಯಣಸ್ವಾಮಿ, ಮಹಿಳಾ ನಾಯಕಿ ಲಕ್ಷ್ಮೀದೇವಮ್ಮ, ನಂದಿನಿಜಯರಾಂ, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!